ಅಂತರ್ಜಾತಿ ವಿವಾಹ : ರಕ್ಷಣೆಗಾಗಿ ಮೊರೆ ಹೋದ ನವ ಜೋಡಿ
ಕಾರವಾರ 03: ಪ್ರೇಮಿಸಿ ಮದುವೆಯಾದ ಜೋಡಿ ಇದೀಗ ರಕ್ಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಕೇಂದ್ರದ ಮೊರೆ ಹೋಗಿದೆ. ಶಿರಸಿ ಹೆಗಡೆಕಟ್ಟಾದ ಗ್ರಾಮ ಪಂಚಾಯತ್ ಸದಸ್ಯ ನೀಲಕಂಠ ನಾಯ್ಕ , ಯುವತಿ ವಸುಧಾ ಹೆಗಡೆ ಪ್ರೇಮಿಸಿ ರಿಜಿಸ್ಟರ್ಡ ಮದುವೆಯಾಗಿದ್ದಾರೆ. ಜುಲೈ ತಿಂಗಳ ಅಂತ್ಯದಲ್ಲಿ ವಿವಾಹ ನೊಂದಣಿ ಕಾಯ್ದೆ ಅಡಿ ವಿವಾಹವಾಗಿದ್ದು, ಯುವತಿಯ ಮನೆಯವರಿಗೆ ಈ ವಿವಾಹ ಇಷ್ಟವಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಯುವತಿ ಮನೆಯ ಕಡೆಯಿಂದ ಯುವಕ ನೀಲಕಂಠ ನಾಯ್ಕಗೆ ಕಿರುಕುಳ ಆರಂಭವಾಯಿತು. ಯುವತಿ ಕುಟುಂಬದ ಪರ ಇರುವ ಓರ್ವ ವ್ಯಕ್ತಿ ನೀಲಕಂಠ ನಾಯ್ಕ ವ್ಯಾಟ್ಸಪ್ ಮೆಸೇಜ್ ಸಹ ಹಾಕಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಅಂಕೋಲಾ ಪೋಲೀಸ್ ಠಾಣೆಯಲ್ಲಿ ಯುವಕ ಯುವತಿ ವಯಸ್ಸಿನ ದಾಖಲೆ ಹಾಗೂ ವಿವಾಹ ನೊಂದಣಿ ಪತ್ರವನ್ನು ಸಹ ತೋರಿಸಿದ್ದಾರೆ, ಸ್ವಇಚ್ಛೆಯಿಂದ ನೀಲಕಂಠ ನಾಯ್ಕರನ್ನು ಮದುವೆಯಾಗಿರುವುದಾಗಿ ಹೇಳಿಕೆ ಠಾಣೆಯಲ್ಲಿ ತನ್ನ ತಂದೆಯ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾಗಿ ಕಾರವಾರದಲ್ಲಿ ಮಾಧ್ಯಮಗಳಿಗೆ ವಿವರಿಸಿದಳು. ಅಲ್ಲದೇ ಅಂತರ್ಜಾತಿ ವಿವಾಹವಾದ ನಮಗೆ ರಕ್ಷಣೆ ಕೊಡಿಸಬೇಕೆಂದು ಕೇಳಿಕೊಂಡ ಘಟನೆ ಮಂಗಳವಾರ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರವಾಣಿ ಕರೆ ಮಾಡಿದ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಯುವ ಜೋಡಿಗೆ ರಕ್ಷಣೆ ಕೊಡಲು ವಿನಂತಿಸಿದರು. ಶಿರಸಿ ಪೊಲೀಸ್ ಠಾಣೆಗೆ ಸಹ ಕೆಲ ಮಾಧ್ಯಮದ ಮಿತ್ರರು ಯುವ ಜೋಡಿಯ ಪರವಾಗಿ ದೂರವಾಣಿ ಕರೆ ಮಾಡಿ ಕಾನೂನು ಬದ್ಧವಾಗಿ ಮದುವೆಯಾದ ಜೋಡಿಗೆ ಬೆಂಬಲಿಸಿ, ಜಾತಿ ವ್ಯವಸ್ಥೆ ವಿರುದ್ಧ ಇರುವ ಯುವ ಮನಸುಗಳಿಗೆ ಶುಭಕೋರಿ, ರಕ್ಷಣೆ ನೀಡಲು ಹೇಳಿದರು.
ಸಖಿ ಕೇಂದ್ರದಲ್ಲಿ ವಾಸ್ತವ ಸ್ಥಿತಿ ವಿವರಿಸಿದ ನವ ಜೋಡಿ:
ಕಾರವಾರದ ಸಖಿ ಕೇಂದ್ರಕ್ಕೆ ಭೇಟಿ ನೀಡಿದ ಯುವ ಜೋಡಿ ರಕ್ಷಣೆಗೆ ಮೊರೆಯಿಟ್ಟಿತು. ಅಲ್ಲಿನ ಸಿಬ್ಬಂದಿ ಇರ್ವರನ್ನು ಕೌನ್ಸಲಿಂಗ್ ಮಾಡಿದರು. ಸಖಿ ಕೇಂದ್ರದ ವಕೀಲರು ಸಹ ಯುವ ಜೋಡಿಯ ಮನದಾಳವನ್ನು ಕೇಳಿದರು. ಜನ್ಮದಿನಾಂಕ ಹಾಗೂ ವಿವಾಹ ನೊಂದಣಿಯನ್ನು ಪರೀಶೀಲಿಸಿದರು. ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಇ-ಮೇಲ್ ಮೂಲಕ ವಿವಾಹ ಕಾನೂನು ಬದ್ಧ ಎಂದು ತಿಳಿಸಿರುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದಿರು. ಯುವ ಜೋಡಿ ಈಗ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನವ ಜೋಡಿಯ ನೆರವಿಗೆ ಶಿರಸಿ ಸಿಡಿಪಿಓ ಧಾವಿಸಬೇಕಿದೆ.