ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ‌ ಮುಂದೆ ಲಾಬಿ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ‌ ಮುಂದೆ ಲಾಬಿ

ಸಂಕೇಶ್ವರ : ಸಂಕೇಶ್ವರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ವರೆಗೆ ಪಟ್ಟಕ್ಕಾಗಿ ಸದ್ದಿಲ್ಲದೆ ಲಾಬಿ ನಡೆಯುತ್ತಿದೆ.‌ 

   ಹೌದು ಓದುಗರೇ ಎಲ್ಲ ಬಗೆಯಲ್ಲು ವಿಭಿನ್ನವಾಗಿರುವ ಸಂಕೇಶ್ವರ ಪಟ್ಟಣವು ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವು ಒಂದಿಲ್ಲ ಒಂದು ಸದಾ ಸುದ್ದಿಯಲ್ಲಿ ಇರುತ್ತದೆ. ಇಂತಹ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅವಧಿ ಕೊನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಪಟ್ಟಕ್ಕಾಗಿ ಕೆಲವರು ಮುಸುಕಿನ ಗುದ್ದಾಟ‌ ನಡೆಸುತ್ತಿರುವದು ಕೆಲ ನಾಯಕರನ್ನು ಪೇಚಿಗೆ ಸಿಲುಕಿಸುವಂತಾಗಿದೆ. 

     ಅತ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆಗೆ ಸೇರಿ ಬೆಂಗಳೂರಿಗೆ ತೆರಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರನ್ನು ಭೇಟಿ ಮಾಡಿ ತಮ್ಮನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರನ್ನಾಗಿ ಮಾಡುವಂತೆ ಒಬ್ಬರು ದುಂಬಾಲು ಬಿದ್ದರೆ ಇನ್ನೊಬ್ಬರು ತಾವು ಜಿಲ್ಲಾ ಉಸ್ತುವಾರಿ ಸಚಿವರ ಸತೀಶ ಜಾರಕಿಹೊಳಿ ಅವರಿಗೆ ಇದೊಂದು ಅವಧಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರನ್ನಾಗಿ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗಿದೆ. 

  ಇನ್ನೊಂದು ಕಡೆಯಲ್ಲಿ ಮತ್ತೆ ಓರ್ವ ಆಕಾಂಕ್ಷಿ ತಮ್ಮ ಆಪ್ತರ ಜೊತೆಗೆ ಬೆಂಗಳೂರಿಗೆ ತೆರಳಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡುವ ಮೂಲಕ ತಮ್ಮನ್ನು ಇದೊಂದು ಅವಧಿಗೆ ಸಂಕೇಶ್ವರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 

    ಒಂದು ಕಡೆಯಲ್ಲಿ ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕೈ ಕೈ‌ ಮಿಲಾಸುವ ಕಾರ್ಯ ಕಾರ್ಯಕರ್ತರು ಮಾಡುತ್ತಿದ್ದರೆ ಇತ್ತ ಸಂಕೇಶ್ವರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಗುದ್ದಾಟ ಆರಂಭವಾಗಿದೆ. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅದೃಷ್ಟ ಲಕ್ಷ್ಮೀ ಯಾತಿಗೆ ಒಲಿಯಲಿದ್ದಾಳೆ ಎಂಬುದನ್ನು ಕಾದು ನೋಡಬೇಕಿದೆ.

     

    

ಸುದ್ದಿ ಓದಿ