ಡಾ. ರಾಜಕುಮಾರ ಅಂತ ಮಹಾನ್ ನಟನನ್ನು ಕಲಾ ಜಗತ್ತಿಗೆ ನೀಡಿದ್ದೇ ರಂಗಭೂಮಿ
ರಾಣೇಬೆನ್ನೂರು 10: ರಂಗಭೂಮಿ ಕಲಾ ಪ್ರತಿಭೆಗಳನ್ನು ಹುಟ್ಟುಹಾಕುವ ಒಂದು ವಿಶ್ವವಿದ್ಯಾಲಯವಿದ್ದಂತೆ, ನಿಜವಾದ ಕಲೆ ಅರಳುವುದೇ ರಂಗಭೂಮಿಯಿಂದ ಡಾಽಽ ರಾಜಕುಮಾರ ಅಂತ ಮಹಾನ್ ನಟನನ್ನು ಇಡೀ ಕಲಾ ಜಗತ್ತಿಗೆ ನೀಡಿದ್ದೇ ‘ ರಂಗಭೂಮಿ’ ಎಂದು ಪೊಲೀಸ್ ಅಧೀಕ್ಷಕರಾದ ಗೀರೀಶ ಬೋಜಣ್ಣನವರ ಹೇಳಿದರು.
ಅವರು ಇಂದು ತಾಲೂಕಿನ ಹೊಸ ಮುಷ್ಟೂರ ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರಾ ನಿಮಿತ್ಯವಾಗಿ ದಾವಣಗೆರೆಯ ಖ್ಯಾತ ಹಿರಿಯ ರಂಗಭೂಮಿ ನಟಿ ಭಾರತಿ ನೇತೃತ್ವದ ವಸಂತ ಕಲಾ ನಾಟ್ಯ ಸಂಘದವರು ಪ್ರದರ್ಶಿಸಿದ ‘ ಸತಿ ಸಂಸಾರದ ಜ್ಯೋತಿ’ ಎಂಬ ಸುಂದರ ಕೌಟುಂಬಿಕೆ ಹಿನ್ನಲೆಯ ಸಾಮಾಜಿಕ ಬಯಲು ನಾಟಕ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಇತ್ತೀಚೆಗೆ ಟಿ.ವಿ, ಧಾರವಾಹಿ ಮತ್ತು ಸಿನಿಮಾ ಜಗತ್ತಿನ ಹಾವಳಿಯಿಂದ ರಂಗಭೂಮಿಯ ಕಲೆ ನಶಿಸುತ್ತಿದೆ, ಇದರಿಂದ ವೃತ್ತಿ ನಿರತ ಮತ್ತು ರಂಗಭೂಮಿಯನ್ನೇ ನಂಬಿದ ಕಲಾವಿದರ ಬದುಕು ಬರಡಾಗುತ್ತಿದೆ, ಸರಕಾರಗಳು ಈ ಕಲಾವಿದರಿಗೆ ಆಸರೆಯಾಗುವಂತಹ ರಂಗಕಲೆ ಉಳಿಯುವಂತ ಹೊಸ ಹೊಸ ಯೋಜೆನಗಳನ್ನು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಮುಖಾಂತರ ಜಾರಿಗೆ ತರಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೋಲ್ಡ್ನ್ ಹ್ಯಾಚರೀಸ್ ಪ್ರೈ.ಲಿ.ನ ಜನರಲ್ ಮ್ಯಾನೇಜರ್ ಎನ್. ಲೋಕೇಶರವರು ಮಾತನಾಡಿ ಜಾತ್ರೆಗಳು ಮಾನವ ಸಂಬಂಧಗಳನ್ನು ಬಲಿಷ್ಠಗೊಳಿಸಿ ಗ್ರಾಮೀಣ ಸೊಗಸು, ಸಂಸ್ಕಾರ, ಸಂಪ್ರದಾಯಗಳನ್ನು ವೃದ್ಧಿಗೊಳಿಸುತ್ತವೆ. ಎಲ್ಲರನ್ನು ಒಗ್ಗೂಡಿಸಿ ಇಂಥಹ ಶ್ರೇಷ್ಠ ಕಾರ್ಯಕ್ರಮವನ್ನು ಮಾಡುತ್ತಿರುವ ಕಾರ್ಯಕ್ರಮಗಳ ಕೇಂದ್ರ ಬಿಂದು, ರೈತ ಮುಖಂಡ ರವೀಂದ್ರಗೌಡ ಪಾಟೀಲರ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಗೋಲ್ಡ್ನ್ ಹ್ಯಾಚರೀಸ್ ಪ್ರೈ.ಲಿ.ನ ಎಚ್.ಆರ್.ಡಿ. ಭೀಮಪ್ಪ ಮತ್ತು ಗಣ್ಣ ವರ್ತಕರಾದ ಸಂತೋಷ ಪಿ. ಬಗಾಡೆಯವರ ಜನ್ಮದಿನವನ್ನು ಅದೇ ರಂಗಸಜ್ಜಿಕೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಚಿಕನ್ ಫ್ಯಾಕ್ಟರಿಯ ನೌಕರರು ಮತ್ತು ಅವರ ಊರ ಅಭಿಮಾನಿಗಳು ಕೇಕೆ ಚಪ್ಪಾಳೆ, ಸಿಳ್ಳು ಹೊಡೆಯುವ ಮೂಲಕ ಸಂತೋಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಲ್ಯಾಂಡ ಟ್ರಿಬೂನಲ್ ಕಮಿಟಿಯ ಸರಕಾರದ ನಾಮ ನಿರ್ದೇಶಿತ ಸದಸ್ಯ ಷಣ್ಮುಖಗೌಡ, ಸಣ್ಣಹನುಮನಗೌಡ್ರ, ಚಂದ್ರಣ್ಣ ಹೆಚ್ ಬೇಡರ, ಶಿದ್ದನಗೌಡ ಗೋವಿಂದಗೌಡ್ರ, ಈರಣ್ಣ ಹಲಗೇರಿ, ಬಸವರಾಜ ಕೊಂಗಿಯವರ, ಗುರಣ್ಣ ಉಪ್ಪಿನ ಸಾವಿರ ನಾಟಕಗಳ ಎಂಬ ಬಿರುದು ನಾಮಾಂಕಿತ ಸಂಗೀತ ನಿರ್ದೇಶಕ ಬಸವಣ್ಣೆಪ್ಪ ಡಿ ದೇವರಮನಿ, ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಯರೇಕುಪ್ಪಿ, ಬಸವರಾಜ ಯಲಕ್ಕನವರ, ಚಳಗೇರಿ ಟೋಲ್ ಪ್ಲಾಜಾದ ಮ್ಯಾನೇಜರ್ ಹನಮಂತಪ್ಪಾ ಸಿ ವಾಯ್ ಮುಂತಾದವರು ಭಾಗವಹಿಸಿದ್ದರು.
ರವೀಂದ್ರಗೌಡ ಪಾಟೀಲ ನೇತೃತ್ವದಲ್ಲಿ ಪ್ರದರ್ಶಿಸಿದ ‘50’ನೇ ಕಲಾಕುಸುಮದ ಬಗ್ಗೆ ಮಾತನಾಡಿದ ಡಿ.ವೈ.ಎಸ್.ಪಿ ಗೀರೀಶ ಬೋಜಣ್ಣನವರ ಕನ್ನಡ ಚಲನ ಚಿತ್ರದ ‘ಕರ್ಣ’ ಕನ್ನಡ ಚಲನಚಿತ್ರ ‘ಆ ಕರ್ಣನಂತೆ ನೀ ದಾನಿಯಾದೆ’ ಎಂಬ ಹಾಡನ್ನು ರವೀಂದ್ರಗೌಡ ಪಾಟೀಲರ ಹೋರಾಟದ ಬದುಕಿಗೆ ಅರ್ಿಸಿ ಸೊಗಸಾಗಿ ತಮ್ಮ ಮಧುರ ಕಂಠದಿಂದ ಹಾಡಿ ನೆರೆದ ಜನತೆಯ ಹೃದಯ ಸ್ಪರ್ಶಿಸಿದರು. ಇದರಿಂದ ಅಭಿಮಾನಿಗಳ ಕೇಕೆ, ಚಪ್ಪಾಳೆ ಮುಗಿಲು ಮುಟ್ಟಿತ್ತಲ್ಲದೆ ಪೊಲೀಸ್ ಅಧಿಕಾರಿಯೊಬ್ಬರ ಅಂತರಾಳದಲ್ಲಿ ಅಡಗಿದ ಅದ್ಭುತ ಕಲೆ ಹೊರಹೊಮ್ಮಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಮುಖಂಡ, ಕಾರ್ಯಕ್ರಮದ ರುವಾರಿ, ಚಿಂತಕ ರವೀಂದ್ರಗೌಡ ಎಫ್. ಪಾಟೀಲ ವಹಿಸಿದ್ದರು. ಕನ್ನಡ ಪ್ರಾಧ್ಯಾಪಕ ಶ್ರೀನಿವಾಸ ನಲವಾಗಲ ಅಚ್ಚುಕಟ್ಟಾಗಿ ಕಾರ್ಯಕ್ರಮ ನೆರವೇರಿಸಿಕೊಟ್ಟರು.