ಬ್ಯಾಡ್ಗಿ

ಜಲಜೀವನ ಮಷಿನ್ ಯೋಜನೆಯಡಿ 1.15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಜಲಜೀವನ ಮಷಿನ್ ಯೋಜನೆಯಡಿ 1.15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಬ್ಯಾಡಗಿ 05: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಮಷಿನ್ ಯೋಜನೆಯಡಿ 1.15 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದರಿಂದ ಚಿನ್ನಿಕಟ್ಟಿ ಗ್ರಾಮದ 490 ಮನೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ 1.15 ಕೋಟಿ ರೂಗಳ ವೆಚ್ಚದ ಜಲ ಜೀವನ ಮಷಿನ್ ಯೋಜನೆಯಡಿ ಗ್ರಾಮದ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೊಂಡಿರುವ ಜಲಜೀವನ ಮಷಿನ್ ಯೋಜನೆಯಿಂದ ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಗಿದೆ. ಮನೆ ಮನೆಗೆ ಪೈಪ್ಲೈನ್ ಮೂಲಕ ಸಮರ್ಪಕ ನೀರೊದಗಿಸುವ ಕೆಲಸವಾಗಿದೆ. 

ಹೀಗಾಗಿ ಈ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿದರೆ ಗ್ರಾಮದ ಯಾರೊಬ್ಬರ ಮನೆಗೂ ನೀರಿನ ಅಭಾವ ಇರುವುದಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮತ್ತು ಗುಣಮಟ್ಟದಲ್ಲಿ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು.ಎಇಇ ಸುರೇಶ ಬೇಡರ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದಲ್ಲಿ 1.15ಕೋಟಿ ರೂಗಳ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಗ್ರಾಮದಲ್ಲಿ 490ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ನಲ್ಲಿ ಮುಖಾಂತರ ಪೂರೈಕೆ ಮಾಡಲಾಗುವುದು. ಈ ಕಾಮಗಾರಿಯ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಹಕಾರವನ್ನು ನೀಡುವ ಮೂಲಕ ಗುಣಮಟ್ಟದ ಕಾಮಗಾರಿಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ವಿನೋದಾ ಓಲೇಕಾರ ವಹಿಸಿದ್ದರು. ಕೆಡಿಪಿ ಸದಸ್ಯ ಶ್ರೇಣಿಕರಾಜ್ ಯಳವತ್ತಿ, ಗ್ರಾಪಂ ಉಪಾಧ್ಯಕ್ಷ ಅಶೋಕ ಬನ್ನಿಹಟ್ಟಿ, ಸದಸ್ಯರಾದ ರಾಜು ತೆರೆದಹಳ್ಳಿ, ವಿನಾಯಕ ಬ್ಯಾಡಗಿ, ಫೈರೋಜಖಾನ್ ಬಿಸಿಲಹಳ್ಳಿ, ಸೋಮಲಿಂಗಪ್ಪ ಗೌಡ್ರ, ಮುಖಂಡರಾದ ವಿರೇಂದ್ರ ಶೆಟ್ಟರ, ವಿಷ್ಣುಕಾಂತ ಬೆನ್ನೂರ, ವಿನಯ ಹಿರೇಮಠ, ಪಿಡಿಓ ಪ್ರವೀಣ ಬಿಜ್ಜೂರ, ಕಾಮಗಾರಿ ನಿರೀಕ್ಷಕ ರಾಮಣ್ಣ ಗಾಜೇರ, ಗುತ್ತಿಗೆದಾರ ರವಿ ಪೂಜಾರ, ಲಿಯಾ ಹೇರೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ