ರಾಯಬಾಗ

ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ

ರಾಯಬಾಗ, 14 : ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ, ಪುರುಷರ ಸಮಾನವಾಗಿ ನಿಂತಿದ್ದಾರೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. 

ಶನಿವಾರ ತಾಲೂಕಿನ ಭಿರಡಿ ಗ್ರಾಮದಲ್ಲಿ ಕೋರಮಂಡಲ ಇಂಟರ್ ನ್ಯಾಷನಲ್ ಲಿ. ಹಾಗೂ ವೀರಭದ್ರೇಶ್ವರ ಫರ್ಟಿಲೈಜರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋರಮಂಡಲ ಕಂಪನಿಯವರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ನೂತನ ಶೌಚಾಲಯ ನಿರ್ಮಿಸಿ, ಸಾಮಾಜಿಕ ಕಾರ್ಯ ಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ಎಂದರು. 

 ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳಿಗೆ ಹೆಣ್ಣು ನೀಡಲು ಹೆಣ್ಣು ಮಕ್ಕಳನ್ನು ಹೆತ್ತವರು ಮುಂದೆ ಬರಬೇಕೆಂದರು. ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತ ಮಹಿಳೆಯರು ತಮ್ಮನ್ನು ತಾವು ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ, ಕೃಷಿಯಲ್ಲಿ ಕೂಡ ಎಂತಹ ಸಾಧನೆ ಆದರೂ ಮಾಡಬಹುದು ಎಂಬುದಕ್ಕೆ ನಾನೇ ಉದಾಹರಣೆ ಆಗಿದ್ದೇನೆ.

ಕೃಷಿಕರು ಮಿಶ್ರ ಬೇಸಾಯ ಪದ್ದತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಎಲ್ಲರೂ ನಮ್ಮ ಕೈಬಿಟ್ಟರು, ನಾವು ನಂಬುವ ಭೂಮಿ ತಾಯಿ ನಮ್ಮ ಕೈ ಬಿಡೋದಿಲ್ಲ ಎಂದು ಹೇಳಿದರು.ಸಿ.ಐ.ಎಲ್ ರಾಜ್ಯ ಮುಖ್ಯಸ್ಥ ಎಸ್‌.ಬಿ.ಪಾಟೀಲ, ಬೇಸಾಯ ತಜ್ಞ ಪ್ರಶಾಂತ ಕುಮಾರ, ಸಪ್ನಾ ನಾಯ್ಡು, ರಂಜಿತಕುಮಾರ, ಮಹಾದೇವ ಬೋರಗಾಂವೆ, ಬಸವರಾಜ ದಡವಾಡ, ಸದಾಶಿವ ಘೋರೆ​‍್ಡ, ಎ.ಬಿ.ನಡೋಣಿ, ಶಂಕರ ಗಡಕರಿ, ಸೇರಿ ಅನೇಕ ರೈತ ಮಹಿಳೆಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ