ಶಿಗ್ಗಾವ್

ಗಂಗೆಬಾವಿ ಅಭಿವೃದ್ಧಿಪಡಿಸುವುದು ಅವಶ್ಯ: ಸಂಜೀವಕುಮಾರ

ಗಂಗೆಬಾವಿ ಅಭಿವೃದ್ಧಿಪಡಿಸುವುದು ಅವಶ್ಯ: ಸಂಜೀವಕುಮಾರ

ಶಿಗ್ಗಾವಿ 17: ಕಾಶಿಯಿಂದ ಗಂಗೆಯೇ ಬರುವ ಸ್ಥಳ ಗಂಗೆಬಾವಿಯನ್ನು ಅಭಿವೃದ್ಧಿ ಪಡಿಸುವ ಅವಶ್ಯವಿದ್ದು, ಶಶಿಧರ ಯಲಿಗಾರ ಅವರು ನಿರ್ಮಾಣ ಮಾಡುತ್ತಿರುವ ರೆಸಾರ್ಟನಿಂದ ಗಂಗೆಬಾವಿ ಹೆಸರು ಪ್ರಖ್ಯಾತಿ ಪಡೆಯುತ್ತಿದ್ದೆ ಎಂದು ಹಾವೇರಿ ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮಹಾ ಮಹಿಮ ಸಿದ್ದರಾಮೇಶ್ವರರ 4 ನೇ ವರ್ಷದ ರಥೋತ್ಸವ ಹಾಗೂ ಜಾತ್ರಾಮಹೋತ್ಸವದ  ಧರ್ಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಮ್ಮ ತಂದೆಯವರು ಸಿದ್ಧರಾಮೇಶ್ವರರ ಅನುಗ್ರಹದಿಂದ ಪುನರಜನ್ಮ ಪಡೆದಿದ್ದಾರೆ,  ಈ ದೇವಸ್ಥಾನಕ್ಕೆ 3 ಲಕ್ಷ ರೂ ಬಸವೇಶ್ವರ ದೇವಸ್ಥಾನಕ್ಕೆ 4 ಲಕ್ಷ ರೂಳನ್ನು ಮಾಜಿ ಸಚಿವ ರುದ್ರಪ್ಪ ಲಮಾಣಿಯವರು ಅನುದಾನ ನೀಡಿದ್ದರು ಎಂದರು.

ಸಿ ಬಿ ಯಲಿಗಾರ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಮಾತನಾಡಿ ದಕ್ಷಿಣ ಕಾಶಿಯಂದೆ ಪ್ರಖ್ಯಾತಿ ಗಂಗೆಬಾವಿಯನ್ನು ಉನ್ನತ ಮಟ್ಟದಲ್ಲಿ ಬೆಳಸಿದರೆ ಈ ಸ್ಥಳ ಧರ್ಮಸ್ಥಳವಾಗುತ್ತದೆ ಎಂದರು.

ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ದೇವರಿರುವ ಪ್ರತಿಕವೇ ಜಾತ್ರೆಗಳು, ಧಾನ, ಧರ್ಮಗಳಲ್ಲಿಯೂ ದೇವರಿದ್ದಾನೆ ಎಂದರು.

ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಈ ಗ್ರಾಮ ಭಕ್ತಿ ಪ್ರಧಾನ ಗ್ರಾಮವಾಗಿದ್ದು ಜಾತ್ರೆ ವಿಜ್ರಂಭಣೆಯಿಂದ ನಡೆದಿದೆ. ಗಂಗೆಬಾವಿ ಮಠದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕಿದೆ ಎಂದರು.

ಸುಕ್ಷೇತ್ರ ಗಂಗೇಬಾವಿಯ ಷ,ಬ್ರ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗವಿಮಠದ ಗುರುಶಿದ್ಧೇಶ್ವರ ಮಹಾಸ್ವಾಮಿಗಳು ಸಾನಿದ್ಯ ವಹಿಸಿ ಆಶೀರ್ವಚಿಸಿದರು. 

ಕಾರ್ಯಕ್ರಮದಲ್ಲಿ ಧರ್ಮಕಾರ್ಯದ ದಾನಿಗಳನ್ನು ಸನ್ಮಾನಿಸಲಾಯಿತು. ಶಿಗ್ಗಾವಿ ಎಪಿಎಂಸಿ ಅಧ್ಯಕ್ಷ ಅರ್ಜಪ್ಪ ಲಮಾಣಿ ಸೇರಿದಂತೆ ಯತ್ತಿನಹಳ್ಳಿ, ಮಸಳಿಕೋಪ್ಪ, ಅರಟಾಳ, ಹೊಸೂರ, ಯತ್ತಿನಹಳ್ಳಿ ತಾಂಡಾ, ಬಸವನಕೊಪ್ಪ, ಮಾಕಾಪೂರ, ಜೊಂಡಲಗಟ್ಟಿ, ಗ್ರಾಮಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೃತ್ ಶಿಕ್ಷಕ ನಿತ್ಯಾನಂದ ಬರದೂರ ನಿರೂಪಿಸಿದರು.

ಸುದ್ದಿ ಓದಿ