ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ ಭದ್ರವಾಗಿದೆ: .ಪಾಟೀಲ
ತಾಳಿಕೋಟಿ 11: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವ ಸಾವಿರಾರು ಕಾರ್ಯಕರ್ತರು ಜಿಲ್ಲೆಯಲ್ಲಿದ್ದಾರೆ ವಿಜಯಪುರ ಜಿಲ್ಲೆ ಮೊದಲಿನಿಂದಲೂ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ ನಮ್ಮ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದುಇಂಡಿ ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ(ಹಲಸಂಗಿ) ತಿಳಿಸಿದರು.
ಸಮೀಪದ ತುಂಬಗಿ ಗ್ರಾಮದಲ್ಲಿ ಹಮ್ಮಿಕೊಂಡ ಜಾತ್ಯಾತೀತ ಜನತಾದಳ ತಾಳಿಕೋಟಿ ವಲಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಕ್ಷ ಸೇರೆ್ಡ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಕ್ಷೇತ್ರದ ಪ್ರಬಾವಿ ನಾಯಕರಾದ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಯವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಅವರ ಗೆಲುವಿಗಾಗಿ ನಮ್ಮ ಕಾರ್ಯಕರ್ತರು ಈಗಿನಿಂದಲೇ ಕೆಲಸಮಾಡುವ ಅಗತ್ಯ ಇದೆ ಎಂದರು.
ಮುಖಂಡ ರಾಜುಗೌಡ ಪಾಟೀಲ ಮಾತನಾಡಿ ದೇ.ಹಿಪ್ಪರಗಿ ಮತಕ್ಷೇತ್ರ ಜಿಲ್ಲಯಲ್ಲಿಯೇ ಅತಿದೊಡ್ಡ ಮತ ಕ್ಷೇತ್ರವಾಗಿದೆ ಪಕ್ಷವನ್ನು ಉತ್ತಮರೀತಿಯಲ್ಲಿ ಸಂಘಟಿಸುವಂಥಾಗಲು ಪ್ರತಿ ತಾಲೂಕಿನಲ್ಲಿ ಎಂಟು ಘಟಕಗಳನ್ನು ಸೃಷ್ಠಿಸಲಾಗಿದೆ. ಎಲ್ಲ ಘಟಕಗಳಲ್ಲಿ ಪ್ರತಿಯೊಂದು ವರ್ಗದ ಜನರಿಗೂ ಪ್ರಾತಿನಿಧ್ಯ ನೀಡಲಾಗಿದೆ. ಘಟಕದ ಪದಾಧಿಕಾರಿಗಳು ಸಕ್ರೀಯವಾಗಿ ಕೆಲಸ ಮಾಡಬೇಕಾಗಿದೆ. ಮುಂಬುರುವ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಬೇಕಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಜನರು ಭ್ರಮನಿರಸನಗೊಂಡಿದ್ದಾರೆ. ಇದು ಪ್ರಾದೇಶಿಕ ಪಕ್ಷಗಳ ಯುಗವಾಗಿದೆ. ಮುಂದಿನ ಚುನಾವಣೆಯಲ್ಲಿ ಮತ್ತೇ ಜೆಡಿಎಸ್ ಪಕ್ಷ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ತಾವು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿರುವೆ, ನಿಮ್ಮ ಋಣ ತೀರಿಸುವ ಭಾಗ್ಯ ದೇವರು ನನಗೆ ನೀಡಲಿ ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಎಸ್. ಮಾಡಗಿ ಮಾತನಾಡಿ ಇಂದು ಪದಗ್ರಹಣದಿಂದ ಹುದ್ದೆಯನ್ನು ಸ್ವೀಕರಿಸಿದ ನಮ್ಮ ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುವ ಅಗತ್ಯ ಇದೆ. ಈ ಸಮಾವೇಶದ ಮೂಲಕವೇ ಮುಂಬರುವ ಚುನಾವಣೆಗೆ ನಾವು ಸನ್ನದ್ಧರಾಗಬೇಕಾಗಿದೆ ರಾಜುಗೌಡರ ಯಶಸ್ಸು ನಿಮ್ಮೆಲ್ಲರ ಪ್ರಯತ್ನದಲ್ಲಿ ಅಡಗಿದೆ ಎಂದರು.
ಜಿಲ್ಲಾ ಮಹಿಳಾ ಘಟಕದ ಅಧ್ಯೆಕ್ಷೆ ಸ್ನೇಹಲತಾ ಶಟ್ಟಿ, ಮಹಿಳಾ ಮುಖಂಡರಾದ ನಾಜಿಯಾ ಅಂಗಡಿ ಹಾಗೂ ಸುನೀತಾ ದೇವಾನಂದ ಚವ್ಹಾಣ ಸಮಯೋಚಿತವಾತಗಿ ಮಾತನಾಡಿದರು.
ಪಕ್ಷ ಸೇರೆ್ಡ:ಇದೇ ಸಂದರ್ಭದಲ್ಲಿ ತಾಲೂಕಿನ ಬಿಳೇಭಾವಿ, ಹುಣಶ್ಯಾಳ, ರಾಂಪೂರ ಪಿ.ಟಿ. ಬ್ಯಾಲ್ಯಾಳ, ಕಲಕೇರಿ, ತುಂಬಗಿ ಹಾಗೂ ಹುಣಶ್ಯಾಳ ಗ್ರಾಮದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷ ತ್ವರೆದು ಜೆಡಿಎಸ್ ಪಕ್ಷಕ್ಕೆ ಸೇರೆ್ಡಗೊಂಡರು.
ಶ್ರದ್ಧಾಂಜಲಿ:ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಮುಖ್ಯಸೇನಾ ಕಾರ್ಯದರ್ಶಿ ಬಿಪಿನ ರಾವತ್ ಹಾಗೂ 13 ಜನ ಸೈನಿಕರಿಗೆ ಒಂದು ನಿಮಿಷ ಮೌನವಹಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜೆಡಿಎಸ್ ತಾಳಿಕೋಟಿ ವಲಯ ಕಾರ್ಯಾಧ್ಯಕ್ಷ ಮಡುಸಾಹುಕಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕಯಲ್ಲಿ ಯಲ್ಲಪ್ಪ ಹೊಸಮನಿ ಸಾಯಬಣ್ಣ ಬಾಗೇವಾಡಿ, ಮಶಾಖಸಾಬ ಚೌದ್ರಿ, ಮಲಕಣ್ಣ ಮಸರಕಲ್, ಜಾಕೀರ ಲಾಹೋರಿ, ಬಸನಗೌಡ ನಾಡಗೌಡ, ಬಸಣ್ಣ ಸಾಹುಕಾರ, ಶಾಂತಪ್ಪ ಬಿಂಜಲಭಾವಿ, ಪುಷ್ಪಾ ಲಕ್ಕುಂಡಿಮಠ, ಸಿದ್ದಣ್ಣ ಕಟ್ಟಿಮನಿ, ಶರಣಗೌಡ ಪಾಟೀಲ, ಅಶೋಕಗೌಡ ಪಾಟೀಲ (ತಾಳಿಕೋಟಿ) ಗುರನಗೌಡ ಪಾಟೀಲ, ಶರಣು ಧರಿ, ಗೌಸ ಮನಿಯಾರ, ಕಾಶೀಮಸಾಬ ನಾಯ್ಕೋಡಿ, ವಿರೇಶ ಪಾಟೀಲ, ವಿಶ್ವನಾಥ ಬಿದರಕುಂದಿ, ದೇವೇಂದ್ರ ಚಲವಾದಿ ಮತ್ತಿತರರು ಉಪಸ್ಥಿತರಿದ್ದರು.