ಕಾಗವಾಡ

ವರ್ಷದೊಳಗಾಗಿ ಸಿಎಂ ಹಸ್ತದಿಂದ ನೀರಾವರಿ ಯೋಜನೆ ಉದ್ಘಾಟನೆ: ಸವದಿ

ವರ್ಷದೊಳಗಾಗಿ ಸಿಎಂ ಹಸ್ತದಿಂದ ನೀರಾವರಿ ಯೋಜನೆ ಉದ್ಘಾಟನೆ: ಸವದಿ

ಕಾಗವಾಡ 27: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಮುಂಬರುವ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಿ, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಂದ ಉದ್ಘಾಟಿಸುವುದಾಗಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಅವರು, ಶನಿವಾರ ದಿ. 26 ರಂದು ಸಂಜೆ ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ​‍್ಿಸಿ ಮಾತನಾಡುತ್ತಿದ್ದರು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು, ಕಾಲುವೆಗಳಿಗೆ ನೀರು ಹರಿದ ಪರಿಣಾಮ ಮದಭಾವಿಯ ದೊಡ್ಡ ಕೆರೆ ತುಂಬಿ ಹರಿಯುತ್ತಿದೆ. ಈ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡು, ಕಾಗವಾಡ ಮತಕ್ಷೇತ್ರದ ಕಟ್ಟ ಕಡೆಯ ಗ್ರಾಮಕ್ಕೆ ಕಾಲುವೆ ಮೂಲಕ ನೀರು ತಲುಪಲಿದೆ ಎಂದರು. 

ಶಾಸಕ ರಾಜು ಕಾಗೆ ಮಾತನಾಡಿ, ಖಿಳೇಗಾಂವ ಬಸವೇಶ್ವರ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುವುದು ನನ್ನ ಸಂಕಲ್ಪ ಆಗಿತ್ತು. ಆದರೆ ಈ ಯೋಜನೆಯ ಅನುಷ್ಢಾನದಲ್ಲಿ ಅನೇಕ ಅಡತಡೆಗಳು ಬಂದ ಪರಿಣಾಮ ಈ ಯೋಜನೆಯ ಅನುಷ್ಠಾನಕ್ಕೆ ವಿಳಂಬವಾಯಿತು ಎಂದರು. ಈ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಅನೇಕ ಅಡಚಣೆಗಳಿದ್ದು, ಅವುಗಳನ್ನು ನಿವಾರಿಸಬೇಕಿದೆ ಎಂದರು. ಇದಕ್ಕಾಗಿ ಈ ಭಾಗದ ರೈತರು ಸಹಕಾರ ನೀಡಲೇ ಬೇಕು. ಆಗ ಮಾತ್ರ ಈ ಯೋಜನೆಯ ಎರಡನೇ ಹಂತ ಪೂರ್ಣಗೊಳ್ಳಲಿದೆ. ರೈತರ ಹೋರಾಟ, ತ್ಯಾಗದ ಪರಿಣಾಮ ಈ ಯೋಜನೆ ಮೊದಲ ಹಂತ ಪೂರ್ಣಗೊಂಡಿದೆ. ಬರುವ ದಿನಮಾನಗಳಲ್ಲಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ ಮುಖಂಡರಾದ ವಿನಾಯಕ ಬಾಗಡಿ, ಮಹಾದೇವ ಕೋರೆ, ನಿಜಗುಣಿ ಮಗದುಮ್ಮ, ಅಪ್ಪಾಸಾಹೇಬ ಚೌಗಲಾ, ಶಿವಾನಂದ ಮಗದುಮ್ಮ, ಅಶೋಕ ಪೂಜಾರಿ, ಕೆ.ಆರ್‌. ಪಾಟೀಲ, ಸಂಜಯ ಅದಾಟೆ, ಅಶೋಕ ಸೂರ್ಯವಂಶಿ, ಬಿ.ಎಸ್‌. ಪಾಟೀಲ, ವಿಲಾಸ ಟೋಣೆ, ವಿಠ್ಠಲ ಅವಳೆ, ಬಾಹುಬಲಿ ಉಮದಿ ಸೇರಿದಂತೆ ನೂರಾರು ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ