ಸಿರುಗುಪ್ಪ

ಅಂತರರಾಷ್ಟ್ರೀಯ ತಂಬಾಕು ರಹಿತ ದಿನಾಚರಣೆ

ಅಂತರರಾಷ್ಟ್ರೀಯ ತಂಬಾಕು ರಹಿತ ದಿನಾಚರಣೆ

ಸಿರುಗುಪ್ಪ  02: ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ ಪರಿಸರ ಸ್ವಚ್ಛತೆ ಜನರ ಆರೋಗ್ಯ ಕಾಪಾಡಲು ತಂಬಾಕು ರಹಿತ ಸಮಾಜ ನಿರ್ಮಿಸಲು ಸಹಕರಿಸಬೇಕು ಆರೋಗ್ಯಕ್ಕೆ ಹಾನಿ ಮಾಡುವ ತಂಬಾಕನ್ನು ಬಳಕೆ ಮಾಡದೆ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು ತಂಬಾಕು ಸೇವಿಸುವವರ ಆರೋಗ್ಯ ಹದ ಗೆಡುವ ಜೊತೆಗೆ ಪರಿಸರವನ್ನು ಹಾಳು ಮಾಡುತ್ತದೆ ತಂಬಾಕು ಸೇವನೆ  ಆರೋಗ್ಯಕ್ಕೆ  ಅಷ್ಟೇ ಅಲ್ಲ ಕುಟುಂಬಕ್ಕೂ ಮಾರಕ ವಾಗಿದೆ ತಂಬಾಕು ಮುಕ್ತ ದೇಶವನ್ನಾಗಿಸಲು ವಿವಿಧ ಸಂಘ ಸಂಸ್ಥೆಗಳು ವ್ಯಾಪಾರಸ್ಥರು ಅರಿವು ಮೂಡಿಸಬೇಕು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯ ಕಾರಿ ಸಮಿತಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಜನಾಭಿಪ್ರಾಯ ಮುಖಂಡ ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.        

ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು ಅಂತರರಾಷ್ಟ್ರೀಯ ತಂಬಾಕು ರಹಿತ ದಿನವನ್ನು ನೆನಪಿಸಿ ಮಾತನಾಡುತ್ತಿದ್ದರು ಸರ್ ಖಾಜಿ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡುತ್ತಾ ವಿಶ್ವ ಅರೋಗ್ಯ ಸಂಸ್ಥೆ ಡಬ್ಲ್ಯುಎಚ್ ಒ ಪ್ರಕಾರ ಬೀಡಿ ಗುಟಕಾ ಸಿಗರೇಟ್ ಹುಕ್ಕಾ ಜರ್ದಾ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಭಾರತದಲ್ಲಿ ಪ್ರತಿವರ್ಷ 13.5ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ ತಂಬಾಕು ಸೇವನೆ ಇದೇ ರೀತಿ ಮುಂದುವರಿದರೆ 2050ರ ರ ವೇಳೆಗೆ 10.60ಕೋಟಿ ಜನ ಸಾವನ್ನಪ್ಪುವ ಆತಂಕ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು. 

ಡಾ. ಮೊಹಮ್ಮದ್ ಅಲಿ ಅವರು ಮಾತನಾಡಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಜನರನ್ನು ಜಾಗೃತ ಗೊಳಿಸಬೇಕಿದೆಂದರು.ಖತೀಬ್ ಜಹಿರುದ್ದೀನ್ ಬಾಬು , ಹಾಜಿ ಹಂಡಿ ಹುಸೇನ್ ಬಾಷಾ ,ಹಂಡಿ ಹಾಶಿಮ್ ಅಶ್ರಫಿ,ಎ ಮೊಹಮ್ಮದ್ ನೌಶಾದ್ ಅಲಿ ,ಹಾಜಿ ಅಬ್ದುಲ್ ಹಮೀದ್ ಫಾರೂಕಿ ,ಖಾಲಿ ಚೀಲ ಹಾಜಿ ಹುಸೇನ್ ಸಾಬ್ , ಡಬಲ್ ಬಾಂಡ್ ಹಾಜಿ ಟಿ .ಜಿ. ಅಬ್ದುಲ್ ಗನಿ,ಸಾಕ್ಷರತಾ ಜೆ ನಾಗೇಂದ್ರ ಗೌಡ  ಮತ್ತಿತರರು ಉಪಸ್ಥಿತರಿದ್ದರು.  ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಅಭಿಯಾನ ನಡೆಯಿತು ತಂಬಾಕು ಜಾಗೃತ  ಅರಿವು ಮೂಡಿಸಿದರು ಡಾ. ಜ್ಯೋತಿ ಪಲ್ಲೇದ್, ಡಾ ಪವನ್ ವರ್ಮಾ, ಡಾ. ಸ್ವಾತಿ ಹಾಗೂ ಅಬ್ದುಲ್ ನಬಿ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 


ಸುದ್ದಿ ಓದಿ