ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ: ಡಾ. ಬಸವರಾಜ
ಹೂವಿನಹಡಗಲಿ 21: ಧರ್ಮ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ.ಕನ್ನಡ ಸಾಹಿತ್ಯ ಬೆಳವಣಿಗೆಗೆ ಜೈನ ಕವಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಸ್ಆರ್ಎಂಪಿಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಬಸವರಾಜ ಹೆಬ್ಬಾಳ ಅಭಿಪ್ರಾಯಪಟ್ಟರು.
ಇಲ್ಲಿನ ಜೆಎಸ್ಎಸ್ ಕಾಲೇಜಿನಲ್ಲಿ ಈಚೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಹಿಂಸೋ ಪರಮಧರ್ಮ ಮತ್ತು ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಕುರಿತು ಉಪನ್ಯಾಸ ನೀಡಿದ ಅವರು ಪ್ರಾಚೀನ ಕಾವ್ಯಗಳು,ಕಲೆ,ಸಾಹಿತ್ಯ,ಸಂಸ್ಕೃತಿ ಪ್ರತೀಕಗಳಾಗಿವೆ ಎಂದ ಅವರು ಸಾಹಿತ್ಯದಿಂದ ಸಮಾಜ ತಿದ್ದುವ ಕೆಲಸ ಜೈನ್ ಕವಿಗಳು ಮಾಡಿದ್ದಾರೆ ಎಂದರು.
ದತ್ತಿ ನಿದಿಗಳಾದ ಷಾ ವನೇ ಚಂದ್ ಪೂಜಾಜಿ,ಜೆ.ಜಿನ್ನಪ್ಪನವರ ಸ್ಮಾರಣಾರ್ಥ, ಜೈನರ ಸೋಗಿರಮ್ಮ, ಪುಲ್ಲಬಾಯಿ ಸಗನ್ ಮಲ್ ಜೀ,ಗುಂಜಾಳ ರುಕ್ಕಮ್ಮ ಸ್ಮಾರಕ,ಲಕ್ಷ್ಮಿದೇವಿ/ಭೋಜನಗೌಡ ಸ್ಮಾರಕ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಜೆಸಿಐ ರಾಯಲ್ ಅಧ್ಯಕ್ಷ ಸಂತೋಷ ಕೊಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಪದ್ಮರಾಜ್ ಜೈನ್ ಮಾತನಾಡಿದರು.ಜೆಎಸ್ಎಸ್ ಕಾಲೇಜಿನ ಪ್ರಾಚಾರ್ಯರಾದ ಅಶೋಕ ಈಡಿಗರ,ಭೀಮಾನಾಯ್ಕ ಇದ್ದರು. ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ ಸ್ವಾಗತಿಸಿದರು. ಡಾ.ಸತೀಶ ಪ್ರಾಸ್ತಾವಿಕ ಮಾತನಾಡಿದರು. ಕು.ಎ.ಅನುಷ ನಿರೂಪಿಸಿದರು