ಆಧುನಿಕ ಯುಗದಲ್ಲಿ ದಿನಪತ್ರಿಕೆ ನಡೆಸುವುದು ಕ್ಲಿಷ್ಟಕರ: ಸೈಯದ್ ಅಲಿ
ಇಂಡಿ30: ತಾಲೂಕು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ ಮತಾಂತರ ಹಾಗೂ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಅನೇಕ ಕಡೆ ತಾಂಡಾಗಳಲ್ಲಿ ಬಡ ಜನರನ್ನು ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದ್ದು, ಮುಸ್ಲೀಂ ಯುವಕರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಪ್ರೀತಿ ಪ್ರೇಮದ ಆಸೆೆ ಹಚ್ಚಿ ಲವ್ ಜಿಹಾದ್ ಮಾಡುತ್ತಿದ್ದಾರೆ. ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಮಠ-ಮಂದಿರಗಳ ಪ್ರಮುಖ ಶ್ರೀಮಂತ ದುದ್ದಗಿ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಪ್ರಕರಣಗಳು ನಡೆಯುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿವೆ. ಈಗಾಗಲೇ ಇಂಡಿ ಪೊಲೀಸ್ ಠಾಣೆ ಮತ್ತು ಆಲಮೇಲ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.
ಇಂಡಿ ತಾಲೂಕಿನಲ್ಲಿ ಕ್ರಿಶ್ಚಿಯನ್ ಮಿಶಿನರಿಗಳು ಬಂಜಾರಾ ತಾಂಡಾಗಳನ್ನು ಹಾಗೂ ಹಿಂದುಳಿದ ವರ್ಗ, ದಲಿತ ಕುಟುಂಬ ಗುರಿಯಾಗಿಟ್ಟುಕೊಂಡು, ಹಣದ ಆಮಿಶವೊಡ್ಡಿ ಮತಾಂತರ ಮಾಡುತ್ತಿದ್ದಾರೆ.
ಮಿಸಿನರಿಗಳ ಹಣದ ಆಸೆಗೆ ಹಾಗೂ ಹೆಣ್ಣು ಆಸೆೆ ತೋರಿಸಿ ಮುಗ್ಧ ಹಿಂದುಗಳನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡುವದನ್ನು ವಿಹಿಂಪ ಮತ್ತು ಭಜರಂಗದಳ ಬಲವಾಗಿ ಖಂಡಿಸುತ್ತದೆ ಎಂದರು.
ಭಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ಮತಾಂತರ ಬಗ್ಗೆ ಹೋರಾಟ ಮಾಡುವದಕ್ಕೆ ಪ್ರತಿ ಹಳ್ಳಿ ಹಳ್ಳಿಗೆ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.
ಮತಾಂತರ ತಡೆಯ ಬಗ್ಗೆ ಕಠಿಣ ಕಾನೂನನ್ನು ಉತ್ತರ ಪ್ರದೇಶ ರಾಜ್ಯದ ಮಾದರಿಯಲ್ಲಿ ರಾಜ್ಯದಲ್ಲಿ ಕೂಡ ತರಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗುವದು ಎಂದರು.
ವಿಧಾನಸಭೆ ಸದಸನದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರರವರು ತಾಯಿಯನ್ನೇ ಮತಾಂತರ ಮಾಡಿದ ಬಗ್ಗೆ ಭಾವುಕರಾಗಿ ಸದಸನದಲ್ಲಿ ಚರ್ಚಿಸಿದ್ದಾರೆ. ಮತ್ತು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚೌವ್ಹಾಣರವರು ಕೂಡ ಸದನದಲ್ಲಿ ಬಂಜಾರಾ ತಾಂಡಾದಲ್ಲಿ ಮುಗ್ಧ ಜನರನ್ನು ಗುರಿಯಾಗಿಟ್ಟುಕೊಂಡು ಮತಾಂತರ ಮಾಡುತ್ತಿದ್ದಾರೆ. ನಮ್ಮ ತಾಂಡಾಗಳಲ್ಲಿ ಚರ್ಚಗಳ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಕಾರಣ ಬಹುಸಂಖ್ಯಾತ ಹಿಂದುಗಳ ವಸತಿಗಳಲ್ಲಿ ಚರ್ಚ ಹಾಗೂ ಮಸೀದಿಗಳಿಗೆ ಕಟ್ಟಡ ಅವಕಾಶ ಕೊಡಬಾರದು. ಒಂದು ವೇಳೆ ಕೊಟ್ಟರೆ ಭಜರಂಗದಳ ಮತ್ತು ವಿ.ಹಿಂ.ಪ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಇಂಡಿ ಪಟ್ಟಣದ ಎಂಜೀಲ್ಸ ಶಾಲೆಯಲ್ಲಿ ಮಕ್ಕಳಿಗೆ ಹಣೆಯ ಮೇಲೆ ಕುಂಕುಮ, ಕೈಯಲ್ಲಿ ಬಳೆ, ದಾರ, ಕೊರಳಿನಲ್ಲಿ ಶಿವಧಾರ ಧರಿಸಿಕೊಳ್ಳದಂತೆ ಸಂಸ್ಥೆಯ ಮುಖ್ಯಸ್ಥ ಸ್ಟೀಫನ್ ಶಿರೋಮಣಿ ಮಕ್ಕಳಿಗೆ ಹೇಳುತ್ತಿರುವುದು ಕಂಡು ಬಂದಿದೆ. ಈ ಶಾಲೆಯ ಮುಖ್ಯಸ್ಥರ ಇಂತಹ ವರ್ತನೆಯೂ ಸಹ ಮತಾಂತರದ ಹುನ್ನಾರದಂತಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿ.ಹಿಂ.ಪ ತಾಲೂಕಾ ಮುಖಂಡ ಪಾಪು ಕಿತ್ತಲಿ, ಭಜರಂಗದಳದ ತಾಲೂಕಾ ಅಧ್ಯಕ್ಷ ಪ್ರಕಾಶ ಬಿರಾದಾರ, ಉಪಾಧ್ಯಕ್ಷ ಮಲ್ಲು ಗುಡ್ಲ, ವಿಜಯಕುಮಾರ ರಾಠೋಡ, ರಾಜಗುರು ದೇವರ, ಬಜರಂಗದಳದ ಶಂಕರ ಹಲವಾಯಿ, ಪ್ರವೀಣ ಮಠ, ಸಂಜು ರಾಠೋಡ ಮತ್ತಿತರಿದ್ದರು.