ನೈಸರ್ಗಿಕ ಸಂಪನ್ಮೂಲದ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ: ಜಾಲವಾದಿ
ತಾಳಿಕೋಟೆ: ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ಮುಂದಿನ ಪೀಳಿಗೆಗೂ ಕಾಯ್ದಿರಿಸಬೇಕು. ಪ್ರಕೃತಿ ಮಾತೆ ಕೊಟ್ಟಿರುವ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಪ್ರೋ.ಆರ್.ವಿ.ಜಾಲವಾದಿ ಹೇಳಿದರು.
ಅವರು ಪಟ್ಟಣದ ವೀರಶೈವ ವಿಧ್ಯಾವರ್ದಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಶಕ್ತಿ ಸಂರಕ್ಷಣಾ ದಿನ ಮತ್ತು ರಾಷ್ಟ್ರೀಯ ಶಕ್ತಿ ಇಂಧನ ಸಂರಕ್ಷಣಾ ದಿನದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನ ಅಹಿತಕರ ಕೃತ್ಯಗಳಿಂದ ಪ್ರಕೃತಿಯಲ್ಲಿ ವೈಪರೀತ್ಯ ಉಂಟಾಗುತ್ತಿದ್ದು, ಅದನ್ನು ತಡೆಯಲು ಭೂಮಿ ಮೇಲಿರುವ ಪ್ರತಿಯೊಬ್ಬ ಮಾನವನ ಕರ್ತವ್ಯವಾಗಿದೆ. ಅತಿಯಾದ ಪ್ಲಾಸ್ಟಿಕ್, ರಬ್ಬರ್ ಮತ್ತು ಕಾಗದದ ಬಳಕೆಯಿಂದ ಪ್ರಾಣಿ ಜೀವ ಸಂಕುಲ ನಾಶವಾಗುತ್ತಿದೆ. ಅದನ್ನು ತಡೆಯಲು ನಾವೆಲ್ಲರೂ ಮುಂದಾಗಬೇಕೆಂದು ವಿದ್ಯಾರ್ಥಿಗಳಗೆ ಕರೆ ನೀಡಿದರು.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಎನ್.ಆರ್.ಚೌಕಿಮಠ ಮಾತನಾಡಿ, ಶಕ್ತಿ ಸಂಪನ್ಮೂಲ ಬಳಕೆ ಪ್ರತಿಯೊಬ್ಬರ ಹಕ್ಕು. ಅದನ್ನು ಹಿತವಾಗಿ-ಮಿತವಾಗಿ ಬಳಸಿದಾಗ ಮುಂದಿನ ಪೀಳಿಗೆಗೆ ಮತ್ತು ಭವಿಷ್ಯದ ಬೆಳಕಿಗೆ ಅನುಕೂಲವಾಗುತ್ತದೆ ಎಂದರು.
ಇಕೋ ಕ್ಲಬ್‌ನ ಕಾರ್ಯಕ್ರಮಾಧಿಕಾರಿ ಆರ್.ವಿ.ಮಿಸ್ಕಿನ್, ಇಕೋ ಕ್ಲಬ್‌ನ ಸದಸ್ಯರಾದ ಕೆ.ಬಿ.ದೇಸಾಯಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.