ಶಿಗ್ಗಾವ್

ವೀರಭದ್ರೇಶ್ವರ ಸೇವಾ ಸಮಿತಿಯ ಪರವಾಗಿ ಜಲಾಭಿಷೇಕ

ವೀರಭದ್ರೇಶ್ವರ ಸೇವಾ ಸಮಿತಿಯ ಪರವಾಗಿ ಜಲಾಭಿಷೇಕ

ಶಿಗ್ಗಾವಿ 03:  ಪಟ್ಟಣದ ವೀರಗಲ್ಲಿಯಲ್ಲಿರುವ ಉಮಾ ಮಹೇಶ್ವರಿ ಹಾಗೂ ವೀರಭದ್ರೇಶ್ವರ ದೇವಸ್ಥಾನದಲ್ಲಿಂದು ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರದ ಜೊತೆಗೆ ಜಲಾಭಿಷೇಕವನ್ನು ಶಿವಯ್ಯ ಶಿವಲೋಚನಮಠ ನೇರವೇರಿಸಿದರು. 

ಪುರಸಭೆ ಸದಸ್ಯ ರಮೇಶ ವನಹಳ್ಳಿ ಮಾತನಾಡಿ  ಮೂರನೇಯ ಕೊರೋನಾ ಅಲೆ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು ಎಂದು ನುರಿತ ತಜ್ಞ ಮತ್ತು ಮಕ್ಕಳ ತಜ್ಞ ವೈದ್ಯರು ಹೇಳಿದ್ದು ನಾಡಿನ ಮಕ್ಕಳಿಗೆ ಕೊರೋನಾ ಬರದಂತೆ ಸೋಂಕು ಬಂದರು ಸಹಿತ ಹೆಚ್ಚಿನ ಸಾವು ನೋವುಗಳು ಸಂಭವಿಸದಿರಲಿ ಎಂದು ಹಾಗೂ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಬಂದು ಸಾರ್ವಜನಿಕರ ಮತ್ತು ರೈತರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವೀರಭದ್ರೇಶ್ವರ ಸೇವಾ ಸಮಿತಿಯ ಪರವಾಗಿ ಜಲಾಭಿಷೇಕವನ್ನು ನೇರವೇರಿಸಲಾಯಿತು ಎಂದರು. 

ಈ ಸಂದರ್ಭದಲ್ಲಿ ಶಿವಪ್ಪ ಗಂಜೀಗಟ್ಟಿ, ಶಂಕರಗೌಡ್ರ ಪಾಟೀಲ, ಬಸಣ್ಣಾ ಹಾವೇರಿ, ಸುರೇಶ ಹರವಿ, ಶಿವಪ್ಪ ಹರವಿ, ಮಾಲತೇಶ ಹಾವಣಗಿ,  ಮಂಜುನಾಥ ಕೋಡಿ, ನಿರ್ಮಲಾ ಹರವಿ, ನೀಲಮ್ಮ ಗೋಟಗೋಡಿ, ಸುಲೋಚನಾ ಸಾವಳಗಿ, ಕವಿತಾ ಹರವಿ, ನೀಲಮ್ಮ ವನಹಳ್ಳಿ, ಅನ್ನಪೂರ್ಣಾ ಹರವಿ, ಅನಿತಾ ಹರವಿ, ಗಂಗಮ್ಮ ಅಂಕಲಕೋಟಿ, ಜಯಶೀಲಾ ಗೋಟಗೋಡಿ, ಚೇತನಾ ಅಂಕಲಕೋಟಿ, ಅಶೋಕ ಹಾವಣಗಿ, ನವೀನ ಹರವಿ  ಸೇರಿದಂತೆ ವೀರಭದ್ರೇಶ್ವರ ಸೇವಾ ಸಮಿತಿ ಸರ್ವ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ