ಚಿಕ್ಕೋಡಿ

ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಅಭಿಯಾನ

ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಅಭಿಯಾನ

ಮಾಂಜರಿ  31:  ಚಿದಾನಂದ ಬಸಪ್ರಭು ಸಹಕಾರಿ ಸಕ್ಕರೆ ಕಾರಖಾನೆಯ ಆಶ್ರಯದಲ್ಲಿ ಹಮ್ಮಿಕೊಂಡ “ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ" ಹಾಗೂ ಹತೋಟಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೇರೂರ ಗ್ರಾಮದ ರೈತ ಸದಸ್ಯರಾದ ಮಹೇಶ, ರೇಂದಾಳೆ, ಚಿದಾನಂದ, ರೇಂದಾಳೆ ಇವರ ಜಮೀನನಲ್ಲಿ ಇಂದು ಗೊಣ್ಣೆ ಹುಳುವಿನ ಹತೋಟಿಗಾಗಿ ಪ್ರಾತ್ಯಕ್ಷಿ ದ್ವೀಪದ ಬಲೆಯನ್ನು ಅಳವಡಿಲಾಗಿತ್ತು. 

     ಈ ಸಂದರ್ಭದಲ್ಲಿ ಕಾರಖಾನೆಯ ಅಭಿವೃದ್ಧಿ ಅಧಿಕಾರಿ ಸಚಿನ ಮೊಪಗಾರ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಮಳೆ ಹಾಗೂ ನೀರಿನ ಅಭಾವ ಇರುವದರಿಂದ  ಗೋಣ್ಣೆ ಹುಳುವಿನ ಪ್ರಭಾವ ಜಾಸ್ತಿ ಆಗುತ್ತಿದೆ. ಇದರ ಹತೋಟಿಯನ್ನು ಕೈಗೊಳ್ಳಲು ಪ್ರತಿಯೊಬ್ಬ ರೈತರು ಮುಂದಾಗಬೇಕು,  ಅವರ ಜಮೀನಲ್ಲಿ ಇರುವ ಬೇವಿನ ಮರದ ಕೆಳಗೆ ವಿದ್ಯುತ್ ದ್ವೀಪದ ಬಲೆಯನ್ನು ಹಾಕಿ ಅದರ ಕೇಳಗಡೆ ನೀರಿನ ಹೊಂಡ ಮಾಡಬೇಕು.   ಗೊಣ್ಣೆ ಹುಳಗಳು ರಾತ್ರಿ ದ್ವೀಪದ ಬೆಳಕಿಗೆ ಬಂದು ನೀರಿನ ಬಿದ್ದು ಸಾಯುತ್ತವೆ.   

     ಗೊಣ್ಣೆ ಹುಳದ ಬಾಧೆವು ಒಂದು ವೇಳೆ ಮಳೆ ಮೇ ಜೂನ್ ತಿಂಗಳಲ್ಲಿ ಮಳೆ ಆಗದೆ ಇದ್ದರೆ ಅತಿಯಾದ ಹಾನಿ ಸಂಭವವಿದೆ. ಇದನ್ನು ತಡೆಗಟ್ಟಲು ಎರಡು ಕೆಲಸಗಳನ್ನು ಸದ್ಯ ಮಾಡಬೇಕಾಗಿರುತ್ತದೆ. 

     ಮೊದಲನೆಯದು  ಹುಳದ ಬಾಧೆ ಇರುವ ಎಲ್ಲ ಕ್ಷೇತ್ರಗಳಲ್ಲಿ ಪ್ರತಿ ಒಬ್ಬ ರೈತರು ದೀಪಾಕರ್ಷಣೆ ಬೆಲೆಯನ್ನು ಹಾಕಬೇಕು. ಎರಡನೆಯದು 500 ಕೆ.ಜಿ ತಿಪ್ಪೆ ಗೊಬ್ಬರದಲ್ಲಿ 5 ಕೆಜಿ ಮೇಟರೈಜಿಯಮ್ ವನ್ನು ಹಾಕಿ ಅದನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಒಂದು ನೆರಳು ಇರುವಂತಹ ಪ್ರದೇಶದಲ್ಲಿ 8ದಿನ ಗೋಣಿಚೀಲ ಹಸಿಮಾಡಿ ಮುಚ್ಚಿಟ್ಟು ಆಮೇಲೆ ಹೊಲಕ್ಕೆ ಹಾಕಬೇಕು. ಆಗ  ಗೋಣ್ಣೆ ಹುಳುವಿನ ಹತೋಟಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

     ಕಾರಖಾನೆಯ ಮೆಲ್ವಿಚಾರಕ ಎನ್‌.ಆಯ್‌.ಪಾಟೀಲ, ಅಭಿವೃದ್ಧಿ ಅಧಿಕಾರಿ ರಾಹುಲ ಇಚಲಕರಂಜೆ, ಆರ್‌.ಎ.ಬಿವಸೆ, ಅನಿಲ ಕಂಚನಾಳೆ, ಮಹೇಶ ರೇಂದಾಳೆ, ರಾಹುಲ್ ಜಾದವ್, ಸಚಿನ್ ಮೋಪಗಾರ, ಎನ್ ಐ ಪಾಟೀಲ, ಚಿದಾನಂದ ರಂದಾಳೆ ಉಪಸ್ಥಿತರಿದ್ದರು. 


ಸುದ್ದಿ ಓದಿ