ಮಹಿಳಾ ಅಭಿವೃದ್ಧಿಯಲ್ಲಿ ಸಾಮಾಖ್ಯಾ ಸಂಘದ ಕಾರ್ಯ ಶ್ಲಾಘನೀಯ
ಶಿಗ್ಗಾವಿ 20: ಮಹಿಳೆಯಲ್ಲಿ ಆತ್ಮ ವಿಶ್ವಾಸ ತುಂಬುವ ಜೊತೆಗೆ ಆರ್ಥಿಕ ಸಶಕ್ತಿಕರಣ ಹೊಂದಲು ಮತ್ತು ಆರ್ಥಿಕವಾಗಿ ಬೆಳೆಸಲು ಮಹಿಳಾ ಸಾಮಾಖ್ಯಾ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಹಿಳಾ ಸಾಮಖ್ಯಾ ಕರ್ನಾಟಕದ ಜಿಲ್ಲಾ ಸಂಯೋಜಕಿ ರೇಣುಕಾ ತ್ರಿಪಾಟಿ ಹೇಳಿದರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಮಹಿಳಾ ಸಾಮಖ್ಯಾ ಕರ್ನಾಟಕ ಶಿಗ್ಗಾವಿ ಹಾಗೂ ಕಾಮಧೇನು ಮಹಿಳಾ ಮಹಾಸಂಘ ಶಿಗ್ಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಚಲನಶೀಲತೆ ಮತ್ತು ಲಿಂಗ ಸಮಾನತೆಯ ಜೊತೆಗೆ ಆರ್ಥಿಕ ಸಬಲತೆಗೆ ಸಂಘಟನೆ ಅವಶ್ಯ, ಇದನ್ನು ಮಹಿಳಾ ಸಾಮಾಖ್ಯಾ ಮಹಿಳೆಯರಿಗೆ ಮಾರ್ಗದರ್ಶನ ಮಾಡುತ್ತಿದೆ ಎಂದರು.
ಹಿರಿಯ ಆರ್ಥಿಕ ಸಮಾಲೋಚಕ ವಿ.ವಿ ಗುಡ್ಡದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿಗೆ ಇರುತ್ತದೆ, ಹಿಗಾಗಿ ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕಾರ್ಯ ಮಾಡುವ ಮಹಿಳೆ ಯೋಗ್ಯವಾಗಿದ್ದಾಳೆ, ಅಲ್ಲದೆ ಮಹಿಳೆಯು ವಿವಿದ ಸಂಘಗಗಳಲ್ಲಿ ಚಟುವಟಿಕೆಯಿಂದ ಕೂಡಿ ಮನೆಯ ಜವಾಬ್ದಾರಿಯನ್ನು ನಿಬಾಯಿಸುವ ಮಟ್ಟಿಗೆ ಆರ್ಥಿಕ ಸಬಲತೆಯನ್ನು ಹೊಂದಿದ್ದಾಳೆ ಎಂದರು.
ನಂತರ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಂದಲೇ ಬಲೂನ ಆಟ, ಮ್ಯುಜಿಕಲ್ ಚೆರ್ ಆಟ, ಗ್ರಹಣ ಶಕ್ತಿಯ ಆಟ ಸೇರಿದಂತೆ ವಿವಿದ ಆಟಗಳನ್ನು ಆಡುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ನ್ಯಾಯವಾದಿ ಚನ್ನಮ್ಮ ಬಡ್ಡಿ, ಸಿಡಿಪಿಓ ನಿತಾ ವಾಡಕರ, ಮಹಿಳಾ ಸಾಮಾಖ್ಯಾ ಕರ್ನಾಟಕ ತಾಲೂಕಾ ಸಂಯೋಜಕಿ ರಾಜೇಶ್ವರಿ ಹಿರೇಮಠ, ರುಕ್ಮೀಣಿ ಗೊನ್ನಾಗರ ಸೇರಿದಂತೆ ಸಿಬ್ಬಂದಿಗಳು ಹಾಗೂ ಮಹಿಳೆಯರು ಇದ್ದರು.