ಸುಮಾರು 500 ಜನ ಈ ಮೇಳದ ಲಾಭಾರ್ಥಿಗಳಾಗಿದ್ದಾರೆ: ರಾಜಶೇಖರ ಚಿಕ್ಕಮಠ
ಕಾಗವಾಡದಲ್ಲಿ ಉದ್ಯೋಗ ಮೇಳ;
ಕಾಗವಾಡ 23: ಬೆಳಗಾವಿಯ ಕೌಶಲ್ಯ ಅಭಿವೃದ್ಧಿ, ಉದ್ದಿಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಇನ್ನುಳಿದ ಸಂಘ ಸಂಸ್ಥೆಗಳ ಸಹಕಾರದಿಂದ ರವಿವಾರ ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಸುಮಾರು 500 ಜನ ಲಾಭಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆಂದು ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಅಧಿಕಾರಿ ರಾಜಶೇಖರ ಚಿಕ್ಕಮಠ ತಿಳಿಸಿದ್ದಾರೆ.
ಅವರು, ರವಿವಾರ ದಿ. 23 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಬೆಳಗಾವಿಯ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶ್ರೀ ಮಲ್ಲಿಕಾರ್ಜುನ ವಿದ್ಯಾಪೀಠ ಮತ್ತು ಸ್ಥಳೀಯ ಶಿವಾನಂದ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಈ ಮೇಳವನ್ನು ಯಶಸ್ವಿಗೊಳಿಸಲು ಬೆಳಗಾವಿಯ ಶ್ರೀ ಮಲ್ಲಿಕಾರ್ಜುನ ವಿದ್ಯಾಪೀಠದ ಗುರುಗೌಡ ಪಾಟೀಲ ಹಾಗೂ ಶಿವಾನಂದ ಮಹಾವಿದ್ಯಾಲಯದ ವಿಶೇಷ ಸಹಕಾರವಿದೆ. ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಬೇರೆ-ಬೇರೆ ಯೋಜನೆಗಳು ಇದ್ದು, ಅವುಗಳನ್ನು ನಿಮ್ಮ ಮುಖಾಂತರ ರೂಪಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.
ಉದ್ಯೋಗ ವಿನಿಮಯ ಕಚೇರಿಯ ಮುಖ್ಯಾಧಿಕಾರಿ ಗುರುಪಾದಯ್ಯ ಹಿರೇಮಠ ಇವರು ಮಾತನಾಡಿ, ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅನೇಕ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದು, 30 ಹೆಸರಾಂತ ಕಂಪನಿಗಳು ಇಲ್ಲಿ ಉದ್ಯೋಗ ನೀಡಲು ಮುಂದಾಗಿವೆ. ಇದರ ಲಾಭ ಎಲ್ಲ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕೆಂದು ಹೇಳಿದರು.
ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಆರ.ಕರ್ಕಿ, ಗುರುಗೌಡ ಪಾಟೀಲ್ ಮಾತನಾಡಿದರು.
ಈ ವೇಳೆ ಬೆಳಗಾವಿ ಜಿಲ್ಲೆ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿಗಳಾದ ಜಿ.ಎಸ್. ಕೋರಸಗವ, ಕೌಶಲ್ಯ ಅಭಿವೃದ್ಧಿ ವಿಭಾಗದ ಅರುಣಕುಮಾರ ಮಾಡೂಳ್ಳಿ, ಶಿವರೆಡ್ಡಿ ವೈ. ಸಂಯೋಜನಾಧಿಕಾರಿ ಸಂತೋಷ ನಾವಲಗಿ, ಶಿವಾನಂದ ಮಹಾವಿದ್ಯಾಲಯದ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ, ಆಡಳಿತ ಅಧಿಕಾರಿ ಪ್ರೊ. ವ್ಹಿ.ಎಸ್. ತುಗ್ಶೆಟ್ಟಿ, ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸ್ವಪ್ನೀಲ ಪಾಟೀಲ, ವೀರಶೈವ ಪಂಚಮಸಾಲಿ ಚಿಕ್ಕೋಡಿ ವಿಭಾಗ ಅಧ್ಯಕ್ಷ ಅಣ್ಣಪ್ಪ ಹಳಿಜೋಳ, ಭಾರತಿ ಬಿದರಿ, ಪ್ರೊ. ಅಶೋಕ್ ಪಾಟೀಲ, ಪ್ರೊ. ಎಸ್.ಎಂ. ಘೋರೆ್ಡ, ಪ್ರೊ. ವ್ಹಿ.ವ್ಹಿ. ಪಾಟೀಲ, ಪ್ರೊ. ಎಸ್.ಎಸ್. ಫಡತರೆ ಸೇರಿದಂತೆ ಅನೇಕ ಗಣ್ಯರು, ಉದ್ಯೋಗಾಕಾಂಕ್ಷಿಗಳು, ಲಾಭಾರ್ಥಿಗಳು ಉಪಸ್ಥಿತರಿದ್ದರು.