ಧಾರವಾಡ - ಹುಬ್ಬಳ್ಳಿ

ಜೆ.ಎಸ್‌.ಎಸ್‌.ಗೆ ಕ.ವಿ.ವಿ ಯ “ಸಮಗ್ರ ವೀರಾಗ್ರಣಿ” ಹಾಗೂ “ರಂಗದೀಪ್ತಿ” ಪ್ರಶಸ್ತಿ

ಜೆ.ಎಸ್‌.ಎಸ್‌.ಗೆ  ಕ.ವಿ.ವಿ ಯ “ಸಮಗ್ರ ವೀರಾಗ್ರಣಿ” ಹಾಗೂ “ರಂಗದೀಪ್ತಿ” ಪ್ರಶಸ್ತಿ


ಧಾರವಾಡ 02 : ಜನವರಿ 30 ಮತ್ತು 31, 2026ರಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರವಲಯ ಯುವಜನೋತ್ಸವದಲ್ಲಿ ಜೆ.ಎಸ್‌.ಎಸ್‌. ಬನಶಂಕರಿ ಕಲಾ ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ, ವಿದ್ಯಾರ್ಥಿಗಳು ಭಾಗವಹಿಸಿ, 03 ಪ್ರಥಮ, 01 ದ್ವಿತೀಯ ಹಾಗೂ 01 ತೃತೀಯ ಬಹುಮಾನಗಳನ್ನು ಪಡೆಯುವದರೊಂದಿಗೆ 2025-26 ನೇ ಸಾಲಿನ “ಸಮಗ್ರ ವೀರಾಗ್ರಣಿ” ಪ್ರಶಸ್ತಿ ಹಾಗೂ “ರಂಗದೀಪ್ತಿ” ಪ್ರಶಸ್ತಿಗಳನ್ನು ಪಡೆದು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.  

ಈ ಮಹತ್ತರ ಸಾಧನೆಗಾಗಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಲಲಿತಕಲಾ ಸಂಘದ ಅಧ್ಯಕ್ಷರಾದ ಡಾ. ವಿಷ್ಣುವರ್ಧನ ಎಚ್‌., ಹಾಗೂ ಸಂಯೋಜಕರಾದ ಡಾ. ವೀಣಾ ಭಟ್ ಮತ್ತು ಡಾ. ಅನಿತಾ ಪುರಾಣಿಕ  ಅವರಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ, ಆಡಳಿತಾಧಿಕಾರಿಗಳಾದ  ಅರಿಹಂತ ಪ್ರಸಾದ,  

ಪ್ರಾಚಾರ್ಯರಾದ ಪ್ರೊ ವೆಂಕಟೇಶ ಮುತಾಲಿಕ, ಜೆ.ಎಸ್‌.ಎಸ್‌. ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ್ ಜೈನ್, ಜೆ.ಎಸ್‌.ಎಸ್‌. ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾಧ್ಯೆ, ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತಅಲಿ ಮೇಗಲಮನಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ. ಜೆ.ಎಸ್‌.ಎಸ್‌. ಬನಶಂಕರಿ ಕಲಾ,ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ, ವಿದ್ಯಾಗಿರಿ, ಧಾರವಾಡ. 


ಸುದ್ದಿ ಓದಿ