ಸೌಂದತ್ತಿ

ಸಾಧನೆಗೆ ಆಸಕ್ತಿ, ಛಲಗಾರಿಕೆ ಅಗತ್ಯ: ಮಲ್ಲಿಕಾರ್ಜುನ ಹೆಗ್ಗಣ್ಣವರ

ಸಾಧನೆಗೆ ಆಸಕ್ತಿ, ಛಲಗಾರಿಕೆ ಅಗತ್ಯ: ಮಲ್ಲಿಕಾರ್ಜುನ ಹೆಗ್ಗಣ್ಣವರ

ಲೋಕದರ್ಶನ ವರದಿ

ಸವದತ್ತಿ 20: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಥವಾ ಒಂದು ಉನ್ನತ ಹುದ್ದೆಗೆ ಏರಬೇಕೆಂಬ ಆಸೆಯನ್ನು ಇಟ್ಟುಕೊಂಡರೆ ಸಾಲದು ಅದರ ಜೊತೆಗೆ ನಮ್ಮಲ್ಲಿ ಆಸಕ್ತಿ ಮತ್ತು ಛಲಗಾರಿಕೆ ಇರಲೇಬೇಕಾಗುತ್ತದೆ ಎಂದು ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.

ಸ್ಥಳೀಯ ಗಾಂಧಿಚೌಕದಲ್ಲಿ ಲಿಂ.ಬಾಬಣ್ಣ ಹಂಪಣ್ಣವರ ವೇದಿಕೆಯ ಮೇಲೆ ನಡೆಯುತ್ತಿರುವ 43ನೇಯ  ನಾಡಹಬ್ಬ ನವರಾತ್ರಿ ಉತ್ಸವದ ಐದನೇಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾಧನೆಯ ಹಾದಿಯಲ್ಲಿ ಸಾಧಕರ ಬದುಕು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಸಾನ್ನಿಧ್ಯವಹಿಸಿದ ಇನಾಮಹೊಂಗಲ ವಿರಕ್ತಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಈಗಿನ ಯುವಕರು ದುಶ್ಚಟಗಳಿಂದ ದೂರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆಸಕ್ತಿಯಿಂದ ಎಲ್ಲ ವಿಷಯಗಳನ್ನು ಅರಿತುಕೊಂಡು ಸಾಧಕರಾಗವತ್ತ ಸಾಗಬೇಕೆಂದರು. ಅನೇಕ ಪ್ರಾಣಿ ಪಕ್ಷಿಗಳು ಒಂದಿಲ್ಲೊಂದು ಹಂತದಲ್ಲಿ ಸಾಧನೆ ಮಾಡಿ ತೋರಿಸುತ್ತಿದ್ದು, ಮನುಷ್ಯರಾದ ನಾವು ಸಾಧನೆಯ ಹಾದಿಯಲ್ಲಿ ಬದುಕು ಸಾಗಿಸುವದರ ಜೊತೆಗೆ ಸಮಾಜದಲ್ಲಿ ಸಮಾನತೆಯ ಬದುಕನ್ನು ಕಂಡುಕೊಳ್ಳಬೇಕೆಂದರು.

ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಮಹಾಸ್ವಾಮೀಜಿ ಮಾತನಾಡಿ, 43 ವರ್ಷಗಳಿಂದ ವ್ಯವಸ್ಥಿತವಾಗಿ ಈ ನವರಾತ್ರಿ ಉತ್ಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಸಹಿತ ಒಂದು ಸಾಧನೆಯೇ ಆಗಿದ್ದು, ಈ ನವರಾತ್ರಿ ಉತ್ಸವವು ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

ಎಚ್.ಕೆ.ಯಡೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

43ನೇಯ  ನಾಡಹಬ್ಬ ನವರಾತ್ರಿ ಉತ್ಸವದವತಿಯಿಂದ ಬಸವರಾಜ ಪುರದಗುಡಿಯವರು ತಹಸೀಲ್ದಾರ ಮಲ್ಲಿಕಾಜರ್ುನ ಹೆಗ್ಗಣ್ಣವರನ್ನು ಹಾಗೂ ಇನಾಮಹೊಂಗಲ ವಿರಕ್ತಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳನ್ನು  ಸನ್ಮಾನಿಸಿ ಗೌರವಿಸಿದರು.

ನಿವೃತ್ತ ಶಿಕ್ಷಕರಾದ ಎಪ್.ಎಮ್.ನಿಶಾನದಾರ, ಬಿ.ವಿ.ಬಿನರಗುಂದ, ಬಿ.ಎಸ್.ಚಚಡಿ, ಎಸ್.ಎಸ್.ನವಲಗುಂದ, ಎನ್.ಬಿ.ಬೆಂಡಿಗೇರಿ, ಬಸವರಾಜ ಪುರದಗುಡಿ, ಜಿ.ಎಸ್.ಸುಣಗಾರ, ಬಸವರಾಜ ಅತ್ತಿಗೇರಿ, ಕೆ.ಬಿ.ಮೆಟಗುಡ್ಡ, ರವಿ ಮಮದಾಪುರ, ಬಸವರಾಜ ಹಂಪಣ್ಣವರ, ಶಂಕರ ಗೋಡಿ ಉಪಸ್ಥಿತರಿದ್ದರು.

ಧಡೇನಗರಕೊಪ್ಪದ ನಾಗಲಿಂಗೇಶ್ವರ ಭಜನಾ ಮಂಡಳಿ ಇವರು ಭಜನಾ ಕಾರ್ಯಕ್ರಮ ನಡೆಯಿಸಿಕೊಟ್ಟರು. 

ಕನ್ನಡ ಮತ್ತು ಸಂಸ್ಕ್ರತ ಇಲಾಖೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ  ಕಾಡಶಿದ್ದೇಶ್ವರ ಕಲಾ ಸಂಘ ಹುಬ್ಬಳ್ಳಿ ಇವರು ಶಿಶುನಾಳದ ಸಂತ ಶರೀಪಸಾಹೇಬರ ಮಹಾತ್ಮೆ ಎಂಬ ನಾಟಕವನ್ನು ಪ್ರದರ್ಶಿಸಿದರು 

ಸುದ್ದಿ ಓದಿ