ಅಂತರಾಷ್ಟ್ರೀಯ ಯೋಗ ದಿನಾಚರಣೆ
ಶಿಗ್ಗಾವಿ 23: ಪ್ರಾಚೀನಕಾಲದ ಋಷಿ ಸಂಸ್ಕೃತಿಯ ಮೂಲದಿಂದ ಬಂದ “ಯೋಗ” ಭಾರತದ ಶ್ರೇಷ್ಠತೆಯ ಪ್ರತೀಕವಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳು ಯೋಗ ದಿನಾಚರಣೆ ಆಚರಿಸುವ ಮೂಲಕ ಯೋಗದ ಶ್ರೇಷ್ಠತೆಯನ್ನು ಸಾರುತ್ತಿವೆ. ಇಂಥಯೋಗ ಮತ್ತು ದ್ಯಾನವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಚನ್ನಪ್ಪಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವಗುರು ವಿವೇಕಾನಂದ ವಿದ್ಯಾನಿಲಯದ ಆಶ್ರಯದಲ್ಲಿ ಏರಿ್ಡಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಗ ಸಾಧನೆಯಿಂದ ಮನುಷ್ಯ ಸದೃಢವಾದ ಮನಸ್ಸು ಹಾಗೂ ಸದೃಢವಾದ ದೇಹಾರೋಗ್ಯವನ್ನು ಸಂಪಾದಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂತೋಷಧಾರಾಜೈ ಸಂತೋಷಿಮಾತಾ ಸಂಸ್ಥಾನದ ಸಂಸ್ಥಾಪಕಿ ಸಂತೋಷಿಮಾತಾ ಹಾಗೂ ಕಾರ್ಯದರ್ಶಿ ವಿಶ್ವನಾಥ ಬಡಿಗೇರಇವರು ವಿದ್ಯಾರ್ಥಿಗಳಿಗೆ ಯೋಗ ಮಾಡಿಸಿ ಯೋಗದ ಮಹತ್ವ ಹಾಗೂ ಶ್ರೇಷ್ಠತೆಯ ಕುರಿತು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಿ. ಎಂ.ಅರಗೋಳ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ.ಟಿ. ಪಾಟೀಲ, ಕಿವುಡ-ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಎಂ. ಬಿ. ನೀರಲಗಿ ಹಾಗೂ ಚನ್ನಪ್ಪಕುನ್ನೂರ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.