ಯರಗಟ್ಟಿ

ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯರಗಟ್ಟಿ 21 : ಪಟ್ಟಣದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೂಡಲ್ ಅಧಿಕಾರಿ ಎಚ್‌. ಡಿ. ಧರ್ಮಣ್ಣವರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಯೋಗವು ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದು ಹಾಗೂ ಯೋಗವು ಮಾನಸಿಕ ಹಾಗೂ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದರು. ಆದ್ದರಿಂದ ಯೋಗವನ್ನು ದೈನಂದಿನ ಚಟುವಟಿಕೆಯಾಗಿ ಮಾಡಿಕೊಳ್ಳುವುದು ರೂಢಿಯಾಗಬೇಕು ಎಂದು ಹೇಳಿದರು.ಈ ವೇಳೆ ಪ್ರಧಾನಿ ಗುರುಗಳಾದ ಎ. ಎ. ಮಕ್ತುಮನವರ, ದೈಹಿಕ ಶಿಕ್ಷಕರಾದ ಬಿ. ಎಂ. ಸರದಾರ, ಶಿಕ್ಷಕರಾದ ಎಂ. ಎಂ. ಚೀಲದ, ಆರ್‌. ಕೆ. ಹುಣಶೀಕಟ್ಟಿ, ಎಸ್‌. ಬಿ. ಮಿಕಲಿ, ಬಿ. ಬಿ. ನಿರವಾಣಿ, ಸೌಮ್ಯಾ ದಾಸರಡ್ಡಿ, ಜಯಶ್ರೀ ಬಡಕಪ್ಪನವರ, ನಾಗಮ್ಮ ಕುರಿ, ಎಮ್‌. ಎಚ್‌. ಅತ್ತಾರ ಸೇರಿದಂತೆ ವಿದ್ಯಾರ್ಥಿಗಳ ಇದ್ದರು. 


ಸುದ್ದಿ ಓದಿ