ಈಶಾ 16 ಗ್ರಾಮೀಣ ಕ್ರೀಡಾಕೂಟ
ಯರಗಟ್ಟಿ 17: ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಈಶಾ ಪೌಂಡೇಶನ್ ಸಹಯೋಗದಲ್ಲಿ ಈಶಾ 16 ಗ್ರಾಮೀಣ ಕ್ರೀಡಾಕೂಟ ರವಿವಾರ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್. ಎಸ್. ಕುರುಬಗಟ್ಟಿಮಠ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕ್ರೀಡೆಗಳ ತರಬೇತಿ ಕೊರತೆ ಹಿನ್ನೆಲೆಯಲ್ಲಿ ಹಲವು ಪ್ರತಿಭೆಗಳು ಕಮರಿ ಹೋಗಿವೆ ಎಂದು ಹೇಳಿದರು. ಮಂಜುನಾಥ ತಡಸಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಕ್ರೀಡಾಕೂಟಗಳಿಂದ ಮಕ್ಕಳಲ್ಲಿ ಸಹೋದರ ಭಾವನೆ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.ಕ್ರೀಡಾಕೂಟದಲ್ಲಿ ಸೋಲು ಗೆಲವಿನ ಸೋಪಾನ ಎಲ್ಲರೂ ಸೋಲನ್ನು ಮುಂದಿನ ಗೆಲುವಿಗೆ ದಾರಿಯನ್ನಾಗಿಸಿಕೊಳ್ಳಬೇಕು ಎಂದರು.
ಈ ವೇಳೆ ಡಾ. ವಿಶ್ವನಾಥ ತಾವಂಶಿ, ಶಿಕ್ಷಕರಾದ ಸಂತೋಷ ತಳವಾರ, ಆರ್. ಎಸ್. ಕಲ್ಲಣ್ಣವರ, ಎಚ್. ಎಸ್. ನಾಯ್ಕರ, ಶೇಖರಡ್ಡಿ ಗುಳಗಂದಿ, ಚನ್ನಬಸವೇಶ್ವರ, ಶಂಕರ ಗುಳಗಂದಿ ಮೊದಲಾದವರು ಹಾಜರಿದ್ದರು.