ಶಿಗ್ಗಾವ್

ನಾಯಕತ್ವದ ಗುಣ ಬೆಳೆಸುವ ಏಕೈಕ ಸಂಸ್ಥೆ ಜೆಸಿಐ: ದೊಡ್ಮನೆ

ನಾಯಕತ್ವದ ಗುಣ ಬೆಳೆಸುವ ಏಕೈಕ ಸಂಸ್ಥೆ ಜೆಸಿಐ: ದೊಡ್ಮನೆ

ಶಿಗ್ಗಾವಿ 14: ವಿಶ್ವದ 130 ರಾಷ್ಟ್ರಗಳಲ್ಲಿ ರಾಜಕೀಯ ಹೊರತುಪಡಿಸಿ ಸಂಘಟನೆ ಮತ್ತು ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವ ಏಕೈಕ ಸಂಸ್ಥೆ ಜೆಸಿಐ ಎಂದು ಜೆಸಿಐ ಭಾರತದ ವಲಯ 24ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ ಪ್ರಶಾಂತ ದೊಡ್ಮನೆ ಹೇಳಿದರು.

ಪಟ್ಟಣದ ಮಾಮಲೇದೇಸಾಯಿ ಕಾಲೇಜಿನಲ್ಲಿ ನೆಡೆದ ಜೆಸಿಐ ಶಿಗ್ಗಾವಿ ಜನಪದ ವಲಯ 24 ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಜೆ.ಸಿ ಪ್ರಕಾಶ ಔಂಧಕರಗೆ ಪ್ರಮಾಣವಚನ ಬೋಧಿಸಿ ಮಾತನಾಡಿದ ಅವರು ಕಳೆದ ವರ್ಷದಲ್ಲಿ ನಿಕಟಪೂರ್ವ ಅಧ್ಯಕ್ಷ ಗುರುರಾಜ ಹುಚ್ಚಣ್ಣನವರ ನೇತೃತ್ವದಲ್ಲಿ ಶಿಗ್ಗಾವಿ ಜೆಸಿಐ ಸಂಸ್ಥೆ ಕೊರೋನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದು ಹೆಮ್ಮೆಯ ವಿಷಯ. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಇನ್ನೂ ಹೆಚ್ಚಿನ ಪ್ರಶಸ್ತಿಗೆ ಭಾಜನರಾಗಲು ನೂತನವಾಗಿ ಪದಗ್ರಹಣ ಸ್ವೀಕಾರ ಮಾಡಿದ ಪದಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.

ತಾ.ಶಿ.ಸ ಉಪಾಧ್ಯಕ್ಷ ದತ್ತಣ್ಣಾ ವೇರ್ಣೇಕರ ಉದ್ಘಾಟನೆ ಮಾಡಿ ಮಾತನಾಡಿ ಅಧಿಕಾರಕ್ಕಾಗಿ ಬಡಿದಾಡದೇ ಇರುವ ವಿಶ್ವದಲ್ಲಿ ಏಕೈಕ ಸಂಸ್ಥೆ ಜೆಸಿಐ ಎಂದು ಶ್ಲಾಘಿಸಿದರು. ಜೊತೆಗೆ ಈ ಸಂಸ್ಥೆಯು ನಗರ ಪ್ರದೇಶಕ್ಕೆ ಸೀಮಿತವಾಗದೇ ತಮ್ಮ ಛಾಪನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸಲಿ ಎಂದರು.

ಎಸ್.ಆರ್.ಜೆ.ವ್ಹಿ.ಜಿ ಪ್ರಾಚಾರ್ಯ ಪಿ.ಸಿ.ಹಿರೇಮಠ ಮಾತನಾಡಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಜೆ.ಸಿ.ಐ ಸಂಘ ರಚನೆ ಮಾಡಿದರೆ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಗುರುರಾಜ ಹುಚ್ಚಣ್ಣನವರ 2020 ನೇ ಸಾಲಿನ ವರದಿವಾಚನ ಮಂಡಿಸಿದರು. ಜೆ.ಸಿ ವೀರಯ್ಯ ಪ್ರಸಾದೀಮಠ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನಿಕಟ ಪೂರ್ವ ಅಧ್ಯಕ್ಷ ಹರೀಶ ಬಂಡಿವಡ್ಡರ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಜಿ.ಸಿ ನಿಡಗುಂದಿ ಅತಿಥಿಗಳನ್ನು ವೇದಿಕೆಗೆ ಕರೆತಂದರು, ಪ್ರಾರ್ಥನೆ ರಂಜನಾ ಚಿಕ್ಕೋರ್ಡೆ, ಸ್ವಾಗತ ಡಿ.ಆರ್.ತೋಟಗೇರ, ಅತಿಥಿಗಳ ವೈಯಕ್ತಿಕ ಪರಿಚಯವನ್ನು ಡಾ.ಡಿ.ಎ.ಗೊಬ್ಬರಗುಂಪಿ, ಜಿ.ಎನ್.ಯಲಿಗಾರ, ಎಸ್.ಎಫ್.ಜಂಗ್ಲೇಪ್ಪನವರ, ಪವನ ಕೌಜಲಗಿ, ದಯಾನಂದ ಸೂರಗೊಂಡ ನೆರವೇರಿಸಿದರು.

ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಸಿದ್ದಾರ್ಥಗೌಡ ಪಾಟೀಲ, ದಯಾನಂದ ಅಕ್ಕಿ, ಹೆಚ್.ಡಿ.ದೇವಿಹೊಸುರ, ಡಾ.ಕುಮಾರಗೌಡ ಪಾಟೀಲ, ರಾಘವೇಂದ್ರ ದೇಶಪಾಂಡೆ, ಎಂ.ವಿ.ಬಳಿಗಾರ, ಕೆ.ಬಿ.ಚನ್ನಪ್ಪ, ಬಾಬಾಜಾನ ಹುಲಗೂರ, ಅನಿತಾ.ಡಿ.ಗೊಬ್ಬರಗುಂಪಿ, ಡಾ. ಲತಾ ನಿಡಗುಂದಿ, ಡಾ. ಚಂದ್ರಿಕಾ ಪಾಟೀಲ, ಸವಿತಾ ದೊಡ್ಡಮನಿ, ವೀರಣ್ಣ ಬಾರಕೇರ, ಕೆ.ಎಸ್.ದಳವಾಯಿ, ಕುಮಾರ ಮನ್ವೀತ, ಪ್ರೀತಮ್, ಕಲ್ಲಪ್ಪ ಹೆಸರೂರ, ವಿಧ್ಯಾ ಹೆಸರೂರ ಸೇರಿದಂತೆ ಸವಣೂರ ಮತ್ತು ಹಾವೇರಿ ತಾಲೂಕಿನ ಜೆ.ಸಿ.ಐ ಬಂಧುಗಳು ಉಪಸ್ಥಿತರಿದ್ದರು.

ಸುದ್ದಿ ಓದಿ