ಶಿಗ್ಗಾವ್

ಮಹಿಳೆಯರು ಎಲ್ಲ ರಂಗಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ : ಸುಂದರಾಜ

ಮಹಿಳೆಯರು ಎಲ್ಲ ರಂಗಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ : ಸುಂದರಾಜ

ಶಿಗ್ಗಾವಿ 17: ತೊಟ್ಟಿಲ್ಲನ್ನು ತೂಗುವ ಕೈ ಜಗತ್ತನ್ನು ತೂಗಬಲ್ಲದು ಇನ್ನೂ ಕೆಲವೇ ಕೆಲವೂ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ರಂಗಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ ಎಂದು ಕೆಎಸ್‍ಆರ್‍ಪಿ ಪೊಲೀಸ್ ವರಿಷ್ಠಾಧಿಕಾರಿ ಟಿ ಸುಂದರಾಜ ಹೇಳಿದರು.

ಗಂಗೀಭಾವಿಯ ಹತ್ತನೇ ಮೀಸಲು ಪಡೆಯಲ್ಲಿ ನೆಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಮೊದಲಿಗೇ ಪುರುಷ ಪ್ರಧಾನವಾಗಿತ್ತು ಆದರೇ ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲ ರಂಗಗಳಲ್ಲಿ ತಮ್ಮ ವೈಯಕ್ತಿಕ ಸಾಧನೆಯ ಮೂಲಕ ಯಶಸ್ಸು ಪಡೆದದುರ ಪರಿಣಾಮ ಮಹಿಳಾ ಪ್ರಧಾನ ದೇಶವಾಗಲಿದೆ ಅಲ್ಲದೇ ತಾಲೂಕಿನಲ್ಲಿಯ ಮಹಿಳಾ ಸಂಘಗಳ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

ಡಾ. ರಾಣಿ ತಿರ್ಲಾಪೂರ ಸನ್ಮಾನ ಸ್ವೀಕರಿಸಿ ಮಾತನಾಡಿ ಮಹಿಳೆಯರು ಹೆಚ್ಚು ಹೆಚ್ಚು ವಿಧ್ಯಾಬ್ಯಾಸವನ್ನು ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಜೊತೆಗೆ ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯಗಳ ಜೊತೆಗೆ ದೈನಂದಿನ ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಬೇಕು ಅಲ್ಲದೇ ಮಕ್ಕಳೊಂದಿಗೆ ಅನ್ಯೋನ್ಯತೆಯಿಂದ ವರ್ತಿಸಿ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು, ಸರಕಾರ ನೀಡಿದ ಸೌಲಭ್ಯಗಳನ್ನು ಪಡೆದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು. 

ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ ಸನ್ಮಾನ ಸ್ವೀಕರಿಸಿ ಮಾತನಾಡಿ ಮಹಿಳೆಯರು  ತಮ್ಮಲ್ಲಿರುವ ತಂತ್ರ ಕೌಶಲ್ಯಗಳ ಮುಖಾಂತರ ಸ್ವಾವಲಂಬಿಯಾಗಿ ಜೀವನ ನಿರ್ವಹಣೆ ಮಾಡಬೇಕು ಅಲ್ಲದೇ ಏನೇ ಸಮಸ್ಯೆಯಿದ್ದರೂ ಧೈರ್ಯದಿಂದ ಸಮಸ್ಯೆಯನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಬೇಕು ಎಂದರು.

ಪುರಸಭೆ ಸದಸ್ಯೆ ರೂಪಾ ಬನ್ನಿಕೊಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಶಶೀಧರ ಯಲಿಗಾರ, ಕೆ.ಎಸ್.ಆರ್.ಪಿ ಅಧಿಕಾರಿ ದಾವಲಸಾಭ, ವಿಶ್ವನಾಥ ರೆಡ್ಡಿ, ಲಕ್ಷ್ಮಣ ನಾಯ್ಕ, ಸುಲೇಮಾನ ಹಂಚಿನಮನಿ, ರಾಜಶೇಖರ ಪಾಟೀಲ, ನಾಗಪ್ಪ ಪಾರ್ವತಿ, ಎಮ್.ಎಸ್.ಶೇಖ ಆದಂ ಸೇರಿದಂತೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಲೂಕಿನ ಕೆ.ಎಸ್.ಆರ್.ಪಿ 10 ನೇ ಮೀಸಲು ಪಡೆಗೆ ಅಯವ್ಯಯದಲ್ಲಿ 8 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ ಅಭಿನಂದನೆ ಸಲ್ಲಿಸಿದರು.

ಸುದ್ದಿ ಓದಿ