ಮುದ್ದೆಬಿಹಾಲ್

ಹಾವು ಕಚ್ಚಿ ಅಸ್ವಸ್ಥ: ಚಿಕಿತ್ಸೆ ಫಲಕಾರಿಯಾಗದೇ ಸಾವು

ಹಾವು ಕಚ್ಚಿ ಅಸ್ವಸ್ಥ: ಚಿಕಿತ್ಸೆ ಫಲಕಾರಿಯಾಗದೇ ಸಾವು

ಪತ್ರಕರ್ತ, ಹೋರಾಟಗಾರ ಆಲಕೊಪ್ಪರ ಉಮೇಶ ಇನ್ನಿಲ್ಲ 

ಮುದ್ದೇಬಿಹಾಳ 25: ತಾಲೂಕಿನ ನಾಲತವಾಡ ಪಟ್ಟಣದ ಜಗದೇವ ನಗರದ ನಿವಾಸಿ, ಪತ್ರಕರ್ತ, ದಲಿತ ಸಂಘರ್ಷ ಸಮಿತಿ ಮುಖಂಡ ಉಮೇಶ ಶಂಕ್ರ​‍್ಪ ಆಲಕೊಪ್ಪರ ಶುಕ್ರವಾರ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. 

 ಕಳೆದ ಕೆಲವು ದಿನಗಳ ಹಿಂದೆ ಅವರಿಗೆ ಹಾವು ಕಚ್ಚಿತ್ತು. ಆಗ ಅಸ್ವಸ್ಥ್ಯಗೊಂಡಿದ್ದ ಅವರನ್ನು ಬಾಗಲಕೋಟ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. 

ಅವರು ದಿನಪತ್ರಿಕೆ ವರದಿಗಾರರಾಗಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಎಲ್ಲರೊಂದಿಗೆ ಸ್ನೇಹ ಭಾವದಿಂದ ಬೆರೆಯುತ್ತಿದ್ದರು. ನಾಲತವಾಡ ಪಟ್ಟಣದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಉಮೇಶ ಹಾಗೂ ಅವರ ಸ್ನೇಹಿತರು ನಾಲತವಾಡದಿಂದ ಮುದ್ದೇಬಿಹಾಳದವರೆಗೂ ಪಾದಯಾತ್ರೆ ಮಾಡಿದ್ದರು. ಶಿಕ್ಷಣ, ಸಾಮಾಜಿಕ, ಸಂಘಟನೆ ಸೇರಿದಂತೆ ಸಣ್ಣ ವಯಸ್ಸಿನಲ್ಲೇ ಪ್ರಬುದ್ಧ ಹೋರಾಟಗಾರಾಗಿ ರೂಪುಗೊಂಡಿದ್ದರು. 

ಸಂತಾಪ: ಉಮೇಶ ಆಲಕೊಪ್ಪರ ನಿಧನಕ್ಕೆ ಶಾಸಕ ಸಿ.ಎಸ್‌.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಆಕ್ಸಫರ್ಡ್‌ ಪಾಟೀಲ್ಸ್‌ ಸಮೂಹ ಶಿಕ್ಷಣ ಸಂಸ್ಥೆ ಚೇರಮನ್ ಎಂ.ಎಸ್‌.ಪಾಟೀಲ್, ಆಕ್ಸಫರ್ಡ್‌ ಮಠ್ಸ್‌ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಜಿ.ಮಠ, ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್‌.ಮದರಿ, ಬಿಜೆಪಿ ಮುಖಂಡ ಎಂ.ಎಸ್‌.ಪಾಟೀಲ್, ಮುತ್ತು ಸಾಹುಕಾರ ಅಂಗಡಿ, ಕಾಂಗ್ರೆಸ್ ಮುಖಂಡ ರಾಯನಗೌಡ ತಾತರೆಡ್ಡಿ, ಶಂಕರರಾವ ದೇಶಮುಖ, ಮಹಾಂತೇಶ ಗಂಗನಗೌಡರ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಶಂಕರ ಹೆಬ್ಬಾಳ, ಉಪಾಧ್ಯಕ್ಷ ಅನೀಲ ತೇಲಂಗಿ, ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ, ಪತ್ರಕರ್ತ ನಾರಾಯಣ ಮಾಯಾಚಾರಿ, ಚೇತನ ಶಿವಶಿಂಪಿ, ಪುಂಡಲೀಕ ಮುರಾಳ, ಪರಶುರಾಮ ಕೊಣ್ಣೂರ, ಯೂನೂಸ ಮೂಲಿಮನಿ, ಮಹೆಬೂಬ ಹಳ್ಳೂರ, ಕಾಶೀನಾಥ ಬಿರಾದಾರ, ಮಹಾಂತೇಶ ನೂಲಿನವರ, ಗುರುನಾಥ ಕತ್ತಿ, ಲಾಡ್ಲೇಮಶ್ಯಾಕ ನದಾಫ, ಎಸ್ಸಿಎಸ್ಟಿ ದೌರ್ಜನ್ಯ ತಡೆ ಸಮೀತಿ ಸದಸ್ಯ ಮಲ್ಲು ತಳವಾರ, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ, ಪ್ರಶಾಂತ ಕಾಳೆ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ