ಸಂತೋಷಭಟ್ಟ ಪೂಜಾರ ಸಹಾಯ ಶ್ಲಾಘನೀಯ: ಪೂಜಾರ
ರಾಣಿಬೆನ್ನೂರ 06: ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚು ಹರಡುತ್ತಿದ್ದು, ಇದರಿಂದ ರೋಗಿಗಳ ಆರೋಗ್ಯ ರಕ್ಷಣೆ ಮಾಡಲು ಸಕರ್ಾರದ ಜೊತೆ ಕೈಜೋಡಿಸಲು ಮುಂದಾಗಿ ಅಂಬ್ಯುಲೆನ್ಸ್ ನೆರವು ನೀಡಿರುವ ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಅವರ ಸಹಾಯ ಶ್ಲಾಘನೀಯ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಇಲ್ಲಿನ ತಾಲೂಕ ಪಂಚಾಯಿತಿ ಆವರಣದಲ್ಲಿ ಬುಧವಾರ ಸಹಾಯವಾಣಿ ಬಿಡುಗಡೆ ಹಾಗೂ ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಅವರು ತಾತ್ಕಾಲಿಕವಾಗಿ ರೋಗಿಗಳ ಸೇವೆಗೆ ನೀಡಿರುವ ಅಂಬ್ಯುಲೆನ್ಸ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರೋನಾ ಸೋಂಕಿತರಿಗೆ ಹುಣಸಿಕಟ್ಟಿ ರಸ್ತೆಯ ಬಾಲಕರು ವಸತಿ ನಿಲಯದಲ್ಲಿ 100 ಬೆಡ್ ಹಾಗೂ ಇದರ ಸಮೀಪದ ಇನ್ನೊಂದು ಬಾಲಕರ ವಸತಿ ನಿಲಯದಲ್ಲಿ 60 ಬೆಡ್ ಹಾಸಿಗೆಯ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಹೆಚ್ಚುವರಿಯಾಗಿ 10 ಬೆಡ್ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸೋಂಕು ತಗಲಿದ ರೋಗಿಗಳು ಸಹಾಯವಾಣಿ ನಂ 08373261313 ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದರು.ಕರೋನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ತಡೆಗಟ್ಟಲು ಸಕರ್ಾರ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಂಡು 15 ದಿನಗಲ ಕಾಲ ಕರೊನಾ ಕಫ್ಯರ್ೂ ಜಾರಿಗೆ ತಂದಿದೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಸಹಕಾರ ನೀಡಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು. ಅತಿ ಅವಶ್ಯವಿದ್ದವರು ಮಾತ್ರ ಮಾಸ್ಕ್ ಧರಿಸಿಕೊಂಡು ಹೊರಗಡೆ ಬರಬೇಕು ಎಂದರು.
ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಮಾತನಾಡಿ, ದೇವರಗುಡ್ಡ ಗ್ರಾಮದ ಸುತ್ತಮುತ್ತ ಗ್ರಾಮಗಳ ಆರೋಗ್ಯ ರಕ್ಷಣೆ ಮಾಡಲು ಕಳೆದ ನಾಲ್ಕು ತಿಂಗಳ ಹಿಂದೆ ಈ ಅಂಬ್ಯುಲೆನ್ಸ್ ಖರೀಧಿಸಲಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ತಾಲೂಕಿನಲ್ಲಿ ಅತೀ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಸರ್ವಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶಾಸಕರ ಸುಪದರ್ಿಗೆ ತಾತ್ಕಾಲಿಕವಾಗಿ ನೀಡಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಸೋಂಕಿತರು ಪಡೆದುಕೊಳ್ಳಬೇಕು ಎಂದರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಸದಸ್ಯರಾದ ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ನ್ಯಾಯವಾದಿಗಳಾದ ಮಂಜುನಾಥ ಓಲೇಕಾರ, ಕೆ.ಶಿವಲಿಂಗಪ್ಪ, ಶಿವಕುಮಾರ ಮುದ್ದಪ್ಪಳವರ, ಬಿಜೆಪಿ ಮುಖಂಡ ಉಮೇಶ ಹೊನ್ನಾಳಿ, ಸತೋಷಕುಮಾರ ಮಾಟೀಲ, ದಿಪಕ ಹರಪನಹಳ್ಳಿ, ವಿಶ್ವನಾಥ ಪಾಟೀಲ, ಬಸವರಾಜ ಕೇಲಗಾರ, ಪ್ರಕಾಶ ಹೊರಕೇರಿ, ಮಾಲತೇಶ ನಾಯರ, ಪಕ್ಕೀರಪ್ಪ ಐಗಳ, ಹನುಮಂತಪ್ಪ ನಾಯರ, ದೇವಪ್ಪ ವಾಸರದ, ನಾಗರಾಜ ಸಂಶಿ ಇದ್ದರು. ರಾಣಿಬೆನ್ನೂರ: ಇಲ್ಲಿನ ತಾಲೂಕ ಪಂಚಾಯಿತಿ ಆವರಣದಲ್ಲಿ ದೇವರಗುಡ್ಡ ಮಾಲತೇಶಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಸಂತೋಷಭಟ್ಟ ಪೂಜಾರ ಅವರು ತಾತ್ಕಾಲಿಕವಾಗಿ ರೋಗಿಗಳ ಸೇವೆಗೆ ನೀಡಿರುವ ಅಂಬ್ಯುಲೆನ್ಸ್ಗೆ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು