ರಾಮು ಮುದಿಗೌಡ್ರ ನಿಧನಕ್ಕೆ ಪತ್ರಕರ್ತರ ಸಂಘ ತೀರ್ವ ಸಂತಾಪ
ಶಿಗ್ಗಾವಿ 02: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರೇಕೆರೂರಿನ ಹಿರಿಯ ಪತ್ರಿಕಾ ವರದಿಗಾರರಾದ ರಾಮು ಮುದಿಗೌಡ್ರ ನಿಧನಕ್ಕೆ ಶಿಗ್ಗಾವಿ ಕರ್ನಾಟಕ ಪತ್ರಕರ್ತರ ಸಂಘ ತೀರ್ವ ಸಂತಾಪ ಸೂಚಿಸಿ ಪಟ್ಟಣದ ಸಂಘದ ಕಾರ್ಯಲಯಲ್ಲಿ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.
ಶ್ರದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ ಮಾತನಾಡಿ, ಹಿರಿಯ ವರದಿಗಾರ ರಾಮು ಮುದಿಗೌಡ್ರ ಅವರ ಅಕಾಲಿಕ ಮರಣದಿಂದ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ, ಅವರು ಪತ್ರಿಕಾ ರಂಗ ಅಲ್ಲದೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರು, ಭಗವಂತ ಅವರ ಕುಟುಂಬಕ್ಕೆ ದುಖಃವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ, ಅವರ ಕುಟುಂಬದ ಕಷ್ಟಕ್ಕೆ ಸರ್ಕಾರ ಸ್ಪಂದಿಸುವಂತಾಗಲಿ ಎಂದರು.
ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಮುಖ್ಯೋಪಾಧ್ಯಾಯನಿ ಸುಮಂಗಲಾ ದುರ್ಗದ ಮಾತನಾಡಿ, ಅವರ ಸಹೋದರಿಯ ಸಾವಿನ ಜೊತೆ ಇವರ ಸಾವು ಆ ಕುಟುಂಬಕ್ಕೆ ದೊಡ್ಡ ನೋವಾಗಿದೆ, ದೇವರು ಅವರು ಆತ್ಮಕ್ಕೆ ಚಿರಶಾಂತಿ ನೀಡಲಿ ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದರು.
ಸಮಾಜ ಸೇವಕ ಬಸನಗೌಡ ರಾಮನಗೌಡ್ರ ಮಾತನಾಡಿ ಸಮಾಜಕ್ಕೆ ಬೆಳಕು ಚಲ್ಲುವ ಪತ್ರಕರ್ತರ ಬದುಕು ಕತ್ತಲಾದಂತೆ ರಾಮು ಅವರ ನಿಧನದಿಂದ ಪತ್ರಿಕಾ ರಂಗಕ್ಕೆ ದೊಡ್ಡ ನಷ್ಟವಾಗಿದೆ, ದೇವರು ಅವರ ಅತ್ಮ ಚಿರಶಾಂತಿ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವರದಿಗಾರರಾದ ಸದಾಶಿವಯ್ಯಸ್ವಾಮಿ ಹಿರೇಮಠ, ಬಸವರಾಜ ಹಡಪದ, ಮುಂಜುನಾಥ ಕಮ್ಮಾರ, ಬಸವರಾಜ ಹೊಣ್ಣಣ್ಣವರ, ಶಿಕ್ಷಕರಾದ ಮಲ್ಲಮಗೌಡ ಪಾಟೀಲ್, ರಾಜೇಶ, ನಾಗರಾಜ, ಪರಶುರಾಮ ಹಿರುಲಾಲ್, ಜೋತಿ ಕಾಂಬ್ಲೆ, ವಿದ್ಯಾ ಅರಳಿಕಟ್ಟಿ ಸೇರಿದಂತೆ ಇತರರು ಇದ್ದರು.