ಜಲ ಜೀವನ ಮಿಷನ್ ಮನೆಮನೆ ಗಂಗೆ: ರೂಪಾಲಿ ನಾಯ್ಕ
ಕಾರವಾರ 24: ಶುದ್ದ ಮತ್ತು ಸಮರ್ಪಕವಾದ ಕುಡಿಯುವ ನೀರನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ನಳ ಸಂಪರ್ಕವನ್ನು ಕಲ್ಪಿಸುವ ಜಲ ಜೀವನ ಮಿಷನ್ ಯೋಜನೆ ನಮ್ಮೆಲ್ಲರ ಪಾಲಿಗೆ ಮನೆ ಮನೆಗೆ ಗಂಗೆಯಾಗಿ ಅನುಷ್ಠಾನವಾಗುತ್ತಿದೆ ಎಂದು ಶಾಸಕರಾದ ರೂಪಾಲಿ ನಾಯ್ಕ ಹೇಳಿದರು.
ಅವರು ಇಲ್ಲಿನ ಚಿತ್ತಾಕುಲ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಗ್ರಾಮ ಪಂಚಾಯತ ಚಿತ್ತಾಕುಲ, ಸ್ಕೊಡ್ವೆಸ್ ಸಂಸ್ಥೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾರವಾರ ಹಾಗೂ ಸಚ್ಚ ಭಾರತ ಅಭಿಯಾನ್ (ಗ್ರಾಮೀಣ) ಇವರ ಸಹಯೋಗದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಬುಧುವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಗ್ರಾಮಗಳಿಗೂ ಕಾರ್ಯಾತ್ಮಕ ನಳ ಸಂಪರ್ಕವನ್ನು ಕಲ್ಪಿಸುವುದರ ಮೂಲಕ ಪ್ರತಿಯೊಬ್ಬ ಮನುಷ್ಯನಿಗೆ ದಿನಕ್ಕೆ 55 ಲೀಟರ್ ನೀರು ಒದಗಿಸುವ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ರಾಜ್ಯ ಸರ್ಕಾರವು ಇದೇ ಯೋಜನೆಯನ್ನು ಮನೆಮನೆಗೆ ಗಂಗೆ ಎಂಬುವದಾಗಿ ಘೋಷಿಸಿದೆ. ಶೇ. 10 ರಷ್ಟು ಸಮುದಾಯದ ವಂತಿಗೆಯನ್ನು ಈ ಯೋಜನೆ ಒಳಗೊಂಡಿರುವುದರಿಂದ ಜನರ ಯೋಜನೆಯಾಗಿ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಿಯಾಂಗ ಎಂ ರವರು ಜನರಲ್ಲಿ ಜಾಗೃತಿ ಮೂಡಿಸಿ ಯೋಜನೆಯು ಸುಸ್ಥಿರತೆಯಿಂದ ಅನುಷ್ಠಾನ ಆಗುವಂತೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿನ 50348 ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು. ಸಮುದಾಯ ವಂತಿಗೆಯನ್ನು ಸಂಗ್ರಹಿಸುವ ಮೂಲಕ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿದ ಅಧ್ಯಕ್ಷತೆಯನ್ನು ಗ್ರಾಮ ಪಂಚಯತ ಅಧ್ಯಕ್ಷರಾದ ಸ್ವಾತಿ ಎಸ್ ದೇಸಾಯಿ ವಹಿಸಿದ್ದರು, ತಾಲೂಕ ಪಂಚಾಯತ ಸದಸ್ಯರಾದ ಇನಾಸಿನ್ ಡಿಕೊಸ್ತಾ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರೀನಾ ಆರ್ ವೈಂಗಣಕರ, ಗ್ರಾಮೀಣ ಕುಡಿಯು ನೀರು ಮತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿರ್ ಕಿರನ್ ಚೇಳಕರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ, ಜಲಜೀವನ ಮಿಷನ್ ಜಿಲ್ಲಾ ಯೋಜನ ವ್ಯವಸ್ಥಾಪಕ ವೆಂಕಟೇಶ ನಾಯಕ್, ಸ್ಕೊಡ್ವೆಸ್ ಸಂಸ್ಥೆಯ ತಂಡದ ಮುಖ್ಯಸ್ಥ ರಿಯಾಜ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.