ಶಿಗ್ಗಾವ್

ಬರಪೀಡಿತ ತಾಲೂಕು ಘೋಷಣೆ ವಿಳಂಬಕ್ಕೆ ಏತ ನೀರಾವರಿ ಕಾರಣ : ಪಠಾಣ್

ಬರಪೀಡಿತ ತಾಲೂಕು ಘೋಷಣೆ ವಿಳಂಬಕ್ಕೆ ಏತ ನೀರಾವರಿ ಕಾರಣ : ಪಠಾಣ್

ಶಿಗ್ಗಾವಿ 13:  ಶಿಗ್ಗಾವಿ ತಾಲೂಕನ್ನ ಬರಪೀಡಿತ ತಾಲೂಕೆಂದು ಘೋಷಣೆ ಮಾಡಲು ಸ್ಥಳೀಯ ಏತ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಪ್ರಮುಖ ಕಾರಣವಾಗಿದ್ದು ರೈತ ಸಮೂಹಕ್ಕೆ ಅನ್ಯಾಯವಾಗುತ್ತಿದೆ ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ವಿಶೇಷ ಕಾಳಜಿ ವಹಿಸಿ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿದೆ ಎಂದು ಕೆಪಿಸಿಸಿ ಸಂಯೋಜಕ ಯಾಸೀರಖಾನ್ ಪಠಾಣ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಶಿಗ್ಗಾವಿ, ಹಾನಗಲ್ಲ, ಬ್ಯಾಡಗಿ ತಾಲ್ಲೂಕುಗಳು ಕೇಂದ್ರ ಬರ ಅಧ್ಯಯನ ತಂಡಗಳ ನಿಯಮಾವಳಿ ಮತ್ತು ಷರತುಗಳ ಪಟ್ಟಿಯಿಂದ ಹೂರಗೆ ಉಳಿದಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿ. ಷರತ್ತುಗಳನ್ನು ತಡೆದು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದಾರೆ. 

ಬರಪೀಡಿತ ತಾಲೂಕ ಎಂದು ಘೋಷಣೆ ಮಾಡಬೇಕು ಎಂದು ಬಿಜೆಪಿ ಮುಖಂಡರು ಯಾರೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿಲ್ಲ. ಹೀಗಾಗಿ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಇನ್ನಷ್ಟು ವಿಳಂಬವಾಗಲು ಕಾರಣವಾಯಿತು, ಆದರೆ ರೈತರ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುವ ಮೂಲಕ ನ್ಯಾಯ ನೀಡುವ ಕೆಲಸ ಮಾಡಿದೆ. 3 ತಾಲೂಕಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿರುವ ಕಾರಣ ಘೋಷಣೆಯಾಗಿದೆ. ಅಲ್ಲದೆ ರೈತರ ಅಹೋರಾತ್ರಿ ಧರಣೆಯ ಫಲವಾಗಿ ರೈತರಿಗೆ ನ್ಯಾಯ ನೀಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದರು. 

ಕ್ಷೇತ್ರದಲ್ಲಿ ಭಷ್ಟಾಚಾರ ತಾಂಡವಾಡುತ್ತಿದೆ. ಮಳೆಯಿಂದ ಬಿದ್ದಿರುವ ಮನೆಗಳಿಗೆ ಈ ವರೆಗೆ ಸರಿಯಾಗಿ ಪರಿಹಾರ ನೀಡಿಲ್ಲ. ಕೊಳಚೆ(ಸ್ಲಂ) ಪ್ರದೇಶದಲ್ಲಿನ ಎರಡು ಸಾವಿರ ಮನೆಗಳ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ. ತಾಲೂಕಿನ ಸಾಕಷ್ಟು ರಸ್ತೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ. ರಸ್ತೆಗಳು ಹಾಳಾಗಿ ಹೋಗಿವೆ ಎಂದು ಅವರು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಸ್ಥಳೀಯ ಶಾಸಕ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಹರಿಹಾಯ್ದರು. 

ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಕರಿಂಸಾಬ ಮೊಗಲಲಿ, ಸುಧೀರ್ ಲಮಾಣಿ, ಅಶೋಕ ಓಲೇಕಾರ, ಬಾಬರ್ ಭೋವಾಜಿ, ಮಹೇಶ ತಳವಾರ, ಎಸ್ ಎಫ್ ಮಣಕಟ್ಟಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಖಾಜೆಖಾನವರ, ರುದ್ರೇಶ ಗುಡಗೇರಿ, ಶಿವಣ್ಣ ಅಜ್ಜನವರ, ಮಾಲತೇಶ ಸಾಲಿ, ಶಿವಾನಂದ ಹರಿಜನ, ಫಯಾಜ್ ಸವಣೂರ ಸೇರಿದಂತೆ ಅನೇಕ ಮುಖಂಡರು ಇದ್ದರು. 


ಸುದ್ದಿ ಓದಿ