ಜೆಸಿಐ ಭಾರತ ವಲಯ ಮಾಹಿತಿ ಕಾರ್ಯಾಗಾರ
ರಾಣಿಬೆನ್ನೂರ 24: ಜಗತ್ತಿನಲ್ಲಿ ಜೆಸಿಐ ಸಂಸ್ಥೆ ಪ್ರತಿಷ್ಠಿತ ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದ್ದು, ಯುವಕರನ್ನು ಗುಣಾತ್ಮಕವಾಗಿ ಬದಲಾವಣೆ ಮಾಡಿ ಉತ್ತಮ ನಾಗರೀಕರನ್ನಾಗಿ ಮಾಡುತ್ತಿದೆ ಎಂದು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷ ಪಾಟೀಲ ಹೇಳಿದರು.
ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳೀಯ ಜೆಸಿಐ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಜೆಸಿಐ ಭಾರತ ವಲಯ-24ರ 2020-21 ಸಾಲಿನ ಪ್ರಶಸ್ತಿ ಮಾಹಿತಿ ಕಾರ್ಯಾಗಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಮಾಹಿತಿ ಕಣಜವಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಮುಂದಿನ ಶೈಕ್ಷಣಿಕ ವಿದ್ಯಾಬ್ಯಾಸಕ್ಕೆ ಅನುವು ಮಾಡಿಕೊಳ್ಳಬೇಕು ಎಂದರು.
ಪ್ರದೀಪ್ ಹಾಗೂ ದೀಪು ತರಬೇತಿ ನೀಡಿದರು. ಜೆಸಿಐ ಅಧ್ಯಕ್ಷ ರವಿ ಪಾಟೀಲ್, ವಲಯ ಅಧ್ಯಕ್ಷ ಪ್ರಶಾಂತ ದೊಡ್ಡಮನಿ, ಲಕ್ಷ್ಮಣ ಕನ್ನಕಿ, ಲಕ್ಷ್ಮೀ ಅಡಕಿ, ಸರೋಜ ಕುಬಸದ, ಇಸ್ಲಾಯಿಲ್ ಐರಣಿ, ಪ್ರವೀಣ ಸುರಹೊನ್ನೆ, ಹರೀಶ ಕೋರ್ಪಡೆ, ನಾರಾಯಣ ಬಿಸಲಹಳ್ಳಿ, ಗಣೇಶ ದೇವಗಿರಿಮಠ, ಪ್ರಭು ಹಲಗೇರಿ, ಪ್ರಕಾಶ ಗಚ್ವಿನಮಠ, ಕಾರ್ಯದರ್ಶಿ ಪ್ರಕಾಶ್ ಬನ್ನಿಕೋಡು ಸೇರಿದಂತೆ ಮತ್ತಿತರು ಇದ್ದರು.