ಬೈಲಹೊಂಗಲ

ಪತ್ರಕರ್ತರು, ಏಜೆಂಟರು, ಪತ್ರಿಕೆ ಹಂಚುವವರಿಂದ ಶಾಸಕರಿಗೆ ಮನವಿ

ಪತ್ರಕರ್ತರು, ಏಜೆಂಟರು, ಪತ್ರಿಕೆ ಹಂಚುವವರಿಂದ ಶಾಸಕರಿಗೆ ಮನವಿ

ಬೈಲಹೊಂಗಲ 28: ಪತ್ರಕರ್ತರಿಗೆ ನಿವೇಶನ್ ಹಾಗೂ ಪತ್ರಿಕಾ ಏಜೆಂಟರು, ವಿತರಕ ಹುಡುಗರಿಗೆ ಸೈಕಲ್, ರೇಣಕೋಟ್ ಪೂರೈಸಬೇಕು ಎಂದು ಒತ್ತಾಯಿಸಿ ಬೈಲಹೊಂಗಲ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು. 

ಶಾಸಕರ ನಿವಾಸಕ್ಕೆ ತೆರಳಿದ ಪತ್ರಕರ್ತರು, ಏಜೆಂಟರು, ವಿತರಕ ಹುಡುಗರು ತಮಗಾಗುತ್ತಿರುವ ತೊಂದರೆ, ಸಮಸ್ಯೆಗಳನ್ನು ಶಾಸಕರಿಗೆ ತಿಳಿಸಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜೊತೆಗೆ ಪತ್ರಿಕಾ ರಂಗ ಒಂದಾಗಿದೆ. ಪತ್ರಕರ್ತರಿಗೆ, ಏಜೆಂಟರಿಗೆ, ವಿತರಕರಿಗೆ ಯಾವುದೇ ಸೌಲಭ್ಯ ಇಲ್ಲವಾಗಿದೆ. 

ಮಳೆ, ಚಳಿ, ಗಾಳಿ, ಬಿಸಿಲು ಲೆಕ್ಕಿಸದೆ ಪ್ರತಿದಿನ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಮಳೆ ಸಂದರ್ಭದಲ್ಲಿ ಪತ್ರಿಕೆ ಹಾಕುವುದು ಬಹಳ ತೊಂದರೆ ಆಗುತ್ತಿದೆ. ಕೂಡಲೇ ಮನವಿಗೆ ಸ್ಪಂದಿಸಿ ಪತ್ರಿಕಾ ಏಜೆಂಟರು, ವಿತರಕ ಹುಡುಗರಿಗೆ ಸೈಕಲ್, ರೇಣ್ ಕೋಟ್ ನೀಡಬೇಕು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನಿವೇಶನಗಳನ್ನು ನೀಡಿ ನೆರವಾಗಬೇಕು. ಸಕರ್ಾರದಿಂದ ದೊರೆಯುವ ಸವಲತ್ತಗಳನ್ನು ಕಲ್ಪಿಸಿಕೊಡಬೇಕು. ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿ ಹೊಂದಿದ ಸ್ಥಳೀಯ ಪತ್ರಕರ್ತರಿಗೆ  ಬಸ್ ಪಾಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. 

ಶಾಸಕ ಮಹಾಂತೇಶ ಕೌಜಲಗಿ ಮನವಿ ಸ್ವೀಕರಿಸಿ ಮಾತನಾಡಿ ಪತ್ರಕರ್ತರ ಸಂಘದ ಸದಸ್ಯರು ನೀಡಿದ ಮನವಿಗೆ ಸ್ಪಂದಿಸಿ ತುರ್ತು  ಅಗತ್ಯ ಇರುವ ಸೈಕಲ್, ರೇಣಕೋಟ್ ಪೂರೈಸುವುದು, ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಏಜೆಂಟರಾದ ಕುಮಾರ ರೇಶ್ಮಿ, ಮಂಜುನಾಥ ಜ್ಯೋತಿ, ಶರೀಫ ನದಾಫ, ಪ್ರಕಾಶ ಕಲಾದಗಿ, ವಿಠ್ಠಲ ಕಲಾದಗಿ, ರವಿ ಕಲಾದಗಿ, ಪತ್ರಕರ್ತರಾದ ಮಹಾಂತೇಶ ರಾಜಗೋಳಿ, ರವಿಕಿರಣ ಯಾತಗೇರಿ, ರಾಜು ಬಡಿಗೇರ, ಯುನಸ್ ಬಡೆಘರ, ರವಿ ಹುಲಕುಂದ, ಗುರು ಕಡತನಾಳ, ಶಿವು ಬಿಸಗುಪ್ಪಿ, ಅನೇಕರು ಇದ್ದರು.ಬೈಲಹೊಂಗಲದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಪತ್ರಿಕೆ ಹಂಚುವ ಹುಡುಗರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ವಿವಿಧ ಬೇಡಿಕೆ ಈಡೇರಿಸುವಂತೆ ಭಾನುವಾರ ಮನವಿ ಸಲ್ಲಿಸಿದರು.

ಸುದ್ದಿ ಓದಿ