ರಾಣೆಬೆನ್ನೂರ

ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ

ಲೋಕದರ್ಶನ ವರದಿ 

ರಾಣಿಬೆನ್ನೂರ 12:  ನಗರದ ಸ್ಥಳೀಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ  ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಯಿತು.  

     ಈ ವೇಳೆ ನ್ಯಾಯವಾದಿ ಚೇತನಾ ಜಿ.ಎಸ್ ಮಾತನಾಡಿ, ಕಾನೂನಿನ ಜ್ಙಾನ ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ಡಿಸೆಂಬರ್ 10 ರಂದೇ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸುವುದರ ಹಿನ್ನಲೆ ಮಾನವ ಹಕ್ಕುಗಳ ಅಗತ್ಯ ವಿವಿಧ ಮಾನವ ಹಕ್ಕುಗಳು ಹಾಗೂ ಹಕ್ಕುಗಳಿಗೆ ಧಕ್ಕೆಯಾದಾಗ ಪಡೆಯಬಹುದಾದ ಕಾನೂನಾತ್ಮಕ ರಕ್ಕಣೆಯನ್ನು ಕುರಿತು ವಿವರಿಸಿದರು. 

       ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ, ಭೂಮಿಕಾ ಹುಲ್ಮನಿ, ಪ್ರೊ. ಸುಜಾತಾ ಹುಲ್ಲೂರ, ಪ್ರೊ. ವೀರಣ್ಣ ಸಿ. ಕೆ,  ಶಿವಾನಿ ಹಾಗೂ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ