ಪ್ರತಿಯೊಂದು ಹಳ್ಳಿಯಲ್ಲಿ ಸಮಗ್ರ ಅಭಿವೃದ್ಧಿ: ಐಹೊಳೆ
ಚಿಕ್ಕೋಡಿ 05: ರಾಯಬಾಗ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಗ್ರಾಮದ ಮೂಲಭೂತ ಸೌಲಭ್ಯಕ್ಕೆ ಮೊದಲು ಆಧ್ಯತೆ ನೀಡಿ ಜನರ ಸಮಸ್ಯೆಗಳನ್ನು ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಕರೋಶಿ, ವಡ್ರಾಳ ಮತ್ತು ಹತ್ತರವಾಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಡ್ರಾಳ ಗ್ರಾಮದ ಶುದ್ದ ಕುಡಿಯುವ ನೀರಿನ ಯೋಜನೆಗೆ 1.80 ಕೋಟಿ ರೂ. ಹತ್ತರವಾಟ ಗ್ರಾಮಕ್ಕೆ 1.80ಕೋಟಿ ರೂ ಅನುದಾನ ಮಂಜೂರಾಗಿದೆ. ಪ್ರತಿಯೊಬ್ಬರು ಶುದ್ದ ಕುಡಿಯುವ ನೀರು ಸೇವಿಸಲು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ ಎಂದರು.
ಕರೋಶಿ ಗ್ರಾಮದಲ್ಲಿ ಇಂಚಗೇರಿ ಮಾಧವಾನಂದ ಪ್ರಭುಜಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ. ಹತ್ತರವಾಟ ಗ್ರಾಮದ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣಕ್ಕೆ 14 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು.
ರಾಯಬಾಗ ಮತಕ್ಷೇತ್ರದಲ್ಲಿ ಕಳೆದ 15 ವರ್ಷದಿಂದ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿರುವ ಪರಿಣಾಮ ಕ್ಷೇತ್ರದ ಜನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಆನರ ಆಶೋತ್ತರಗಳಿಗೆ ಸ್ಪಂಧಿಸುವ ಕೆಲಸ ಮಾಡಲಾಗಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೂರು ಮಾಡಲಾಗಿದೆ. ಹೈಟಿಕ್ ರಸ್ತೆಗಳನ್ನಾಗಿ ಮಾಡಲಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಸಮುದಾಯ ಭವನ, ಚರಂಡಿ ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂತ್ರಾಮ ಕುಂಡ್ರುಕ. ಮುತ್ತು ಮದಿಹಳ್ಳಿ. ದುಂಡಪ್ಪ ತಂಗೋಡೆ. ಯಲ್ಲಪ್ಪ ಮದಿಹಳ್ಳಿ. ವಿಜಯ ಕೊಠಿವಾಲೆ. ಸಿದ್ರಾಮ ಮದಿಹಳ್ಳಿ. ಬಸವರಾಜ ಮಾಳಗೆ. ನ್ಯಾಯವಾದಿ ರವಿ ಹಿರೆಕೋಡಿ.ರಾಯಗೌಡ ಕೆಳಗಿನಮನಿ. ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಕೋಳಿ. ಪಿಡಿಒ ಪ್ರಭು ಚನ್ನೂರ ಮುಂತಾದವರು ಇದ್ದರು.