ಶಿಗ್ಗಾವ್

ಜೈನ ಸಮೂದಾಯದ ದೀಕ್ಷಾ ಕಾರ್ಯಕ್ರಮ

ಜೈನ ಸಮೂದಾಯದ ದೀಕ್ಷಾ ಕಾರ್ಯಕ್ರಮ

ಶಿಗ್ಗಾವಿ 07 : ಬಂಕಾಪುರ ಜೈನ ಸಮೂದಾಯದ ದೀಕ್ಷಾ ಕಾರ್ಯಕ್ರಮ ಪಟ್ಟಣದ ವಿಮಲನಾಥ ಜೈನ ಮಂದಿರದ ಆವರಣದಲ್ಲಿ ಸರ್ವ ದರ್ಮಿಯರ ಸಮ್ಮುಖದಲ್ಲಿ ಜೈನ ಗುರುಗಳವರಿಂದ ಜೈನ ಧಾರ್ಮಿಕ ವಿಧಿ ವಿದಾನಗಳ ಪ್ರಕಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಪಟ್ಟಣದ ಬಟ್ಟೆವ್ಯಾಪಾರಿಗಳಾದ ದಲಿಚಂದ ಜೈನ್ ರವರ ಪತ್ನಿ ತ್ರಿಸಲಾದೇವಿ ಪುತ್ರ ವಿನೋದಕುಮಾರ, ಪುತ್ರಿಯರಾದ ನೇಹಾಕುಮಾರಿ ಹಾಗು ಜೀನಲ್‍ಕುಮಾರಿ ಯವರು ಜೈನ್ ಸನ್ಯಾಸ ದೀಕ್ಷಾ ಪಡೆದರು. ನಂತರ ಸಕಲ ವಾದ್ಯ ವೈಭವ, ಕುಂಬಹೋತ್ತ ಮಹಿಳೆಯರೋಂದಿಗೆ ಸನ್ಯಾಸ ದೀಕ್ಷಾ ಪಡೆದವರ ಮೇರವಣಿಗೆ  ವಿಮಲನಾಥ ಜೈನ ಮಂದಿರದಿಂದ ಪ್ರಾರಂಭಗೋಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದು ಪುನ ದೇವಸ್ಥಾನದ ಆವರಣಕ್ಕೆ ಬಂದು ಸಮಾರೋಪ ಗೋಂಡಿತು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ದಲಿಚಂದ ಜೈನ, ಮುಖೇಶ ಜೈನ, ಅಮೃತ ಜೈನ, ಪ್ರವೀಣ ಜೈನ, ಸುರಜಮಲ್ ಜೈನ, ಕಾಂತಿಲಾಲ ಜೈನ, ಬಾಬುಲಾಲ ಜೈನ, ರಮೇಶ ಶೆಟ್ಟರ, ಈರಣ್ಣ ಕೂಲಿ, ಗುಡ್ಡಪ್ಪ ಮತ್ತೂರ, ಗಂಗಾದರ ಅಂಗಡಿ, ನೀಲಪ್ಪ ಕುರಿ, ಚಂದ್ರಶೇಖರ ಗಿಡ್ಡಣ್ಣವರ, ಬಸವರಾಜ ನಾರಾಯಣಪುರ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ