‘ಮಾನೆಯವರ ಗೆಲುವು ಅಲ್ಲ ಕಾಂಗ್ರೆಸ ಪಕ್ಷದ ಗೆಲುವು’
ಶಿಗ್ಗಾವಿ 06: ಹಾನಗಲ್ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಗೆದ್ದ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ವಿಜಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ನೆರವೇರಿತು.
ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸನ್ಮಾನ ಸ್ವೀಕರಿಸಿ ಮಾತನಾಡಿ ಇದು ಮಾನೆಯವರ ಗೆಲುವು ಅಲ್ಲ ಕಾಂಗ್ರೆಸ ಪಕ್ಷದ ಗೆಲುವು. ಅಲ್ಲದೇ ಹಣಗೋಸ್ಕರ ಮತಮಾರದೇ ಅಧಿಕಾರಗೋಸ್ಕರ ಮತಮಾರದೇ ಪ್ರಾಮಾಣಿಕ ವ್ಯಕ್ತಿಯ ಆಯ್ಕೆಗೆ ಬಯಸಿದ್ದು ತುಂಬಾ ಖುಷಿವಿಚಾರ, ಆ ನಿಟ್ಟಿನಲ್ಲಿ ಎಷ್ಟೇ ಕಷ್ಟ ಎಷ್ಟೇ ಒತ್ತಡದ ಮದ್ಯೆ ಶ್ರೀನಿವಾಸ ಮಾನೆಯವರು ಗೆಲ್ಲಲು ನಿರಂತರವಾಗಿ ಜಿಲ್ಲೆಯ ಎಲ್ಲ ಕಾರ್ಯಕರ್ತರು, ಮುಖಂಡರು, ನಾಯಕರು, ನಿರಂತರವಾಗಿ ಹಗಲಿರುಳು ಶ್ರಮಿಸಿದ ಪಲವಾಗಿ ಇಂದು ಮಾನೆಯವರ ಗೆಲುವುವಾಗಿದೆೆ ಎಂದರು.
ಹಾನಗಲ್ಲ ಮೊದಲನೆಯ ಚುನಾವಣೆ ಇಲ್ಲಿಂದ ಟ್ರಯಲ್ ಪ್ರಾರಂಭ 2023 ಕ್ಕೆ ತಾಲೂಕಿನಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿಯನ್ನು ಆಯ್ಕೆಮಾಡಲು ಸಂಕಲ್ಪ ಮಾಡೋಣ ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಉತ್ತಮ ಸಂಘಟನೆಯಾಗಬೇಕು, ಕಾರ್ಯಕರ್ತರ ಮನೋಭಾವನೆ ಬದಲಾವಣೆಯಾಗಬೇಕು, ಎಲ್ಲ ಹಿರಿಯರಿಗೆ ಸೌಹಾರ್ದಯುತವಾಗಿ ನೆಡೆದುಕೊಂಡು ಹೋಗುವ ವಾತಾವರಣವನ್ನು ಕಾರ್ಯಕರ್ತರು, ಮುಖಂಡರು, ನಾಯಕರು ನಿರ್ಮಾಣ ಮಾಡಬೇಕು ಎಂದರು.
ಹಾನಗಲ್ಲ ನೂತನ ಶಾಸಕ ಶ್ರೀನಿವಾಸ ಮಾನೆ ಸನ್ಮಾನ ಸ್ವೀಕರಿಸಿ ಮಾತನಾಡಿ ನಿರಂತರವಾಗಿ 21 ದಿನಗಳ ಕಾಲ ನನ್ನ ಗೆಲುವಿಗೆ ಶ್ರಮಿಸಿದ ತಾಲೂಕಿನ ಕಾಂಗ್ರೆಸನ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿ ನಾನು ನಿಮಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು. ವೇದಿಕೆ ವಿಜಯೋತ್ಸವ ಕಾರ್ಯಕ್ರಮ ಪೂರ್ವದಲ್ಲಿ ಪಟ್ಟಣದಲ್ಲಿ ಬೈಕ ರಾ್ಯಲಿ ಮುಖಾಂತರ ಜಯಘೋಶ ಕೂಗುತ್ತಾ ಚೆನ್ನಮ್ಮ ವೃತ್ತದ ಬಳಿ ಬಂದ ನಂತರ ಜೆ.ಸಿ.ಬಿ ಮುಖಾಂತರ ಪುಷ್ಪ ಸಮರೆ್ಣ ಮುಖಾಂತರ ಡಿ.ಕೆ.ಶಿವಕುಮಾರ ಹಾಗೂ ಸಲೀಂ ಆಹ್ಮದ, ಶ್ರೀನಿವಾಸ ಮಾನೆ ಅವರಿಗೆ ಭರ್ಜರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯಾದ್ಯಕ್ಷ ಸಲೀಂ ಆಹ್ಮದ, ಮಾಜಿ ಸಚಿವ ಬಸವರಾಜ ಶಿವಣ್ಣವರ, ಅಧ್ಯಕ್ಷತೆ ಎಂ.ಎನ್. ವೇಂಕೋಜಿ, ಶ್ರೀಕಾಂತ ದುಂಡಿಗೌಡ್ರ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ನಾಗಪ್ಪ ತಿಕ್ಕಪ್ಪನವರ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಮುಸ್ತಾಕ ಅಹ್ಮದ ತಹಶೀಲ್ದಾರ, ಮುನ್ನಾ ಲಕ್ಷ್ಮೇಶ್ವರ, ರಶೀದ ಗೋಟಗೋಡಿ, ಮುಕ್ತಿಯಾರ ತಿಮ್ಮಾಪೂರ, ಗ್ರಾ.ಪಂ. ಸದಸ್ಯ ಹಾಗೂ ಪಂಚಾಯತ ರಾಜ ತಾಲೂಕ ಅಧ್ಯಕ್ಷ ಬಿ.ಸಿ.ಪಾಟೀಲ, ಶಿವಾನಂದ ಬಾಗೂರ, ಸಿದ್ದಣ್ಣಾ ಮೊರಬದ, ಹನುಮರೆಡ್ಡಿ ನಡುವಿನಮನಿ, ಬಸನಗೌಡ ದುಂಡಿಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ಎಸ್.ಎಫ್.ಮಣಕಟ್ಟಿ, ಪ್ರಕಾಶ ಹಾದಿಮನಿ, ಹನುಮಂತ ಬಂಡಿವಡ್ಡರ, ಮುನ್ನಾ ಗುಲ್ಮೀ, ಮಂಜುನಾಥ ತಿಮ್ಮಾಪೂರ, ಶಬ್ಬೀರ ಮಕಾಂನದಾರ, ಮಂಜುನಾಥ ಮಣ್ಣಣ್ಣವರ, ಪ್ರೇಮಾ ಪಾಟೀಲ, ಎಫ್.ಸಿ.ಪಾಟೀಲ, ವಸಂತಾ ಬಾಗೂರ, ಮಹಾಂತೇಶ ಸಾಲಿ, ಕಿರಣಗೌಡ ಪಾಟೀಲ, ಚಂದ್ರು ಹೆಬ್ಬಾರ, ಜಾಫರ್ ಭಾಗವಾನ್, ಗುಡ್ಡಪ್ಪ ಜಲದಿ, ಸುಮಿತ ಸೂರ್ಯವಂಶಿ, ಗದಿಗೆಪ್ಪ ಬಾಳಿಕಾಯಿ, ಸರತಾಜ್ ಹಾನಗಲ್, ಮಜಿದ್ ಮಾಳಗೀಮನಿ, ರಮೇಶ ದುಗ್ಗತ್ತಿ, ರಾಜೇಶ ಕಮ್ಮಾರ, ಸೇರಿದಂತೆ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು. ಸುಧೀರ ಲಮಾಣಿ ನಿರೂಪಿಸಿದರು, ಯುವ ಮುಖಂಡ ಶ್ರೀಕಾಂತ ದುಂಡಿಗೌಡ್ರ ಸ್ವಾಗತಿಸಿದರು, ಶ್ರೀಕಾಂತ ಪೂಜಾರ ವಂದಿಸಿದರು.