ಜೂ. 27 ರಂದು ಶಿಗ್ಗಾವಿ ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಸತ್ಯಾಗ್ರಹ: ಸ್ವಾಮೀಜಿ
ಲೋಕದರ್ಶನ ವರದಿ
ಶಿಗ್ಗಾವಿ09 : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸುಮಾರು ಇಪ್ಪತ್ತು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದರೂ ಮನ್ನಣೆ ನೀಡದ ಕಾರಣ ಇದೇ ಜೂ. 27 ರಂದು ಶಿಗ್ಗಾವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದೆ ಸತ್ಯಾಗ್ರಹ ಹಮ್ಮಿಕೊಂಡಿದ್ದು ಸಿಎಂ ನಿವಾಸದ ಮುಂದೆ ಸತ್ಯಾಗ್ರಹ ಕುಳಿತಾಗ ತೊಂದರೆಗಳು ಆಗಬಾರದು ಎಂದು ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆಯಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶಿಗ್ಗಾವಿ ಪಟ್ಟಣದಲ್ಲಿ ಕಟಗಿ ದೇವಸ್ಥಾನದ ಸಭಾ ಭವನದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು ಸಿಎಂ ನಿವಾಸದ ಮುಂದೆ ಆರಂಭವಾದ ನಂತರ ಜಿಲ್ಲಾ ಘಟಕಗಳು ಸತ್ಯಾಗ್ರಹ ಮಾಡಲಿವೆ, ಸಿಎಂ ಅವರು ಮೀಸಲಾತಿ ಕೊಟ್ಟು ಸಮಾಜದ ಋಣ ತೀರಿಸಬೇಕಿದೆ ಜೊತೆಗೆ ಮೀಸಲಾತಿ ಕೊಡುವ ದಿನಾಂಕ ಘೋಷಣೆ ಮಾಡಬೇಕು. ಮೀಸಲಾತಿ ಕೊಡಲು ಆಗುವುದಿಲ್ಲ ಎಂದಾದ್ರೂ ಹೇಳಬೇಕು. ನೀವು ಹೀಗೆ ಆಶೀವರ್ಾದ ಮಾಡಿ, ನಾವು ಹೀಗೆಯೇ ಬೆಳೆಯುತ್ತ ಹೋಗುತ್ತೇವೆ ಎಂದಾದರೂ ಸ್ಪಷ್ಟವಾಗಿ ಹೇಳಲಿ, ನಾವು ಯಾವುದೇ ಕಾರಣಕ್ಕೂ ಸಿಎಂಗೆ ಮುಜುಗುರ ಮಾಡಲು ಹೋಗುವುದಿಲ್ಲ ನಮ್ಮ ಹೋರಾಟ ಮೀಸಲಾತಿಗಾಗಿ ಮೀಸಲಾತಿ ವಿಳಂಬ ಖಂಡಿಸಿ ಸಿಎಂ ಬೊಮ್ಮಾಯಿಯವರ ಸ್ವಕ್ಷೇತ್ರದಿಂದಲೇ ಹೋರಾಟ ಶುರು ಮಾಡುತ್ತಿದ್ದೇವೆ ಎಂದರು.
ನಮ್ಮ ಸಮಾಜದ ನಿಯೋಗಕ್ಕೆ ಸ್ಪಂಧನೆ ಮಾಡಿದ್ದೀರಿ, ಮೀಸಲಾತಿ ವಿಚಾರವಾಗಿ ಸಿಎಂ ಅವರ ನಿಲುವನ್ನು ಜೂನ್ 27ರ ಒಳಗಾಗಿ ಪ್ರಕಟ ಮಾಡಬೇಕು, ಜಿಲ್ಲೆಯ ಎಲ್ಲ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಜೂನ್ 27ರಂದು ಸಿಎಂ ನಿವಾಸದ ಮುಂದೆ ಸತ್ಯಾಗ್ರಹ ಮಾಡಲಾಗುತ್ತಿದೆ ಸಿಎಂ ನಿವಾಸದ ಮುಂದೆ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಕ್ಕೆ ಸಿಎಂ ಅವರು ವಿಶಾಲ ಹೃದಯದ ಪ್ರತಿಕ್ರಿಯೆ ನೀಡಿದ್ದಾರೆ, ಮೀಸಲಾತಿ ವಿಚಾರದಲ್ಲಿ ಸಿಎಂ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿತ್ತು, ಮೀಸಲಾತಿ ವಿಚಾರದಲ್ಲಿ ಸರಕಾರ ಸ್ಪಷ್ಟ ನಿಲುವು ತಾಳಬೇಕು, ನಾನು ಕೇವಲ ಚಳುವಳಿಯ ಒಬ್ಬ ಚಾಲಕ ಮಾತ್ರ. ನಮ್ಮ ಹಿಂದೆ ಇಡಿ ಸಮಾಜವಿದೆ, ನಮ್ಮ ಸಮಾಜದ ಶಾಸಕರುಗಳು ಅಪ್ರತ್ಯಕ್ಷ ನಮಗೆ ಬೆಂಬಲ ಕೊಟ್ಟಿದ್ದಾರೆ, ನಮ್ಮ ಸಮಾಜದ ಮೀಸಲಾತಿ ಚಳುವಳಿಗಾರರ ಸಭೆ ಕರೆದು ಸಿಎಂ ಅವರು ಸ್ಪಷ್ಟ ನಿಲುವನ್ನು ಹೇಳುವ ಪ್ರಯತ್ನ ಮಾಡಬೇಕು, ಇಂದು ಸ್ಪಂಧನೆ ಮಾಡಿದ್ದಾರೆ, ಆ ಸ್ಪಂಧನೆ ಘೋಷಣೆ ಆಗುವಷ್ಟರಮಟ್ಟಿಗೆ ಸಿಎಂ ಗಟ್ಟಿ ನಿಧರ್ಾರ ತೆಗೆದುಕೊಳ್ಳಲಿ ಎಂಬ ಒತ್ತಾಸೆಯನ್ನು ಈ ಸಂದರ್ಭದಲ್ಲಿ ಹೇಳಲು ಇಚ್ಛೆಪಡುತ್ತೇನೆ ಎಂದರು