ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ಧಾರವಾಡದಿಂದ ವಿಧಾನಸೌಧದವರೆಗೆ ಬೈಕ್ ಜಾಥಾ ನಡೆಸಿದ ಯುವಕರು.
ಧಾರವಾಡ 18: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಕರ್ನಾಟಕ ಕಾಲೇಜು ಮೈದಾನದಿಂದ ಸೆಪ್ಟೆಂಬರ 14, 2025 ರಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕ್ರೀಡಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಬೈಕ್ ರಾ್ಯಲಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಉದ್ಘಾಟಿಸಿದ್ದರು.
ವಿಜೇತಕುಮಾರ ಹೊಸಮಠ ಅವರ ನಾಯಕತ್ವದಲ್ಲಿ 10 ಬೈಕ್ ರೈಡರ್ಗಳು ಧಾರವಾಡದಿಂದ ವಿಧಾನಸೌಧದವರೆಗೆ ಬೈಕ್ ಮುಖಾಂತರ ಜಾಥಾ ಹಮ್ಮಿಕೊಂಡಿದ್ದರು.
ಸೆ. 14 ರಂದು ಧಾರವಾಡ ನಿರ್ಗಮಿಸಿ, ಸೆ.14 ರಂದು ರಾತ್ರಿ ಬೆಂಗಳೂರು ತಲುಪಿ 15 ರಂದು ವಿಧಾನಸೌಧದ ಮುಂದೆ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೆ.16 ರಂದು ಧಾರವಾಡಕ್ಕೆ ಮರಳಿದ್ದಾರೆ.
ಸೆ.14 ರಂದು ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಅವರು ಉಪಸಿತರಿದ್ದರು.