ಅಂತರ್ ರಾಜ್ಯ ದ್ವಿಚಕ್ರವಾಹನ ಕಳ್ಳರ ಬಂಧನ : 18,30 ಮೌಲ್ಯದ 27 ಬೈಕ್‌ಗಳು ವಶಕ್ಕೆ

ಅಂತರ್ ರಾಜ್ಯ ದ್ವಿಚಕ್ರವಾಹನ ಕಳ್ಳರ ಬಂಧನ : 18,30 ಮೌಲ್ಯದ 27 ಬೈಕ್‌ಗಳು ವಶಕ್ಕೆ
ಬೆಳಗಾವಿ/ಸಂಕೇಶ್ವರ : ದ್ವಿಚಕ್ರವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತರಿAದ ಸುಮಾರು 18,30,000 ಮೌಲ್ಯದ 27 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
  ಈ ಬೈಕ್ ಕಳ್ಳತನ ಪ್ರಕರಣದಲ್ಲಿ ಲಕ್ಷö್ಮಣ ವಿರುಪಾಕ್ಷಿ ಕಣಬರಗಿ (31), (ಸಾ : ಅಂಕಲಗಿ ತಾ: ಗೋಕಾಕ ಹಾಲಿ ಸಮರ್ಥ ನಗರ ಬೆಳಗಾವಿ), ಫಕೀರಪ್ಪಾ ಸಿದ್ದಪ್ಪಾ ಕರಿಗಾರ (25) (ಸಾ: ಹಿರೇಹಟ್ಟಿ ತಾ: ಗೋಕಾಕ ಹಾಲಿ ಬೋಳಕಡಬಿ ತಾ: ಯರಗಟ್ಟಿ) ಇವರಿಬ್ಬರು ಬಂಧಿತ ಆರೋಪಿತರಾಗಿದ್ದಾರೆ.  
ದಿ 31-03-2026 ರಂದು ಅಜೀತ ಸುಭಾಷ ಅರಬೋಳೆ ಸಾ: ಜುಗೂಳ ತಾ: ಕಾಗವಾಡ ಇವರು ಕೊಟ್ಟ ದೂರಿನಲ್ಲಿ ತನ್ನ ಬಜಾಜ್ ಡಿಸ್ಕವರ್ ಮೋಟಾರ ಸೈಕಲ್ ನಂ: ಕೆಎ-23-ಇಡಿ-1795 ದ್ವಿಚಕ್ರ ವಾಹನವನ್ನು ಸಂಕೇಶ್ವರ ಪಟ್ಟಣದಲ್ಲಿ ನಿಲ್ಲಿಸಿದ್ದನ್ನು ಕಳ್ಳತನ ಆಗಿರುವ ಬಗ್ಗೆ ದೂರನ್ನು ಸಂಕೇಶ್ವರ ಪೊಲೀಸ ಠಾಣೆ ಅಪರಾಧ ಸಂಖ್ಯೆ: 90/2026 ಕಲಂ: 303(2) ಬಿ.ಎನ್.ಎಸ್ 2023 ನೇದ್ದಕ್ಕೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
    ಸದರಿ ಪ್ರಕರಣದ ಪತ್ತೆ ಕುರಿತು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಆರ್.ಬಿ.ಬಸರಗಿ ಹೆಚ್ಚುವರಿ ಎಸ್.ಪಿ ಮತ್ತು ರವಿ ಡಿ ನಾಯ್ಕ ಡಿ.ಎಸ್.ಪಿ. ಗೋಕಾಕ ಇವರ ಮಾರ್ಗದರ್ಶನದಲ್ಲಿ ಸಂಕೇಶ್ವರ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕರಾದ ಎಸ್.ಎಮ್.ಅವಜಿ ಅವರ ನೇತೃತ್ವದಲ್ಲಿ ಯು.ಎಸ್.ಶೆಟ್ಟೆನ್ನವರ ಪಿ.ಎಸ್.ಐ. ಹಾಗೂ ಸಿಬ್ಬಂದಿ ಜನರ ತಂಡ ರಚನೆ ಮಾಡಿ ದ್ವಿಚಕ್ರವಾಹನ ಕಳ್ಳತನ ಮಾಡಿದ ಪ್ರಕರಣದ ಪತ್ತೆ ಕೈಗೊಂಡು ದಿ. 2-04-2026  ಲಕ್ಷö್ಮಣ ವಿರುಪಾಕ್ಷಿ ಕಣಬರಗಿ ಹಾಗೂ ಫಕೀರಪ್ಪಾ ಸಿದ್ದಪ್ಪಾ ಕರಿಗಾರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವೆಸಗಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ.  
     ದಿ. 02-04-2026 ರಂದು ಸದರಿ ಆರೋಪಿತರಿಗೆ ಹೆಚ್ಚಿನ ವಿಚಾರಣೆ ಮಾಡಿ ಸಂಕೇಶ್ವರ ಪಟ್ಟಣದಲ್ಲಿ ಕಳುವು ಮಾಡಿದ 01 ಮೋಟಾರ ಸೈಕಲನ್ನು ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಬೆಳಗಾವಿ ಶಹರದ ವಿವಿಧ ಪೊಲೀಸ ಠಾಣೆಗಳಾದ ಹಿರೇಬಾಗೇವಾಡಿ, ಎ.ಪಿ.ಎಮ್.ಸಿ, ಶಹಾಪೂರ, ಮಾಳಮಾರುತಿ, ಮಾರ್ಕೇಟ, ಕಾಕತಿ, ಖಡೇಬಜಾರ, ಬೆಳಗಾವಿ ಗ್ರಾಮೀಣ, ಟಿಳಕವಾಡಿ ಹಾಗೂ ಮಹಾರಾಷ್ಟöç ರಾಜ್ಯದ ಚಂದಗಡ ಪೊಲೀಸ ಠಾಣೆಯ ವ್ಯಾಪ್ತಿಗಳಲ್ಲಿ ಕಳವು ಮಾಡಿದ ಹೀರೊ ಸ್ಲಂಡರ ಪ್ಲಸ್, ಬಜಾಜ ಡಿಸ್ಕವರ, ಯಮಹ, ಹಿರೋ ಹೆಚ್.ಎಪ್ ಡಿಲಕ್ಸ್ ಮತ್ತು ಬಜಾಜ ಪಲ್ಸರ್ ಹೀಗೆ ಒಟ್ಟು 26 ಮೋಟಾರ ಸೈಕಲಗಳನ್ನು ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ 1 ಮೋಟಾರ ಸೈಕಲ ಹೀಗೆ ಒಟ್ಟು ರೂ. 18,30,000 ಕಿಮ್ಮತ್ತಿನ 27 ಮೊಟಾರ ಸೈಕಲಗಳನ್ನು ಜಪ್ತ ಮಾಡಿ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.
      ಸದರಿ ಪ್ರಕರಣದಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಮ್. ಅವಜಿ ಪಿಎಸ್‌ಐಎಸ್. ಶೆಟ್ಟೆನ್ನವರ ಪಿ.ಎಸ್.ಐ, ವಿಠಲ ನಾಯಿಕ, ಎಎಸ್‌ಐ ಎಲ್.ಎಸ್ ಖೋತ ಹಾಗೂ ಸಿಬ್ಬಂದಿ ಜನರಾದ ಎಸ್.ಎಲ್.ಗಳತಗಿ, ಎ.ಬಿ.ಮುರ್ಕಿಭಾವಿ, ಎಸ್.ಎಮ್.ಯಕ್ಸಂಬಿ, ಕೆ.ಡಿ.ಹಿರೇಮಠ, ಎಸ್.ಬಿ.ಪೂಜೇರಿ, ಎಸ್.ಎಸ್.ಕುದರೆ,  ಜಿ.ಕುಡ್ಡಗೋಳ, ಬಿ.ಟಿ .ಪಾಟೀಲ, ಎಮ್.ಕೆ.ಅತ್ತಾರ, ಎಸ್.ಕೆ.ಹೊಸೂರ, ಎಸ್.ಬಿ.ಮಠಪತಿ ಹಾಗೂ ಟೆಕ್ನಿಕಲ್ ಸೆಲ್ ಬೆಳಗಾವಿ ಸಿಬ್ಬಂದಿ ಜನರಾದ ವಿನೋದ ತಕ್ಕನ್ನವರ, ಸಚೀನ ಪಾಟೀಲ ಇವರ ಕಾರ್ಯವನ್ನು ಎಸ್‌ಪಿ ರಾಮರಾಜನ್ ಅವರು ಶ್ಲಾಘಿಸಿರುತ್ತಾರೆ.

ಸುದ್ದಿ ಓದಿ