ಶಿಗ್ಗಾವ್

ಬಸವರಾಜ ಹೊರಟ್ಟಿ ಅತ್ಯಧಿಕ ಮತಗಳಿಂದ ಗೆಲ್ಲುವುದು ಸತ್ಯ: ಮ್ಯಾಗೇರಿ

ಬಸವರಾಜ ಹೊರಟ್ಟಿ ಅತ್ಯಧಿಕ ಮತಗಳಿಂದ ಗೆಲ್ಲುವುದು ಸತ್ಯ: ಮ್ಯಾಗೇರಿ

ಶಿಗ್ಗಾವಿ 10: ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಸವರಾಜ ಹೊರಟ್ಟಿ ಅವರು ಅತಿ ಹೆಚ್ಚು ಮತಗಳಿಂದ ಗೆಲ್ಲುವುದು ಅಷ್ಟೇ ಸತ್ಯ ಎಂದು ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.   

 ಬಂಕಾಪುರ ಕೀರ್ತಿ ಸ್ಕೂಲಿನ ಶಿಕ್ಷಕರನ್ನು ಉದ್ದೇಶಿಸಿ ಮತಯಾಚಿಸಿ ಮಾತನಾಡಿದ ಅವರು ಸತತವಾಗಿ ಸೋಲಿಲ್ಲದ ಸರದಾರರಾಗಿ ವಿಧಾನಪರಿಷತ್ ಸದಸ್ಯರಾಗಿ 42 ವರ್ಷ ಸುದೀರ್ಘವಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕರ ಧ್ವನಿಯಾಗಿ  ಹೋರಾಟದಿಂದ ಗೆಲ್ಲುತ್ತ ಬಂದಿದ್ದಾರೆ. ಈಗ ಎಂಟನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹೊರಟ್ಟಿ ಅವರು ದಾಖಲೆಯ ಮತಗಳನ್ನು ಪಡೆದು ಜಯಶಾಲಿಯಾಗಿ ಗಿನ್ನಿಸ್ ದಾಖಲೆ ಮಾಡುತ್ತಾರೆ ಎಂದರು.   

ಅನುದಾನ ರಹಿತವಾದ ಖಾಸಗಿ ಶಾಲಾ ಕಾಲೇಜುಗಳಿಗೆ ಅನುದಾನ ಕೊಡಿಸಿ ಸುಮಾರು 23 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಕಾಯಂಗೊಳಿಸಿ ಅವರ ಜೀವನ ಭದ್ರತೆಯನ್ನು ಒದಗಿಸಿದ ಕೀರ್ತಿ ಹೊರಟ್ಟಿ ಅವರಿಗೆ ಸಲ್ಲುತ್ತದೆ. ಶಿಕ್ಷಕರ ನೇಮಕ ವರ್ಗಾವಣೆ ವೇತನ ಪರಿಷ್ಕರಣೆ ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಹುಡುಕಿ ಶಿಕ್ಷಕರಿಗೆ ಮನೋಧೈರ್ಯ ತುಂಬುತ್ತಾ ಬೆಳೆದು ಬಂದವರು ಹೊರಟ್ಟಿ. ಅವರಿಗೆ ಇನ್ನೊಂದು ಹೆಸರೇ ಪರಿಹಾರ ಮತ್ತು ಹೋರಾಟ ಎಂದರೆ ತಪ್ಪಾಗಲಾರದು.  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಜನಪರ ಹಾಗೂ ಶಿಕ್ಷಕರ ಪರವಾದ ಆಡಳಿತ ಕಂಡು ಅಪೂರ್ವವಾದ ಗೆಲುವು ಸಾಧಿಸಲು ಶಿಕ್ಷಕರು ಈಗಾಗಲೇ ಸನ್ನದ್ಧರಾಗಿದ್ದಾರೆ ಎಂದರು. ಕಾರಣ ಶೈಕ್ಷಣಿಕ ತಜ್ಞರಾದ ಬಸವರಾಜ ಹೊರಟ್ಟಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅಭೂತಪೂರ್ವವಾದ ಜಯ ನೀಡುವಲ್ಲಿ ತಾವು ಪಾತ್ರರಾಗಬೇಕೆಂದು ವಿನಂತಿಸಿದರು.    ತಾಲೂಕ ಅಧಿಕಾರಿಗಳು ಪುರಸಭೆಯ ಸದಸ್ಯರು ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ