ರಾಣೆಬೆನ್ನೂರ

ಸರ್ವಧರ್ಮ ಸಾಮೂಹಿಕ ವಿವಾಹ: ನಗರಕ್ಕೆ ಮಠಾಧೀಶರು ಗಣ್ಯರ ಆಗಮನ

ಸರ್ವಧರ್ಮ ಸಾಮೂಹಿಕ ವಿವಾಹ: ನಗರಕ್ಕೆ ಮಠಾಧೀಶರು ಗಣ್ಯರ ಆಗಮನ

ರಾಣೆಬೆನ್ನೂರು 27: ನಗರಸಭಾ ಕ್ರೀಡಾಂಗಣದಲ್ಲಿ ನ.28ರಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಎಸ್ ಬುರಡಿಕಟ್ಟಿ  ಅವರ ವಿವಾಹ ಮಹೋತ್ಸವದ ಜೊತೆಗೆ ನಾಡಿನ 132 ಜೋಡಿಗಳ ಉಚಿತ ಸರ್ವ  ಧರ್ಮ ಸಾಮೂಹಿಕ ಮಂಗಳ ಕಾರ್ಯಗಳು ನೆರವೇರಲಿವೆ. ಯಶಸ್ವಿಗಾಗಿ ಈಗಾಗಲೇ ನಗರ ಸಭಾ ಕ್ರೀಡಾಂಗಣದಲ್ಲಿ 25,000ಕ್ಕೂ ಹೆಚ್ಚು ಆಸನಗಳನ್ನು ಹಾಕಲಾಗಿದೆ. 

ಅಲ್ಲದೆ ಭಾರಿ ವೇದಿಕೆ ಸಿದ್ಧಪಡಿಸಲಾಗಿದ್ದು, ನವ ದಂಪತಿಗಳನ್ನು ಆಶೀರ್ವದಿಸಲು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. 

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ಕೊಪ್ಪಳ ಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಗೌರಿಗದ್ದೆ ಅವದೂತ ವಿನಯ್ ಗುರೂಜಿ, ಇನ್ಫೋಸಿಸ್ ಪ್ರತಿಷ್ಠಾಪನದ ಸಂಸ್ಥಾಪಕಿ ಸುಧಾ ಮೂರ್ತಿ, ಕಸಾಪ್ಪ ರಾಜ್ಯಾಧ್ಯಕ್ಷ ಡಾ.ನಾಡೋಜ ಮಹೇಶ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ.ರವಿ, ಶಾಸಕ ಅರುಣ್ ಕುಮಾರ್ ಪೂಜಾರ್, ಸೇರಿದಂತೆ  ನಾಡಿನ ಅನೇಕ ಗಣ್ಯರು, ಮಠಾಧೀಶರು ರಾಜಕೀಯ ನಾಯಕರು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ 27ರಂದು ಭಾನುವಾರ ಸಂಜೆ ನಡೆದ ವಿವಾಹ ಪೂರ್ವದ ಆರತಕ್ಷತೆ ಕಾರ್ಯಕ್ರಮಲ್ಲಿ, ಅವದೂತ ವಿನಯ್ ಗುರೂಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಸದ ಶಿವಕುಮಾರ್ ಉದಾಸಿ, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್, ನಗರಸಭಾ ಅಧ್ಯಕ್ಷ ರೂಪಾ  ಚಿನ್ನಿಕಟ್ಟಿ  ಸೇರಿದಂತೆ ನಾಡಿನ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ನೂತನ ವಧು ವರರಾದ ಪ್ರಕಾಶ್ ಎಸ್ ಬುರಡಿಕಟ್ಟಿ ದಂಪತಿಗಳನ್ನು  ಅಭಿಮಾನಿ ಬಳಗದ ಮುಖಂಡರು ಸಾವಿರಾರು  ನಾಗರಿಕರು ಆಗಮಿಸಿ ತಮ್ಮ ಶುಭಾಶೀರ್ವಾದ ನೀಡಿದರು 

ಸುದ್ದಿ ಓದಿ