ಮಾರ್ಚ ಕೊನೆ ವಾರದಲ್ಲಿ ಕರಗಾಂವ ಏತ ನೀರಾವರಿ ಯೋಜನೆಗೆ ಅಡಿಗಲ್ಲು: ಐಹೊಳೆ
ಚಿಕ್ಕೋಡಿ: ರಾಯಭಾಗ ಕ್ಷೇತ್ರದಲ್ಲಿ ಸತತ ಮೂರು ಅವಧಿಯಲ್ಲಿ ಅಭಿವೃದ್ಧಿ ಹೊಳೆ ಹರಿಸಲಾಗಿದೆ. ಕ್ಷೇತ್ರದಲ್ಲಿ ನೀರಾವರಿಗೆ ಮೊದಲ ಆಧ್ಯತೆ ನೀಡಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ನಾಗರಮುನ್ನೋಳ್ಳಿ. ಬೆಳಗಲಿ. ಉಮರಾಣಿ ಗ್ರಾಮದಲ್ಲಿ ರಸ್ತೆ. ತೆರೆದ ಭಾವಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಚಿಕ್ಕೋಡಿ ತಾಲೂಕಿನ ಬರಪೀಡಿತ ಗ್ರಾಮಗಳಲ್ಲಿ ಏತ ನೀರಾವರಿ ಯೋಜನೆ ಮಂಜೂರಾಗಿದೆ. ಬರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಅನುಮೊದನೆ ಸಿಗಲಿದೆ. ಮಾರ್ಚ 20 ರ ಒಳಗಾಗಿ ಕರಗಾಂವ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದರು.
ಎಸ್ ಸಿ ಪಿಟಿಎಸ್ ಪಿ ಯೋಜನೆಯಡಿ ನಾಗರಮುನ್ನೋಳ್ಳಿ. ಬೆಳಗಲಿ.ಉಮರಾಣಿ ಗ್ರಾಮದ ಸಮಗಾರ ಹಾಗೂ ಇತರೆ ರೈತರ ಜಮೀನುಗಳಲ್ಲಿ ನೀರಾವರಿ ಸೌಲಭ್ಯ ಕೈಗೊಳ್ಳಲು 80 ಲಕ್ಷ ರೂ ಅನುದಾನ ಮಂಜೂರಾಗಿದೆ.ನಾಗರಮುನ್ನೋಳ್ಳಿ ರಾಯಬಾಗ ರಸ್ತೆಯ ಚೌಗಲಾ ತೋಟದ ರಸ್ತೆಗೆ 60 ಲಕ್ಷ ರೂ. ನಾಗರಮುನ್ನೋಳ್ಳಿ ಸಿಸಿ ರಸ್ತೆಗೆ 25 ಲಕ್ಷ ರೂ ಒಟ್ಟು 1.65 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು.
ದುರೀಣ ಸುರೇಶ ಬೆಲ್ಲದ. ಲಕ್ಷ್ಮಣ ಪೂಜೇರಿ.ಮಲ್ಲಪ್ಪ ಟೋಣಫೆ. ಜಗದೀಶ ಟೋಣಪೆ. ಸಂತೋಷ ಟೋಣಪೆ. ವಿರೂಪಕ್ಷ ಈಟಿ. ಎಂ.ಬಿ.ಆಲೂರೆ. ರಮೇಶ ಕಾಳನ್ನವರ. ದಾನಪ್ಪ ಕೊಟಬಾಗಿ. ಶಿವಪ್ಪ ಕೊಟ್ಯಾಪಗೋಳ. ಕಲ್ಲಪ್ಪ ಪಶ್ಚಾಪೂರೆ. ಮನೋಜ ಮನಗೂಳಿ. ಮಲಗೌಡ ಪಾಟೀಲ. ಮುರಿಗೇಪ್ಪ ಅಡಿಸೇರಿ.ಧನಪಾಲ ಭೀಮನಾಯಿಕ. ಚಂದು ಕಾಂಬಳೆ. ರಾಜು ಜಿಡ್ಡಿಮನಿ. ಮಹಾಂತೇಶ ಶಿಂಗೆ. ಶಿವಾನಂದ ಬಾಗೇವಾಡಿ. ಮಹೇಶ ಕೋರೆ. ಅಮೃತ ಸಂತುಗೋಳ.ವಿಠ್ಠಲ ಉಮರಾಣಿ.ಗಣಪತಿ ಕಾಂಬಳೆ ಮುಂತಾದವರು ಇದ್ದರು.