ಶಿಗ್ಗಾವ್

ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಗೆಲುವು: ವಿಜಯೋತ್ಸವ

ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಗೆಲುವು: ವಿಜಯೋತ್ಸವ

ಶಿಗ್ಗಾವಿ 14: ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಧಾರವಾಡ ಹಾವೇರಿ ಗದಗ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ ಗೆಲುವಿನ ಹಿನ್ನಲೆಯಲ್ಲಿ ತಾಲೂಕ ಭಾಜಪ ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ ನಂತರ ಸಿಹಿ ವಿತರಿಸಿ ವಿಜಯೋತ್ಸವವನ್ನು ಆಚರಿಸಲಾಯಿತು. 

ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದೀಜೀ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜನಪರ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ವಿದಾನ ಪರಿಷತ್ತ 12 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತ ನೀಡಿದ್ದು ಇದಕ್ಕೆ ಸಾಕ್ಷಿಯಾಗಿದೆ ಮುಂದಿನ ದಿನಗಳಲ್ಲಿ ಅಬಿವೃದ್ದಿ ಪರ್ವ ಪ್ರಾರಂಭವಾಗಲಿದೆ ಹಾಗೂ ಪ್ರದೀಪ ಶೆಟ್ಟರಗೆ ಮತನೀಡಿ ಜಯಗಳಿಸಲು ಹಾಗೂ ಬೊಮ್ಮಾಯಿಯವರ ಕೈ ಬಲಪಡಿಸಲು ಕಾರಣೀಕರ್ತರಾದ ಪುರಸಭೆ, ಗ್ರಾಮಪಂಚಾಯತಿ ಸದಸ್ಯರೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ರೇಣುಕನಗೌಡ ಪಾಟೀಲ, ಬಸವರಾಜ ನಾರಾಯಣಪೂರ, ಶರೀಫಸಾಬ ನಧಾಪ, ಡಾ. ಮಲ್ಲೇಶಪ್ಪ ಹರಿಜನ, ಹನುಮಂತಪ್ಪ ಮಾದರ, ಬಸನಗೌಡ ರಾಮನಗೌಡ್ರ, ಹನುಮಂತಪ್ಪ ಗುಳೇದ, ಪ್ರತೀಕ ಕೊಳೇಕರ, ಕಾಶೀನಾಥ ಕಳ್ಳೀಮನಿ, ಶಶೀಧರ ಹೊನ್ನಣ್ಣವರ, ಬಸವರಾಜ ಮೇಗಲಮನಿ, ಚೆನ್ನಪ್ಪ ಬಿಂದ್ಲಿ, ರಾಮಣ್ಣ ವಡ್ಡರ, ನಂದೀಶ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ