ದಾನ ಧರ್ಮದಿಂದ ಮಾನವ ಜನ್ಮ ಸಾರ್ಥಕ: ಬ್ರಹ್ಮನಂದ ಸರಸ್ವತಿ
ಬನವಾಸಿ 16: ಜಾತಿ ಭೇದವಿಲ್ಲದೇ ಎಲ್ಲರನ್ನು ತೂಗಿಸಿಕೊಂಡು ಹೋಗುತ್ತಿರುವ ಶ್ರೀ ಬಂಗಾರೇಶ್ವರ ಸೇವಾ ಟ್ರಸ್ಟ್ನ ಕಾರ್ಯ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳ ಕನ್ಯಾಡಿಯ ಶ್ರೀ ರಾಮಕ್ಷೇತ್ರದ ಧರ್ಮದರ್ಶಿ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮಿಜೀ ಆಶೀರ್ವಚನ ನೀಡಿದರು.
ಅವರು ಸಮೀಪದ ಗುಡ್ನಾಪೂರ ಗ್ರಾಮದಲ್ಲಿರುವ ಬಂಗಾರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ, ದೇಹವೆಂಬ ದೇವಾಲಯದಲ್ಲಿ ಜ್ಞಾನವೆಂಬ ದೀಪವನ್ನು ಹಚ್ಚಿದರೇ ಶ್ರೀ ಬಂಗಾರೇಶ್ವರನ ಸ್ವರೂಪ ಕಾಣಬಹುದು. ಮನುಷ್ಯನ ಜೀವನದಲ್ಲಿ ನಿಜವಾದ ಸುಖ, ಶಾಂತಿ, ನೆಮ್ಮದಿ ಸಿಗಬೇಕಾದರೆ ಸತ್ಸಂಗ ಮಾಡಬೇಕು ಸತ್ಸಂಗ ಮಾಡುವುದರಿಂದ ಕೇಳುವುದರಿಂದ ಮನಸ್ಸು ನಿರಳಾವಾಗುತ್ತದೆ. ದೇವರು ನಮಗೆ ಸಂಪತ್ತು ನೀಡುವುದು ಬಡವರಿಗೆ ದಾನ ಧರ್ಮ ಮಾಡಲಿ ಎಂದು ದಾನ ಧರ್ಮ ಮಾಡುವುದರಿಂದ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾನು ನನ್ನದು ಎನ್ನುತ್ತಾ ಸ್ವಾರ್ಥ ಆಸೆಯಲ್ಲಿ ಬದುಕುವುದರಿಂದ ಜೀವನದ ನೆಮ್ಮದಿ ಶಾಂತಿ ಹಾಳು ಮಾಡಿಕೊಳ್ಳುತ್ತೇವೆ. ಈ ರೀತಿಯ ಸತ್ಸಂಗಗಳಲ್ಲಿ ಪಾಲ್ಗೊಂಡು ದೇವರ ಸ್ಮರಣೆ ಮಾಡುವುದರಿಂದ ನಮಗೆ ಶ್ರೀರಕ್ಷೆಯಾಗುವುದು. ಸೃಷ್ಠಿಯ ಎಲ್ಲಾ ವಸ್ತುಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ ನಾವು ಬದುಕುವುದರೊಂದಿಗೆ ಇನ್ನೋಬ್ಬರಿಗೆ ಒಳ್ಳೆಯದನ್ನು ಬಯಸಬೇಕು ಇಂತಹ ಆಧ್ಯಾತ್ಮಿಕ ಸಪ್ತಾಹಗಳಲ್ಲಿ ಪಾಲ್ಗೋಳುವುದರಿಂದ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.
ವೇದಿಕೆಯಲ್ಲಿ ಅಂಡಗಿ ಗುರುಮಠದ ಕಲ್ಯಾಣ ಸ್ವಾಮಿಜೀ ಉಪಸ್ಥಿತರಿದ್ದರು. ಬಂಗಾರೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಬಿ.ಎಸ್.ಪಾತಾಳಿ, ಧರ್ಮದರ್ಶಿ ಈ.ಆರ್ ನಾಯ್ಕ್ ಮಾತನಾಡಿದರು. ನವೀನ ನಾಯ್ಕ್, ಎಚ್.ಕೆ. ನಾಯ್ಕ ಉಲ್ಲಾಳ, ಟಿ.ಬಿ.ನಾಯ್ಕ್, ಉಜಿರೆಯ ಪುರುಷ ಸಾಲ್ಯಾನ್, ಸುಧಾಕರ ನಾಯ್ಕ್, ಆನಂದ ನಾಯ್ಕ್ ಹಾಗೂ ಬಂಗಾರೇಶ್ವರ ಸೇವಾ ಟ್ರಸ್ಟ್ನ ಸದಸ್ಯರು ಇದ್ದರು. ಎನ್.ಬಿ. ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಶತಾಧಿಕ ಸಾಮೂಹಿಕ ಸತ್ಯನಾರಾಯಣ ಶನೇಶ್ವರ ವೃತ ಜರುಗಿತು. ಸಾವಿರಾರು ಭಕ್ತರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಜರುಗಿತು.