ಹೊಸಪೇಟೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಹೊಸಪೇಟೆ 21: ವಿಜಯನಗರ ಕ್ಷೇತ್ರದ ಚಿತ್ತವಾಡ್ಗಿಯಲ್ಲಿರುವ ಆಕಾಶ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ಅಕಾಶ್ ಪಿಯು ಕಾಲೇಜ್‌ನಲ್ಲಿ  ದಿ. 21ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.  

ಹಲವಾರು  ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಪೋಷಕರಿಗೆ  ಬಹುಮಾನಗಳನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯ  ಅಥಿತಿಗಳಾಗಿ ಆಗಮಿಸಿದ ಶರಣಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತುಳಸಿ ಪ್ರಿಯರವರು  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡುತ್ತಿದ್ದಾರೆ.  ಎಲ್ಲ ಅಡೆತಡೆಗಳನ್ನೂ ಮೀರಿ ಕಲೆ-ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನೃತ್ಯ, ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸಿ, ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ  ಮಹಿಳೆಯರು ಧೈರ್ಯದಿಂದ ಮುಂದೆ ಸಾಗಿ ಸ್ವಾವಲಂಬಿಗಳಾಗಬೇಕು ಹಾಗು  ಕಾನೂನಿನಲ್ಲಿರುವ ಲಿಂಗ ಸಮಾನತೆ ಹಾಗು ಹಕ್ಕುಗಳು ಹಾಗು ಕರ್ತವ್ಯಗಳನ್ನು  ಉಪಯೋಗಿಸಿಕೊಂಡು ಸಮಾಜದ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಕರೆ ನೀಡಿದರು.    

ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶೇರು ಮಾರುಕಟ್ಟೆಯ ಮಾರ್ಗದರ್ಶಿಗಳಾದ ಆರತಿ ಶಂಕರ, ಅಂಜುಮನ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಅತೀಕಾ ಹೀನಾ, ಶಾಲೆಯ ಕಾರ್ಯದರ್ಶಿಗಳಾಗಿರುವ ಎನ್ ಶಾಕೀರಾ ಬೇಗಂ ,  ಸಂಯೋಜಕರಾದ  ಹೆಚ್‌. ಸಂಪದ, ಮುಖ್ಯ ಗುರುಗಳಾದ  ಶೋಭಾ ಶಿಕ್ಷಕರಾದ ಶಾಲಿನಿ,  ಜ್ಯೋತಿ, ಶ್ರೀಲಕ್ಷ್ಮಿ, ಯಾಮುನಾ, ಪ್ರಿಯಾಂಕ, ಅಸ್ಮಾ ಬಾನು, ನಾಗಪ್ರಭಾ, ಪ್ರಿಯಾಂಕಾ.ಎನ್ ,ಭವಾನಿ, ಆರ್ಶಿಯಾ, ದತ್ತಾತ್ರೇಯ, ಹುಲಿಗೆಮ್ಮ , ರಾಜು, ಜಫ್ರುಲ್ಲಾ,  ಹಾಗೂ ನೂರಾರು ಮಕ್ಕಳು, ಪಾಲಕರು ಪೋಷಕರು, ಶಾಲೆಯ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ