ಜಮಖಂಡಿ

ಲಯನ್ಸ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಿರಲಿ ಆಯ್ಕೆ

ಲಯನ್ಸ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಿರಲಿ ಆಯ್ಕೆ

ಜಮಖಂಡಿ 29: ಲಯನ್ಸ್‌ ಸಂಸ್ಥೆ ಜಮಖಂಡಿಯ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಿನ್ಮಯ ಜಿರಲಿ, ಕಾರ್ಯದರ್ಶಿಯಾಗಿ ಪ್ರವೀಣ ಮೈಗೂರ, ಖಜಾಂಚಿಯಾಗಿ ಸುನೀಲ ಮುರಗೋಡ ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಕೌಜಲಗಿ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜೂ.30 ರಂದು ಮುರಗೋಡ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ, ಪದಗ್ರಹಣ ಮಾಡಲು ಕುಡಚಿ ಮಾಜಿ ಶಾಸಕ ಪಿ.ರಾಜೀವ, ಜಿಲ್ಲಾ ಲಯನ್ಸ್‌ ಖಜಾಂಚಿ ಉದಯ ಬಾಡ್ಕರ ಭಾಗವಹಿಸಲಿದ್ದಾರೆ ಎಂದರು. 

ನೂತನ ಅಧ್ಯಕ್ಷ ಚಿನ್ಮಯ ಜಿರಲಿ ಮಾತನಾಡಿ, ಈ ವರ್ಷದಲ್ಲಿ ಲಯನ್ಸ್‌ ಸಂಸ್ಥೆಯಿಂದ ಬಡವರಿಗೆ ಅನುಕೂಲವಾಗಲು ಆಸ್ಪತ್ರೆಯನ್ನು ಕಟ್ಟಲು ಕ್ರೀಯಾಯೋಜನೆ ಹಾಕಿಕೊಂಡಿದ್ದೆವೆ, ಉಚಿತ ಆರೋಗ್ಯ ತಪಾಸಣೆ, ಕಣ್ಣು ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಪ್ರತಿ ತಿಂಗಳು ಸಸಿ ನೆಡುವ ಕಾರ್ಯಕ್ರಮ, ಪರಿಸರ ಜಾಗೃತಿ, ಕೆಲ ಶಾಲಾಮಕ್ಕಳಿಗೆ ಸಮವಸ್ತ್ರ, ರಸ್ತೆ ಅಪಘಾತ ತಡೆಗಟ್ಟಲು ಜಾಗೃತಿ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದರು. 

ಡಾ.ಎಚ್‌.ಜಿ.ದಡ್ಡಿ ಮಾತನಾಡಿ, ವಿವಿಧ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ, ಹಸಿವು ನಿವಾರಣೆ, ಸಕ್ಕರೆ ಖಾಯಿಲೆ ಹರಡದಂತೆ ಜಾಗೃತಿ, ಯುವ ಜನರಿಗೆ ತರಬೇತಿ ಸೇರಿದಂತೆ ಜಗತ್ತಿನಾದ್ಯಂತ ಲಯನ್ಸ್‌ ಕಾರ್ಯನಿರ್ವಹಿಸುತ್ತಿದೆ ಎಂದರು. 


ಸುದ್ದಿ ಓದಿ