ಯರಗಟ್ಟಿ

ಜನಜಾಗೃತಿ ಧರ್ಮಸಭೆ ಹಾಗೂ 9ನೇಯ ಲಕ್ಷದೀಪೋತ್ಸವ ಕಾರ್ಯಕ್ರಮ

ಜನಜಾಗೃತಿ ಧರ್ಮಸಭೆ ಹಾಗೂ 9ನೇಯ ಲಕ್ಷದೀಪೋತ್ಸವ ಕಾರ್ಯಕ್ರಮ

ಯರಗಟ್ಟಿ:ಮನುಷ್ಯ ಪಣತಿಯಿಂದ ದೀಪ ಹಚ್ಚಿದರೆ ಅದು ಎಣ್ಣೆ, ಬತ್ತಿವಿರುವ ತನಕ ಬೆಳಕು ನೀಡುತ್ತದೆ. ಆದರೆ ಜ್ಞಾನದಿಂದ ಹಚ್ಚಿದ ಜ್ಯೋತಿ ಶಾಶ್ವತವಾಗಿ ಮನುಷ್ಯನ ಬದುಕಿಗೆ ಪ್ರಜ್ವಲಿಸುತ್ತದೆಎಂದುಗುತ್ತಿಗೋಳಿ ಹೊಸಕೋಟಿ ಅಭಿನವ ರೇವಯ್ಯ ಮಹಾಸ್ವಾಮೀಜಿ ಹೇಳಿದರು. 

ಸಮೀಪದ ಸುಕ್ಷೇತ್ರ ಜಾಲಿಕಟ್ಟಿ-ಜೀವಾಪೂರ ಗ್ರಾಮದ ಶ್ರೀಬಸವೇಸ್ವರ ದೇವಸ್ಥಾನದಲ್ಲಿ ಸೋಮವಾರ ಮಹಾಶಿವರಾತ್ರಿ ಶಿವಭಜನಾ ಸಪ್ತಾಹ ಮಂಗಲೋತ್ಸವ ನಿಮಿತ್ಯ ಜನಜಾಗೃತಿ ಧರ್ಮಸಭೆ ಹಾಗೂ 9ನೇಯ ಲಕ್ಷದೀಪೋತ್ಸವ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಆಶಿರ್ವಚನ ನೀಡಿದ ಅವರು, ಎಲ್ಲವು ಇದ್ದು ಅನ್ನ ವರ್ಜಿಸಿ ನೀರು ಬಿಟ್ಟು ಜ್ಞಾನದ ಸುವಾಸನೆ ಸವಿಯದೇ ಇದ್ದಾಗ ಇವುಗಳ ಮಹತ್ವ ಅರಿವಿಗೆ ಬರುತ್ತದೆ ಕಾರಣ ಅನ್ನ ನೀರು ಬಿಟ್ಟು ನಿದ್ರೆಯನ್ನು ಹತ್ತಿರಕ್ಕೆ ಬಿಟ್ಟುಕೊಡದೇ ಕೇವಲ ಶಿವ ದ್ಯಾನ ಮಾಡುವದೇ ಶಿವರಾತ್ರಿಯಾಗಿದೆ ಎಂದರು. 

ಸೊಗಲ ಸುಣಧೋಳಿಯ ಚಿದಾನಂದ ಅವಧೂತ ಅಜ್ಜನವರು ಸಮಾರಂಭ ಉಧ್ಘಾಟಿಸಿ ಅವರು ಮಾತನಾಡಿ, ಜನರ ಮನಸ್ಸಿನ ಕತ್ತಲೆಯನ್ನು ಹಾಗೂ ಮೂಡನಂಬಿಕೆಯನ್ನು ಕಳೆಯುವದಕ್ಕೆ ಜಾತ್ರೆಗಳಾಗಬೇಕೇ ಹೊರತು ಮಜಾ ಮಾಡುವದಕ್ಕೆ ಅಲ್ಲ ಎಂದರು.ಮೊದಲಿಗೆ ಸರ್ವ ಪೂಜ್ಯರನ್ನು ಸಕಲ ವಾದ್ಯಮೇಳಗಳೂಂದಿಗೆ ಸುಮಂಗಲಿಯರ ಆರತಿ, ಕುಂಭ ಮೇಳಗಳೊಂದಿಗೆ ಸರಕಾರಿ ಕನ್ನಡ ಶಾಲೆಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಬಸವೇಶ್ವರ ದೇವಸ್ಥಾನದವರೆಗೆ ಬರಮಾಡಿಕೊಳ್ಳಲಾಯಿತು. 

ವೇದಮೂರ್ತಿ ಮಹಾದೇವಯ್ಯ ಪುಜೇರ, ಗ್ರಾಪಂ ಅಧ್ಯಕ್ಷ ಬಸವರಾಜ ಕಡಬಿ, ಚೆನ್ನಯ್ಯ ಪೂಜೇರ, ಮಲ್ಲನಾಯ್ಕ ನಾಯ್ಕರ, ಶಂಕರೆಪ್ಪ ಭೀರ​‍್ಪನ್ನವರ, ವಿ.ಬಿ.ಪೂಜೇರ, ವಾಯ್,ಎಫ್‌.ನಾಯ್ಕರ, ಮಲ್ಲಿಕಾರ್ಜುನ ಯಡಳ್ಳಿ, ಬಸವರಾಜ ನಾಯ್ಕರ, ನೀಲಕಂಠ ಕಂಬಾರ, ಶಿವನಗೌಡ ನಾಯ್ಕರ, ಮಲ್ಲಪ್ಪ ಬಡಿಗೇರ, ಬಸವರಾಜ ಕಂಬಾರ, ಪತ್ರೇಪ್ಪ ಬಡಿಗೇರ, ಬಸಪ್ಪ ಅಂಗಡಿ, ಬಸಯ್ಯ ಗೌಡರ, ಶಿವಾನಂದ ಅಟೀಗಲ, ಚಿನ್ನಪ್ಪ ಕಂಬಾರ, ಮಂಜು ನಾಯ್ಕರ, ಶ್ರೀಶೈಲ ಮಠಪತಿ, ಹಾಗೂ ಸುತ್ತಮುತ್ತಲಿನ ಭಕ್ತರು ಇದ್ದರು. 


ಸುದ್ದಿ ಓದಿ