ಯರಗಟ್ಟಿ

ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಈರಣ್ಣಾ ಹೂಲ್ಲೂರ ಆಯ್ಕೆ

ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಈರಣ್ಣಾ ಹೂಲ್ಲೂರ ಆಯ್ಕೆ

ಯರಗಟ್ಟಿ 22: ಸುಮಾರು 10 ವರ್ಷಗಳಿಂದ ಯರಗಟ್ಟಿ ತಾಲೂಕಿನ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈರಣ್ಣಾ ಹೂಲ್ಲೂರ ಅವರ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈ ವರ್ಷದ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಘಟಕ ಬಂಗ್ಲೆ ಮಲ್ಲಿಕಾರ್ಜುನ ತಿಳಿಸಿದ್ದಾರೆ. 

ಬೆಂಗಳೂರಿನ  ಎಮ್‌. ವಿ. ಎಮ್‌. ಕನ್ವೆನ್ಷನ್ ಹಾಲ್ ನೆಲಮಂಗಲದಲ್ಲಿ ಭಾನುವಾರ ಮಾರ್ಚ್‌ 24 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 

ಪ್ರಸ್ತುತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿರುವ  ಈರಣ್ಣಾ ಹೂಲ್ಲೂರ ಅವರಿಗೆ ಪ್ರಶಸ್ತಿ ಸಿಗುತ್ತಿರುವುದು ಈ ಪ್ರದೇಶದ ಮಾಧ್ಯಮ ಮಿತ್ರರಿಗೆ ಸಲ್ಲುವ ಗೌರವ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಸಾಹಿತಿಗಳಾದ ಡಾ. ರಾಜಶೇಖರ ಬಿರಾದಾರ ಸೇರಿದಂತ ಹಲವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ