ರಾಣೆಬೆನ್ನೂರ

ಮಣ್ಣಿನ ಆರೋಗ್ಯ ಕಾಪಾಡುವುದು ರೈತರ ಹೊಣೆ

ಮಣ್ಣಿನ ಆರೋಗ್ಯ ಕಾಪಾಡುವುದು ರೈತರ ಹೊಣೆ

ಬೇಸಾಯ ಶಾಸ್ತ್ರ ಪ್ರಾಧ್ಯಾಪಕಿ ಡಾ.ಪ್ರಿಯಾ ಹೇಳಿಕೆ |  ಹನುಮಾಪುರದಲ್ಲಿ ಮಣ್ಣು ಆರೋಗ್ಯ ಅಭಿಯಾನ 

ರಾಣಿಬೆನ್ನೂರ 19: ಮಣ್ಣು ಭೂಮಿಯ ಮೇಲ್ಪದರಿನಲ್ಲಿರುವ ಶಿಥಲೀಕರಣಗೊಂಡ ಶಿಲೆ ಮತ್ತು ಖನಿಜಗಳ ಪುಡಿ, ಇದು ಸಸ್ಯ ಮತ್ತು ಮಾನವ ವಳಗೊಂಡಂತೆ ಪ್ರಾಣಿಗಳ ಪೋಶಣೆ ಮತ್ತು ಬೆಳವಣಿಗೆ ಅವಶ್ಯಕ. ಪರಿಸರದ ಆಯಾಮಗಳಾದ ಗಾಳಿ, ಜಲ, ಜೀವಿಗಳು ಮತ್ತು ಶಿಲೆಗಳಂತೆ ಮಣ್ಣುಒಂದು ಅವಿಭಾಜ್ಯ ಅಂಗವಾಗಿದೆ ಎಂದು ಹನುಮನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ಪ್ರಾಧ್ಯಾಪಕಿ ಡಾ. ಪ್ರೀಯಾ ಹೇಳಿದರು. 

ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ರಾಣೇಬೆನ್ನೂರು ನೀಡ್ಸ್ ಸಂಸ್ಥೆ ಆಯೋಜಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಪರಿಸರದ ವಿವಿಧ ಕಾರ್ಯದಲ್ಲಿ ಮಣ್ಣಿನ ಪಾತ್ರ ಅತಿ ಪ್ರಮುಖವಾದುದ್ದು, ಆಹಾರ ಧಾನ್ಯಗಳನ್ನು ಬೆಳೆಯಲು ಫಲವತ್ತಾದ ಮಣ್ಣು ಅವಶ್ಯಕ ಮತ್ತು ಕೃಷಿ ಸುಸ್ಥಿರ ಹಾಗೂ ಲಾಭದಾಯಕವಾಗಲು ಮಣ್ಣಿನ ಪಾತ್ರ ಹಿರಿದಾಗಿದೆ ಎಂದ ಅವರು, ನೀರನ್ನು ಶುದ್ಧಗೊಳಿಸುವಿಕೆ, ಸತ್ತ ಪ್ರಾಣಿಗಳ ಕೊಳೆಯುವಿಕೆ, ಸಾವಯವ ತ್ಯಾಜ್ಯ ವಸ್ತುಗಳ ವಿಭಜನೆ ಮತ್ತು ವಿಷಕಾರಿ ವಸ್ತುಗಳನ್ನು ವಿಷರಹಿತ ಮಾಡುವುದು ಮಣ್ಣಿನಿಂದ ಮಾತ್ರ ಸಾಧ್ಯವಾಗುವುದು ಎಂದರು. 

ಪೋಷಕಾಂಶ ಮೂಲ ವಸ್ತುಗಳು ರೂಪಾಂತರಗೊಳ್ಳುವ ರಾಸಾಯನಿಕ ಕ್ರಿಯೆಗಳು ಮಣ್ಣಿನಲ್ಲಿ ನಡೆಯುತ್ತವೆ. ಮಣ್ಣುಇಲ್ಲದೆ ಪರಿಸರ, ಪ್ರಾಣಿ, ಸಸ್ಯ ಮತ್ತು ಮಾನವನ ಬದುಕು ಊಹಿಸಲು ಅಸಾಧ್ಯ. ಪ್ರಚಲಿತದಲ್ಲಿರುವ ನಾನ್ನುಡಿ “ಮಣ್ಣಿನಿಂದ ಮಾನವ” ತುಂಬಾ ಸೂಕ್ತವೆನಿಸುತ್ತದೆ ಎಂದರು.  

ನೀಡ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಚ್.ಎಫ್ ಅಕ್ಕಿ ಮಾತನಾಡಿ ಸಾವಯವ ವಸ್ತು ಸಸ್ಯ ಪೋಷಕಗಳ ಭಂಡಾರ.ಅದರಲ್ಲಿಯೂ ಮುಖ್ಯವಾಗಿ ಮಣ್ಣುಗಳಲ್ಲಿರುವ ಸಾರಜನಕದ ಭಂಡಾರ. ಈ ದೃಷ್ಟಿಯಿಂದ ನೋಡಿದಾಗ ಮಣ್ಣಿನಲ್ಲಿ ಸಾವಯವ ವಸ್ತು ಶೇಕಡಾ 2-10 ಭಾಗ ಮಾತ್ರ ಇರುವುದಾದರೂ ಮಣ್ಣುಗಳಲ್ಲಿರುವ ಅಸಾಧಾರಣ  ಪ್ರಾಮುಖ್ಯತೆ ಇರುವುದು ಕಂಡುಬರುತ್ತದೆ ಎಂದರು.

ಹವಮಾನ ತಜ್ಞ ಡಾ. ಶಾಂತವೀರಯ್ಯ   ಹಮಾಮಾನ ಕುರಿತಂತೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹವಾಮಾನದ ಮಾಹಿತಿ ವದಗಿಸಲಾಗುವುದು. ಕೃಷಿ ವಿಜ್ಞಾನ ಕೇಂದ್ರದಲ್ಲಿ ನೊಂದಣಿ ಮಾಡಿಕೊಂಡ  ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಪಡೆಯಬಹುದಾಗಿದೆ. ಅಲ್ಲದೆ ಕಾಲ ಕಾಲಕ್ಕೆ ಹವಾಮಾನದ ವರದಿಗಳನ್ನು ನೀಡಲಾಗುತ್ತಿದೆ. ವರದಿ ಆದರಿಸಿ ರೈತರು ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹನಮಾಪುರ ಗ್ರಾಮ ಪಂಚಾಯತಿಯ ರಾಧವ್ವ ತಳವಾರ್, ತಿಪ್ಪೇಶಪ್ಪ ಕನ್ನಮ್ಮನವರ್, ಪ್ರಶಾಂತ ಡಿ. ಬಿ.  ಪರಶುರಾಮ ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ