ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮ
ಜಮಖಂಡಿ 22: ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಆದರ್ಶನಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳುವದು ಮುಖ್ಯವಾಗಿದೆ ಎಂದು ಮಾಜಿ ಜಿ,ಪಂ, ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ತಾಲೂಕ ಆಡಳಿತ, ಅಂಬಿಗರ ಚೌಡಯ್ಯ ಸಂಘದ ಸಹಯೋಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಸಾಕಷ್ಟು ಜನ ಹುಟ್ಟುತ್ತಾರೆ,ಸಾವನ್ನಪಿದ್ದಾರೆ ಆದರೆ ಸಮಾಜಕ್ಕೆ, ದೇಶಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ, ದೇಶಕ್ಕೆ ಒಳಿತನ್ನು ಮಾಡಿದವರ ಮಹಾತ್ಮರ ಜಯಂತಿಯನ್ನು ಮಾತ್ರ ಆಚರಿಸಲು ಸಾಧ್ಯ. ಮಹಿಳೆಯರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕಲಿಸುವ ಕಾರ್ಯವನ್ನು ಮಾಡಬೇಕು. ಹಿಂದುಳಿದ ಸಮಾಜವು ಯಾವಾಗ ಶಿಕ್ಷಣವಂತರಾಗುತ್ತಾರೆ ಅವಾಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದರು.
ಡಾ,ಬಾಬಾಸಾಹೇಬ ಅಂಬೇಡ್ಕರ, ಬಸವಣ್ಣನವರು ಸಮಾಜದಲ್ಲಿ ಜಾತಿ-ಮತಗಳನ್ನು ಹೋಗಲಾಡಿಸಿ. ಸಮಾನತೆಗೆ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಅಂತರ ಜಾತಿ ವಿವಾಹವನ್ನು ಮಾಡಿಸಿ. ಸಮಾನತೆಯನ್ನು ತಂದ ಅಣ್ಣ ಬಸವಣ್ಣನವರು. ಅಂಬಿಗರ ಸಮಾಜ ಅತೀ ಹಿಂದುಳಿದ ಸಮಾಜವಾಗಿದು. ಎಸ್,ಟಿ ಮೀಸಲಾತಿಗೆ ಪಟ್ಟಗೆ ಕೇಲ ವರ್ಷಗಳ ಹಿಂದೆಯೇ ಸೇರೆ್ಡಯಾಗಬೇಕಿತು. ಅಂಬಿಗರ ಸಮಾಜದಲ್ಲಿ ಹೊಂದಾಣಿಕ್ಕೆ ಕೊರತೆಯಿಂದ ಹಿಂದೆ ಉಳಿಯಬೇಕಾಗಿತು. ಇವಾಗ ಎಸ್,ಟಿ ಮೀಸಲಾತಿ ಪಟ್ಟಿಗೆ ಸೇರೆ್ಡಯಾಗಿದ್ದು ಹೆಮ್ಮೆಯ ವಿಷಯವಾಗಿದೆ. ಸಮಾಜದಲ್ಲಿ ಯಾವುದೇ ಭಿನ್ನಾಭಿಪ್ರಾಯವಿದರೆ ಎಲ್ಲರೂ ಒಂದಾಗುವ ಬಾಳುವ ಕೆಲಸವನ್ನು ಮಾಡಿ. ತಮ್ಮ ಸಂಘಟನೆಯನ್ನು ಬಲಪಡಿಸಿಕೊಂಡು ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರು.
ಯಮನೂರ ಮೂಲಂಗಿ, ಈಶ್ವರ ವಾಳೇನ್ನವರ, ಪೀರಾ ಖಾದ್ರಿ, ದಿಲಾವರ ಶಿರೋಳ, ಸಂತೋಷ ತಳಕೇರಿ, ರಾಜು ಚಿಕ್ಕನಾಳ, ರವಿಕುಮಾರ ಬೆಳಗಲಿ, ಭೀಮಶಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಬಸವರಾಜ ಸೋಮಾಪೂರ ಉಪನ್ಯಾಸವನ್ನು ನೀಡಿದರು, ಓಲೇಮಠದ ಡಾ,ಚನ್ನಬಸವ ಶ್ರೀಗಳು ಆರ್ಶೀವಚನ ನೀಡಿದರು, ಗ್ರೇಡ್ 2 ತಹಶೀಲ್ದಾರ ಜೆ,ಸತೀಶಕುಮಾರ ಪ್ರಾಸ್ತಾವಿಕ ಮಾತನಾಡಿದರು, ರಾಜು ಹಡಗಲಿ ನಿರೂಪಿಸಿದರು, ಐಶ್ವರ್ಯ ಸಿಂಧೂರ ಪ್ರಾರ್ಥನಿಸಿದರು, ಸಿದ್ರಾಮ ಮೀಶಿ ಸ್ವಾಗತಿಸಿದರು, ಮಹೇಶ ಕೋಳಿ ವಂದಿಸಿದರು.