ಜಗದೀಶ ವಡ್ಡಿನ ನಿಧನ
ಕಾರವಾರ 14: ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಗ್ರಂಥಪಾಲಕರಾಗಿ ಸುಧೀರ್ಘ 34 ವರ್ಷಗಳ ಸೇವೆ ಸಲ್ಲಸಿದ ಜಗದೀಶ ಯಲ್ಲಪ್ಪಾ ವಡ್ಡಿನ ದಿ.13ರಂದು ನಿಧನರಾದರು. ಉತ್ತಮ ಕ್ರಿಕೆಟ ಆಟಗಾರ, ಬ್ಯಾಟ್ ಹಿಡಿದು ಆರಂಭಿಕನಾಗಿ ನಿಂತರೆ ಎಂತಹವರು ಕೂಡಾ ಹುಬ್ಬೇರಿಸುವಂತೆ ಆಡುವ ಆಟಗಾರ. ನೇರ ದಿಟ್ಟ ಮಾತುಗಾರ, ನಡೆದಾಡುವ ವಾಚನಾಲಯ ಎಂದೇ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಕರೆಯಿಸಿಕೊಂಡವರು. ನೂರಾರು ವಿಜ್ಞಾನ ಮಾದರಿಗಳನ್ನು ತಯಾರಿಸಿ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಹಲವಾರು ಶಿಕ್ಷಕರಿಗೆ ನೀಡಿದವರು ಅವರು ಎಂದರೆ ತಪ್ಪಾಗಲಾರದು. ರಾಷ್ಟ್ರ ಮಟ್ಟದವರೆಗೆ ವಿಜ್ಞಾನ ಮಾದರಿಗಳೇ ಮಾತನಾಡುತ್ತಿದ್ದವು ಎಂದರೆ ತಪ್ಪಾಗಲಾರದು. ರಾಷ್ಟ್ರ ಮಟ್ಟದವರೆಗೆ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿವೆ.
ಸ್ತಬ್ಧ ಚಿತ್ರ ತಯಾರಿಸುವಾಗ ಅವರ ಮಾಗದರ್ಶನ ಎದ್ದು ಕಾಣುತ್ತಿತ್ತು. ಅರಣ್ಯ ರಕ್ಷಣೆ, ಪರಿಸರ ರಕ್ಷಣೆ, ಶಿಕ್ಷಕರ ದಿನ, ಕೋವಿಡ್-19 ನಿಪಾ ವೈರಸ್ ಹೀಗೆ ಒಂದನೂರಾ ಐವತ್ತು ದಿನಾಚರಣೆಗಳ ಲೇಖನಗಳು, ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಉತ್ತಮ ಗೆಳೆಯ ಸಹೃದಯಿ, ಪ್ರತಿಯೊಬ್ಬರಿಗೂ ಚಿರಪರಿಚಿತ ಅಮೋಘ ವ್ಯಕ್ತಿಯಾಗಿದ್ದರು. ಲೋಕದರ್ಶನದಲ್ಲಿಯೂ ಅವರ ಅನೇಕ ಲೇಖನಗಳು ಪ್ರಕಟನಗೊಂಡಿವೆ.