ತಾಲೂಕಾಡಳಿತದಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಯರಗಟ್ಟಿ 15: ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ತಾಲೂಕಾಡಳಿತ ದಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನ ಪ್ರಸ್ತಾವನೆಯ ವಾಚನ ಕಾರ್ಯಕ್ರಮವನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷ, ತಹಶೀಲ್ದಾರ್ ಎಮ್. ಎನ್. ಮಠದ ಅವರು ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸರ್ಕಾರದ ಆದೇಶದಂತೆ ಹಲವಾರು ಧರ್ಮ, ಭಾಷೆ, ಜಾತಿಗಳಿಗೆ ಸೇರಿದ ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯವನ್ನು, ವಿಜಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಮತ್ತು ಉಪಾಸನೆಯ ಸ್ವಾತ್ಯಂತ್ರವನ್ನು, ಸ್ಥಾನಮಾನ, ವ್ಯಕ್ತಿ ಗೌರವ, ದೇಶದ ಏಕತೆಯನ್ನು ಒಂದೇ ಸಂವಿಧಾನದಡಿಯಲ್ಲಿ ಒದಗಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಶ್ರಮ ಅಭಿನಂದನಾರ್ಹವಾಗಿದೆ.
ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾದ್ಯಾಪಕರು, ಶಿಕ್ಷಕರು, ಅಧಿಕಾರಿ ವರ್ಗದವರಿಂದ ಸಂವಿಧಾನ ಸಂವಿಧಾನ ಪ್ರಸ್ತಾವನೆ ವಾಚನ ಜರುಗಿತು.
ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಪಿಎಸ್ಐ ಆಯ್. ಎಂ. ಹಿರೇಗೌಡ, ಮುಖ್ಯ ವೈಧ್ಯಾಧಿಕಾರಿ ಶ್ರೀಮತಿ ಬಿ. ಎಸ್. ಬಳ್ಳೂರ, ಕೃಷಿ ಧಿಕಾರಿ ಎಂ. ಆ. ಕಳಸಪ್ಪನವರ, ಕೃಷಿ ಉತ್ಪನ ಮಾರುಕಟ್ಟೆ ಅಧಿಕಾರಿ ಶ್ರೀಮತಿ ಎಸ್. ಆರ್. ಜೂಗನವರ, ಕಂದಾಯ ನೀರಿಕ್ಷಕರಾದ ವಾಯ್. ಎಫ. ಮುರ್ತೆನ್ನವರ, ಗ್ರಾಮ ಆಡಳಿತ ಅಧಿಕಾರಿ ಎಲ್. ಬಿ. ದಳವಾಯಿ, ದಲಿತ ಮುಖಂಡರಾದ ಬಾಸ್ಕರ ಹಿರೇಮೆತ್ರಿ, ಚಿದಂಬರ ಕಟ್ಟಿಮನಿ, ಬಾಬು ಚನ್ನಮೇತ್ರಿ, ಇನ್ನಿತರರಿದ್ದರು.